ಭಾರತದ ಮಾರುಕಟ್ಟೆಗೆ ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ
ಇಲ್ಲಿವರೆಗೆ ಜೆಲ್ಲಿ ಬೀನ್ ಓಎಸ್‌ನಲ್ಲಿ ಸಿಂಗಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದ್ದ ಸೋನಿ ಇದೀಗ ಹೊಸ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಸೋನಿ ಎಕ್ಸ್‌ಪೀರಿಯಾ ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.
ಈ ಹಿಂದೆ ಐಸ್‌ಕ್ರೀಂ ಸ್ಯಾಡ್ವಿಚ್ ಓಎಸ್‌ನಲ್ಲಿ ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್ ಮತ್ತು ಸೋನಿ ಎಕ್ಸ್‌ಪೀರಿಯಾ ಟಿಪು ಡ್ಯುಯಲ್ ಬಿಡುಗಡೆ ಮಾಡಿತ್ತು. ಸದ್ಯ ಭಾರತದ ಮಾರುಕಟ್ಟೆಯಲ್ಲಿ ದೇಶಿಯ ಕಂಪೆನಿಗಳು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನಗಳನ್ನು ದಿನಕ್ಕೊಂದರಂತೆ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೋನಿ ಜೆಲ್ಲಿಬೀನ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಕ್ಟೋಬರ್ ಮೊದಲನೇ ವಾರದಲ್ಲಿ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಗಿಝ್‌ಬಾಟ್ ಹೇಳಿತ್ತು.
ಸೋನಿ ಎಕ್ಸ್‌ಪೀರಿಯಾ ಸಿ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(960 x 540 ಪಿಕ್ಸೆಲ್)
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್4.2.2 ಜೆಲ್ಲಿ ಬೀನ್ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
0.3 ಎಂಪಿ ಮುಂದುಗಡೆ ಕ್ಯಾಮೆರಾ
4 GB ಆಂತರಿಕ ಮಮೋರಿ
1 GB RAM
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್,ಎ-ಜಿಪಿಎಸ್,ಬ್ಲೂಟೂತ್,ವೈಫೈ,ಡಿಎಲ್‌ಎನ್‌ಎಎ
2330 mAh ಬ್ಯಾಟರಿ
ಈ ಹೊಸ ಸ್ಮಾರ್ಟ್‌ಫೋನನ್ನು ಆನ್‌ಲೈನಲ್ಲಿ ಖರೀದಿಸಲು ಟಾಪ್ ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ಬೆಲೆಯನ್ನು ನೋಡಿಕೊಂಡು ಹೋಗಿ ಇಷ್ಟವಾದಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಿ.
ಸೋನಿ ಎಕ್ಸ್‌ಪೀರಿಯಾ ಸಿ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಭಾರತದ ಮಾರುಕಟ್ಟೆಗೆ ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ

ಭಾರತದ ಮಾರುಕಟ್ಟೆಗೆ ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ

ಭಾರತದ ಮಾರುಕಟ್ಟೆಗೆ ಸೋನಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ



Click it and Unblock the Notifications




