ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಫೈಟ್ ನೀಡಲಿದೆ ಸೋನಿಯ ಹೊಸ ಸ್ಮಾರ್ಟ್‌ಫೋನ್.!!
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿರುವ ಜನಪ್ರಿಯ ಸೋನಿ ಕಂಪನಿಯು ಸ್ಮಾರ್ಟ್‌ಫೋನ್ ತಯಾರಿಕೆಯತ್ತ ಗಮನ ಕಡಿಮೆಮಾಡಿದ್ದ, ಕಂಪನಿ ಇತ್ತೀಚಿಗಷ್ಟೆ 52 ಮೆಗಾಪಿಕ್ಸಲ್ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿತ್ತು. ಇದೀಗ ಕಂಪನಿಯು ಗ್ರಾಹಕರಿಗೆ ಮತ್ತೊಂದು ಹುಬ್ಬೆರಿಸುವ ಸುದ್ದಿಯೊಂದನ್ನು ನೀಡಿದೆ.

ಹೌದು, ಸೋನಿ ಕಂಪನಿಯು 'ಎಕ್ಸ್‌ಪಿರಿಯಾ L3' ಹೆಸರಿನ ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸುವ ಹುಮ್ಮಸಿನಲ್ಲಿದೆ. ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್ ಆಗಿರುವದರಿಂದ ಇದೊಂದು ಬಜೆಟ್ ದರದ ಸ್ಮಾರ್ಟ್‌ಫೋನ್ ಆಗಿರಲಿದೆ. ಸೋನಿ ತನ್ನ 'ಎಕ್ಸ್‌ಪಿರಿಯಾ L3' ಸ್ಮಾರ್ಟ್‌ಫೋನ್ ಅನ್ನು ಹೊರ ತರುವುದರೊಂದಿಗೆ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸೌಂಡ್ ಮಾಡಲಿದೆ.

ಸೋನಿ ಕಂಪನಿಯ 'ಎಕ್ಸ್‌ಪಿರಿಯಾ L3' ಗ್ರ್ಯಾಂಡ್ ಎಂಟ್ರಿಯ ಮೂಲಕ ಮಾರುಕಟ್ಟೆಯಲ್ಲಿರುವ ಇತರೆ ಮಿಡ್ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್ ಕಂಪನಿಗಳಾದ ಶಿಯೋಮಿ, ವೀವೊ, ಒಪ್ಪೊ ಗಳಿಗೆ ಪ್ರಬಲ ಪ್ರತೀ ಸ್ಪರ್ಧಿ ಆಗಲಿದೆ ಎನ್ನಲಾಗುತ್ತಿದೆ. ಹಾಗಾದರೇ ಸೋನಿ 'ಎಕ್ಸ್‌ಪಿರಿಯಾ L3' ಎಂಟ್ರಿ ಲೆವಲ್ ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಬಿಗ್ ಫೀಚರ್ಸ್‌ಗಳನ್ನು ಗ್ರಾಹಕರಿಗೆ ಪರಿಚಯಿಸಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಿನ್ಯಾಸ ಹೇಗಿರಲಿದೆ
ಸೋನಿಯ 'ಎಕ್ಸ್‌ಪಿರಿಯಾ L3 ಸ್ಮಾರ್ಟ್‌ಫೋನ್ ನೋಡಲು ಕ್ಲಾಸಿಕ್ ಲುಕ್‌ನಲ್ಲಿ ಕಂಡುಬರಲಿದ್ದು, ಈ ಸ್ಮಾರ್ಟ್‌ಫೋನ್ ನಾಲ್ಕು ಮೂಲೆಗಳ ಅಂಚು ಕರ್ವ್ ಆಕಾರ ಪಡೆದಿವೆ. ಡಿಸ್‌ಪ್ಲೇ ಪಕ್ಕದಲ್ಲಿ ಪಟ್ಟಿಯಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ನೀಡಿದ್ದು, ಹಿಂಭಾಗದಲ್ಲಿ ಎಡಗಡೆ ಕ್ಯಾಮೆರಾವನ್ನು ಮತ್ತು ಫ್ಲ್ಯಾಶ್‌ಲೈಟ್ ಅನ್ನು ನೀಡಲಾಗಿದೆ. ಹಿಂಬದಿಯ ಮಧ್ಯದಲ್ಲಿ ಕಂಪನಿಯ ಹೆಸರನ್ನು ನಮೂದಿಸಲಾಗಿದೆ.

