ಬ್ಲಾಕ್ ಫ್ರೈಡೇ ಸೇಲ್: ದಾಖಲೆ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಸೇಲ್..!
ಅಮೆರಿಕಾದಲ್ಲಿ ನಡೆದ ಬ್ಲಾಕ್ ಫ್ರೈಡೇ ಸೇಲ್ ವಿಶ್ವದ ಗಮನವನ್ನು ಸೆಳೆಯುವಲ್ಲಿ ಯಶಸ್ವಯಾಗಿದ್ದು, ಈ ಸೇಲ್ ದಾಖಲೆಯೊಂದಕ್ಕೆ ಪಾತ್ರವಾಗಿದ್ದು, ಶುಕ್ರವಾರದಂದು ಅಮೆರಿಕಾದಲ್ಲಿ ದಾಖಲೆ ಪ್ರಮಾಣದ ಸ್ಮಾರ್ಟ್ ಫೋನ್ ಮಾರಾಟವಾಗಿದೆ ಎನ್ನಲಾಗಿದೆ.

ಓದಿರಿ: GST ಇಳಿಕೆ: ಮತ್ತಷ್ಟು ಕಡಿಮೆ ಆಯ್ತು ಶಿಯೋಮಿ ವಸ್ತುಗಳು..!
ಈ ಕುರಿತು ಅಂಕಿ-ಅಂಶಗಳನ್ನು ಅಡೋಬ್ ಡಿಜಿಟಲ್ ಬಿಡುಗಡೆ ಮಾಡಿದ್ದು, ಈ ವರದಿಯ ಪ್ರಕಾರ ಮೊಬೈಲ್ ಮಾರಾಟ ದಾಖಲೆಯ ಮಟ್ಟ ತಲುಪಿದೆ. 1.57 ಬಿಲಿಯನ್ ಮೊಬೈಲ್ ಫೋನ್‌ಗಳು ಮಾರಾಟವಾಗಿದ್ದು, ಇತಿಹಾಸದಲ್ಲಿ ಇಷ್ಟು ಪ್ರಮಾಣದ ಮೊಬೈಲ್ ಮಾರಾಟವಾಗಿರಲಿಲ್ಲ ಎನ್ನಲಾಗಿದೆ.

ಬ್ಲಾಕ್ ಫ್ರೈಡೇ ಭಾರೀ ಸೇಲ್:
ಬ್ಲಾಕ್ ಫ್ರೈಡೇ ಅಂಗವಾಗಿ ಎಲ್ಲರಿಗೂ ರಜೆ ನೀಡಲಾಗುತ್ತದೆ. ಅಲ್ಲದೇ ಅಂದು ಭಾರೀ ಪ್ರಮಾಣದ ಆಫರ್‌ಗಳನ್ನು ಎಲ್ಲೇಡೆ ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ದಾಖಲೆ ಪ್ರಮಾಣದ ಮಾರಾಟವಾಗಿದೆ ಎನ್ನಲಾಗಿದೆ.

ಯೂರೋಪ್‌ನಲ್ಲೂ:
ಬ್ಲ್ಯಾಕ್ ಫ್ರೈಡೆ ಅಂಗವಾಗಿ ಯುಕೆ, ಜರ್ಮನಿ, ಫ್ರಾನ್ಸ್, ಇಟಾಲಿ ಗಳಲ್ಲಿಯೂ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಹೆಚ್ಚಾಗಿದ್ದು, ಇದರಲ್ಲಿ ಬಹುಪಾಲು ಸ್ಮಾರ್ಟ್ ಫೋನ್ ಗಳೇ ಮಾರಾಟವಾಗಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಆನ್‌ಲೈನ್-ಆಫ್ ಲೈನ್ ಮಾರಾಟ:
ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ಮಾರುಕಟ್ಟೆಗಳಲ್ಲಿಯೂ ಭಾರೀ ಪ್ರಮಾಣದ ಆಫರ್ ಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಜನರು ಮುಗಿ ಬಿದ್ದು ವಸ್ತುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಭಾರತೀಯರು ಸಹ ಆನ್‌ಲೈನಿನಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ.


Click it and Unblock the Notifications