ಸೋನಿ 'ಎಕ್ಸ್‌ಪಿರಿಯಾ 1':ವಿಶ್ವದ ಮೊದಲ '4K OLED' ಡಿಸ್‌ಪ್ಲೇ ಸ್ಮಾರ್ಟ್‌ಫೋನ್.!!

|

ಇತ್ತೀಚಿಗೆ ಸೋನಿ ಕಂಪನಿಯು ತನ್ನ ಜನಪ್ರಿಯ ಎಕ್ಸ್‌ಪಿರಿಯಾ ಸರಣಿಯಲ್ಲಿ ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಘೋಷಣೆ ಮಾಡುವ ಮೂಲಕ ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ ಮರುಪ್ರವೇಶ ಪಡೆದಿದೆ. ಅವುಗಳಲ್ಲಿ ಹೈ ಎಂಡ್‌ ಫೀಚರ್ಸ್‌ಗಳನ್ನು ಹೊಂದಿರುವ 'ಸೋನಿ ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್‌ '4K OLED' ಡಿಸ್‌ಪ್ಲೇ ಹೊಂದಿದ್ದು, ಇದು ವಿಶ್ವದಲ್ಲಿಯೇ ಮೊಟ್ಟ ಮೊದಲ '4K OLED' ಡಿಸ್‌ಪ್ಲೇ ಹೊಂದಿದ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.

ಸೋನಿ 'ಎಕ್ಸ್‌ಪಿರಿಯಾ 1':ವಿಶ್ವದ ಮೊದಲ '4K OLED' ಡಿಸ್‌ಪ್ಲೇ ಸ್ಮಾರ್ಟ್‌ಫೋನ್.!!

'ಸೋನಿ ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್ 3,840 x 1,644 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದರ ಡಿಸ್‌ಪ್ಲೇ ರಚನೆಯ ಅನುಪಾತವು 21:9 ಆಗಿರಲಿದೆ. ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯ ಹೈ ಪಿಕ್ಸಲ್ ಸಾಮರ್ಥ್ಯವು, ದೃಶ್ಯಗಳು HDR ಕ್ವಾಲಿಟಿಯ ಗುಣಮಟ್ಟದಲ್ಲಿ ಮೂಡಿಬರಲು ಸಹಕರಿಸಲಿದೆ. ಮತ್ತು ಸೋನಿಯು ಮೊದಲ ಬಾರಿ ತ್ರಿವಳಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಮೂಲಕ ಪರಿಚಯಿಸಲಿದೆ.

ಸೋನಿ 'ಎಕ್ಸ್‌ಪಿರಿಯಾ 1':ವಿಶ್ವದ ಮೊದಲ '4K OLED' ಡಿಸ್‌ಪ್ಲೇ ಸ್ಮಾರ್ಟ್‌ಫೋನ್.!!

ಈ ಸ್ಮಾರ್ಟ್‌ಫೋನಿನಲ್ಲಿ ಕಂಪನಿಯು 'ಡಾಲ್ಬಿ ಅಟ್ಮಾಸ್ ಸೌಂಡ್' ಪರಿಚಯಿಸಲಿದ್ದು, ಇದರೊಟ್ಟಿಗೆ 6GB RAM ಪವರ್‌ನೊಂದಿಗೆ 128GB ಆಂತರಿಕ ಸ್ಥಳವಕಾಶವನ್ನು ಒದಗಿಸಲಾಗಿದೆ. ಇನ್ನೂ ಪ್ರಸ್ತುತ ಚಾಲ್ತಿ ಇರುವ 'ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್' ಅನ್ನು ಸಹ ಈ ಸ್ಮಾರ್ಟ್‌ಫೋನಿಗೆ ನೀಡಲಿದೆ. ಹಾಗಾದರೇ 'ಸೋನಿ ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್ ಇನ್ನಿತರೆ ಏನೆಲ್ಲಾ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