ಡಿಸ್‌ಪ್ಲೇ
ಸೋನಿ ಕಂಪನಿಯು 'ಎಕ್ಸ್‌ಪಿರಿಯಾ L3' ಸ್ಮಾರ್ಟ್‌ಫೋನಿನಲ್ಲಿ 720 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 5.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ನೀಡಿದ್ದು, ಈ ಡಿಸ್‌ಪ್ಲೇಯು 18:9 ಅನುಪಾತವನ್ನು ಹೊಂದಿರಲಿದೆ. ಬಿಗ್ ಡಿಸ್‌ಪ್ಲೇ ನೀಡಿರುವುದು ವಿಶೇಷ. ಏಕೆಂದರೇ ಸೋನಿಯು ತನ್ನ ಈ ಮೊದಲಿನ ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ಗಳಿಗೆ ದೊಡ್ಡ ಗಾತ್ರದ ಡಿಸ್‌ಪ್ಲೇ ನೀಡಿರಲಿಲ್ಲ.

ಪ್ರೊಸೆಸರ್
'ಸೋನಿ ಎಕ್ಸ್‌ಪಿರಿಯಾ L3' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಪ್ರೊಸೆಸರ್ ಹೊಂದಿರಲಿದ್ದು, ಇದರೊಂದಿಗೆ 3GB ಶಕ್ತಿಯ RAM ಮತ್ತು 32 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನೂ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ 8.1 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನಿನಲ್ಲಿ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದ್ದು, ಅವು ಕ್ರಮವಾಗಿ 13MP + 2MP ಸಾಮರ್ಥ್ಯವನ್ನು ಹೊಂದಿರಲಿವೆ. ಮುಂಬದಿಯಲ್ಲಿ ಸೆಲ್ಫಿ ಕ್ಲಿಕ್‌ಗಾಗಿ 8 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗುವುದು ಎನ್ನಲಾಗಿದೆ. ಇದರೊಂದಿಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256 GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಬ್ಯಾಟರಿ ಶಕ್ತಿ ಹೇಗಿದೆ?
ಸೋನಿ ಕಂಪನಿಯ ಬರಲಿರುವ ಹೊಸ 'ಎಕ್ಸ್‌ಪಿರಿಯಾ L3' ಸ್ಮಾರ್ಟ್‌ಫೋನ್ 3,300mAh ಸಾಮರ್ಥ್ಯವಿರುವ ಬ್ಯಾಟರಿಯನ್ನು ಹೊಂದಿರಲಿದ್ದು, ದೀರ್ಘಕಾಲದವರೆಗೂ ಬಾಳುವ ಅತ್ಯುತ್ತಮ ಬ್ಯಾಟರಿ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಉತ್ತಮ ಚಾರ್ಜರ್ ಅನ್ನು ಸಹ ಕಾಣಬಹುದಾಗಿದೆ.

ಬೆಲೆ?
'ಸೋನಿ ಎಕ್ಸ್‌ಪಿರಿಯಾ L3' ಸ್ಮಾರ್ಟ್‌ಫೋನ್ ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಗ್ರೇ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗುತ್ತಿದ್ದು, ಈ ಸ್ಮಾರ್ಟ್‌ಫೋನಿನ ಬೆಲೆಯು 16,000ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಕಂಪನಿಯು ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.


Click it and Unblock the Notifications








