Smartphones: ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು! ಇವುಗಳ ಬೆಲೆ ಎಷ್ಟು?
ಸ್ಮಾರ್ಟ್‌ಫೋನ್‌ಗಳ (Smartphones) ವಿಭಾಗದಲ್ಲಿ ಬ್ಯಾಟರಿ ಆಧಾರಿತ ಫೋನ್‌ಗಳಿಗೆ ಇದೀಗ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಬ್ರ್ಯಾಂಡ್‌ಗಳು ಫೋನ್‌ಗಳನ್ನು ಲಾಂಚ್ ಮಾಡುವ ಮುನ್ನವೇ ಚಾರ್ಜರ್ ಬಗ್ಗೆ ಅಥವಾ ಬ್ಯಾಟರಿ ಬಗ್ಗೆ ಲೇವಡಿ ಮಾಡುತ್ತಲೇ ಇರುತ್ತವೆ.
ಹೌದು, ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಕ್ಯಾಮೆರಾ, ಪ್ರೊಸೆಸರ್, ಡಿಸ್‌ಪ್ಲೇ ಕಡೆ ಗಮನಹರಿಸುವಂತೆ ಬ್ಯಾಟರಿ (Battery) ಬಗ್ಗೆಯೂ ಹೆಚ್ಚಿನ ಗಮನಹರಿಸಲಾಗುತ್ತದೆ. ಈ ನಡುವೆ ಬ್ಯಾಟರಿಗಿಂತ ಚಾರ್ಜರ್ ಕಡೆಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಈ ವಿಭಾಗದಲ್ಲಿ ಅಂದರೆ ಕ್ಷಣಮಾತ್ರದಲ್ಲಿ ಚಾರ್ಜ್ ಆಗುವ ಫೋನ್‌ಗಳ ವಿಭಾಗದಲ್ಲಿ ಶಿಯೋಮಿ, ಐಕ್ಯೂ, ವಿವೋ ಫೋನ್‌ಗಳನ್ನು ಕಾಣಬಹುದಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು 120 ವ್ಯಾಟ್ಸ್‌ವರೆಗೂ ಚಾರ್ಜಿಂಗ್ ಬೆಂಬಲ ಪಡೆದಿವೆ ಅನ್ನೋದನ್ನು ಗಮನಿಸೋಣ.

ಶಿಯೋಮಿ ರೆಡ್ಮಿ ನೋಟ್ 12 ಪ್ರೊ ಪ್ಲಸ್ 5G : ಈ ಸ್ಮಾರ್ಟ್‌ಫೋನ್ (Xiaomi Redmi Note 12 Pro Plus 5G) ಅನ್ನು 27,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಬಲ ಪಡೆದಿದ್ದು, 8 GB RAM ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಹಾಗೆಯೇ 6.67 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 200 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 4980 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.
ಐಕ್ಯೂ ನಿಯೋ 7: ಈ ಸ್ಮಾರ್ಟ್‌ಫೋನ್ (IQOO Neo 7) ನಿಮಗೆ 27,999 ರೂ.ಗಳ ದರದಲ್ಲಿ ಲಭ್ಯ ಇರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ ಬಲ ಪಡೆದಿದ್ದು,12 GB RAM ಸ್ಟೋರೇಜ್ ಆಯ್ಕೆಯನ್ನು ಕಾಣಬಹುದಾಗಿದೆ. ಹಾಗೆಯೇ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೆಟ್ ಪಡೆದಿದೆ. ಇದರ ಜೊತೆಗೆ 64 MP + 2 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ಶಿಯೋಮಿ 11i ಹೈಪರ್‌ಚಾರ್ಜ್: ಈ ಫೋನ್ (Xiaomi 11i Hypercharge) 22,890 ರೂ.ಗಳ ಬೆಲೆ ಹೊಂದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು 6.67 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 108 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾದ ಜೊತೆಗೆ 4500 mAh ಸಾಮರ್ಥ್ಯದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ರಿಯಲ್‌ಮಿ 12 ಪ್ರೊ ಪ್ಲಸ್: ಈ ಫೋನ್ (Realme 12 Pro Plus) ಅನ್ನು ನೀವು 28,610 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 7S ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 6.7ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 50 MP + 8 MP + 64 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಉಳಿದಂತೆ ಈ ಫೋನ್ ಸೂಪರ್ ವೂಕ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ.

ಪೊಕೊ X6 ಪ್ರೊ: ಈ ಸ್ಮಾರ್ಟ್‌ಫೋನ್ (Poco X6 Pro) 25,999 ರೂ.ಗಳ ಬೆಲೆ ಹೊಂದಿದೆ. ಅಂತೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ 6.67 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 64 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಟರ್ಬೊ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.


Click it and Unblock the Notifications