4K ಡಿಸ್‌ಪ್ಲೇ

4K ಡಿಸ್‌ಪ್ಲೇ

'ಸೋನಿ ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್ 3,840 x 1,644 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಸಿನಿಮಾವೈಲ್ಡ್ ಡಿಸ್‌ಪ್ಲೇ ಆಕಾರವನ್ನು ಒಳಗೊಂಡಿದೆ. ಸೋನಿ ಈಗಾಗಲೇ ತನ್ನ ಸ್ಮಾರ್ಟ್‌ಟಿವಿಗಳಲ್ಲಿ OLED ಡಿಸ್‌ಪ್ಲೇಯನ್ನು ಪರಿಚಯಿಸಿದ್ದು, ಅದೇ 4K ಗುಣಮಟ್ಟದ ಡಿಸ್‌ಪ್ಲೇಯನ್ನು ಈ 'ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್ ಹೊಂದಿರಲಿದೆ ಎನ್ನಲಾಗಿದೆ.

ಪ್ರೊಸೆಸರ್

ಪ್ರೊಸೆಸರ್

'ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ನೀಡಿದ್ದು, ಹೈ ಡೇಟಾ ಬೇಡುವ ಯಾವುದೇ ಗೇಮ್ ಅನ್ನು ಆಟಬಹುದಾಗಿದೆ. ಈ ಪ್ರೊಸೆಸರ್‌ ಮಲ್ಟಿಟಾಸ್ಕ್ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೇ ನಿರ್ವಹಿಸುವ ಶಕ್ತಿಯನ್ನು ಸ್ಮಾರ್ಟ್‌ಫೋನಿಗೆ ಒದಗಿಸಲಿದೆ. ಇನ್ನೂ 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಸೋನಿ ಮೊದಲ ಬಾರಿಗೆ ಮೂರು ಕ್ಯಾಮೆರಾಗಳನ್ನು ಪರಿಚಯಿಸಿದ್ದು, ಈ ಮೂರು ಕ್ಯಾಮೆರಾಗಳು 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಪ್ರಮುಖ ಕ್ಯಾಮೆರಾ SteadyShot ಲೆನ್ಸ್ ಹೊಂದಿದ್ದು, ಉಳಿದೆರಡು ಟೆಲಿಪೋಟೋ ಲೆನ್ಸ್ ಮತ್ತು ಅಲ್ಟ್ರಾ ವೈಲ್ಡ್ ಲೆನ್ಸ್‌ಗಳನ್ನು ಹೊಂದಿದೆ. ಇನ್ನೂ ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ

ಬ್ಯಾಟರಿ

'ಸೋನಿ ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್ 3,330mAh ಶಕ್ತಿ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸೋನಿ ಹೊಸದಾಗಿ ಬ್ಯಾಟರಿ ಕೇರ್ ಮತ್ತು ಸ್ಮಾರ್ಟ್‌ ಸ್ಟೇಮಿನಾ ಮೋಡ್ ಆಯ್ಕೆಗಳನ್ನು ಪರಿಚಯಿಸಿದ್ದು, ಇವು ಬ್ಯಾಟರಿಯ ರಕ್ಷಣೆ ಮತ್ತು ಸುರಕ್ಷತೆಗೆ ಸಹಾಯಕ ಆಗಿವೆ.

ಲಭ್ಯತೆ ಮತ್ತು ಬೆಲೆ?

ಲಭ್ಯತೆ ಮತ್ತು ಬೆಲೆ?

ಇತ್ತೀಚಿಗೆ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ಕಾರ್ಯಕ್ರಮದಲ್ಲಿ ಸೋನಿ ಕಂಪನಿಯು ತನ್ನ 'ಎಕ್ಸ್‌ಪಿರಿಯಾ 1' ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶಿಸಲಾಗಿದ್ದು, ಇದೇ ವರ್ಷದ ಅಂತ್ಯದೊಳಗೆ ದೊರೆಯಲಿದೆ ಎಂದು ತಿಳಿಸಿದ್ದು, ಇದರ ಬೆಲೆಯ ಬಗ್ಗೆ ಕಂಪನಿಯು ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Best Mobiles in India

English summary
The Sony Xperia 1 is the evolution of the XZ Premium phones. It features the first-ever 4K OLED display with an extra tall 21:9 aspect ratio as well as Sony’s first triple camera.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X