'ಫಿನಿಕ್ಸ್‌'ನಂತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ 'ಸೋನಿ'ಯ ಹೊಸ ಸ್ಮಾರ್ಟ್‌ಫೋನ್‌ಗಳು!!

|

ಜನಪ್ರಿಯ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪನಿ 'ಸೋನಿ' ಮೊಬೈಲ್‌ಗಳಲ್ಲಿ ಉತ್ತಮ ಕ್ಯಾಮೆರಾ ಕ್ವಾಲಿಟಿಯಿಂದ ಭಾರೀ ಜನಮನ್ನಣೆ ಪಡೆದಿದ್ದ ಕಂಪನಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನಿನತ್ತ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ ಇದೀಗ ಫಿನಿಕ್ಸ್‌ನಂತೆ ಮತ್ತೆ ಮೊಬೈಲ್ ಮಾರುಕಟ್ಟೆಗೆ ಬರಲಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಜ್ಜಾಗಿವೆ.

'ಫಿನಿಕ್ಸ್‌'ನಂತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ 'ಸೋನಿ'ಯ ಈ ಸ್ಮಾರ್ಟ್‌ಫೋನ್‌ಗಳು

ಮುಂದಿನ ವಾರ ನಡೆಯಲಿರುವ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್'(MWC-2019) ರ ಕಾರ್ಯಕ್ರಮದಲ್ಲಿ ಸೋನಿ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶಿಸಲಿದೆ ಎಂದು ಹೇಳಲಾಗುತ್ತಿದೆ. ಸೋನಿ ಎಕ್ಸ್‌ಪಿರಿಯಾ 10, ಎಕ್ಸ್‌ಪಿರಿಯಾ 10 ಪ್ಲಸ್‌, ಎಕ್ಸ್‌ಪಿರಿಯಾ 1 ಮತ್ತು ಎಕ್ಸ್‌ಪಿರಿಯಾ L3 ಹೆಸರಿನ ಒಟ್ಟು ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಹೊರತರಲಿದ್ದು, ಇವುಗಳಲ್ಲಿ ಮಿಡ್‌ ರೇಂಜ್‌ ನಿಂದ ಪ್ರೀಮಿಯಮ್ ದರದ ಸ್ಮಾರ್ಟ್‌ಫೋನ್‌ಗಳಿವೆ.

'ಫಿನಿಕ್ಸ್‌'ನಂತೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ 'ಸೋನಿ'ಯ ಈ ಸ್ಮಾರ್ಟ್‌ಫೋನ್‌ಗಳು

ಸೋನಿ ಎಕ್ಸ್‌ಪಿರಿಯಾ ಸ್ಮಾರ್ಟ್‌ಫೋನ್ ಸರಣಿಯು RAM, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ, ಡಿಸ್‌ಪ್ಲೇ ಗಾತ್ರ, ಸೇರಿದಂತೆ ಹಲವು ಫೀಚರ್ಸ್‌ಗಳಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು, ಇದರೊಂದಿಗೆ ಸೈಡ್‌ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ. ಹಾಗಾದರೇ ಸೋನಿ ಎಕ್ಸ್‌ಪಿರಿಯಾ ಸರಣಿ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಸೋನಿ ಎಕ್ಸ್‌ಪಿರಿಯಾ 10

ಸೋನಿ ಎಕ್ಸ್‌ಪಿರಿಯಾ 10

* 6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ
* ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 630 SoC
* 3 GB RAM
* 64GB ಸಂಗ್ರಹಣೆ (ವಿಸ್ತರಿಸಬಲ್ಲ)
* ಡ್ಯುಯಲ್ 13+8 ಮೆಗಾಪಿಕ್ಸಲ್ ಹಿಂಬದಿ ಕ್ಯಾಮೆರಾಗಳು
* 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
* 2,870mAh ಬ್ಯಾಟರಿ
* ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
* ಆಂಡ್ರಾಯ್ಡ್ ಪೈ

ಸೋನಿ ಎಕ್ಸ್‌ಪಿರಿಯಾ 10 ಪ್ಲಸ್‌

ಸೋನಿ ಎಕ್ಸ್‌ಪಿರಿಯಾ 10 ಪ್ಲಸ್‌

* 6.5 ಇಂಚು ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
* ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 636 SoC
* 4 GB RAM
* 64GB ಸಂಗ್ರಹಣೆ (ವಿಸ್ತರಿಸಬಲ್ಲ)
* ಡ್ಯುಯಲ್ 12+8 ಮೆಗಾಪಿಕ್ಸಲ್ ಹಿಂಬದಿ ಕ್ಯಾಮೆರಾಗಳು
* 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
* 3000 mAh ಬ್ಯಾಟರಿ
* ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
* ಆಂಡ್ರಾಯ್ಡ್ ಪೈ

ಸೋನಿ ಎಕ್ಸ್‌ಪಿರಿಯಾ 1

ಸೋನಿ ಎಕ್ಸ್‌ಪಿರಿಯಾ 1

* 4K HDR OLED ಯೊಂದಿಗೆ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ
* ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 SoC
* 6 GB RAM
* 128 GB ಸಂಗ್ರಹಣೆ (ವಿಸ್ತರಿಸಬಲ್ಲ)
* ಹಿಂಬದಿ 12 ಮೆಗಾಪಿಕ್ಸಲ್ ತ್ರಿವಳಿ ಕ್ಯಾಮೆರಾಗಳು
* 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
* 3300mAh ಬ್ಯಾಟರಿ
* ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
* ಆಂಡ್ರಾಯ್ಡ್ ಪೈ

ಸೋನಿ ಎಕ್ಸ್‌ಪಿರಿಯಾ L3

ಸೋನಿ ಎಕ್ಸ್‌ಪಿರಿಯಾ L3

* 5.7 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ
* ಮೀಡಿಯಾ ಟೆಕ್‌ 6762 SoC
* 3 GB RAM
* ಡ್ಯುಯಲ್ 13+2 ಮೆಗಾಪಿಕ್ಸಲ್ ಹಿಂದಿನ ಕ್ಯಾಮೆರಾಗಳು
* 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
* 3300mAh ಬ್ಯಾಟರಿ
* ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
* ಆಂಡ್ರಾಯ್ಡ್ ಓರಿಯೋ

Most Read Articles
Best Mobiles in India

English summary
Sony’s expected devices have shown up a few times in recent weeks, but now the floodgates have opened and we can see their entire lineup.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X