ಸೋನಿ ಎಕ್ಸ್‌ಪೀರಿಯಾ L1: 2GB RAM, 13 MP ಕ್ಯಾಮೆರಾ
ಸೋನಿ ಎಕ್ಸ್‌ಪೀರಿಯಾ L1 ಸದ್ಯ ಬಿಡುಗೆಡೆಯಾಗಿದ್ದು, ಕೆಲ ದಿನಗಳಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಮೊನ್ನೆ ನಡೆದ ಮೊಬೈಲ್ ಕಾಂಗ್ರೆಸ್ ಸಮೇವೇಶದಲ್ಲಿ ಟಾಂಪ್ ಎಂಡ್ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಿದ್ದ ಸೋನಿ, ಈ ಬಾರಿ ಆರಂಭಿಕ ಬೆಲೆ ಸ್ಮಾರ್ಟ್‌ಪೋನನ್ನು ಪರಿಚಯಿಸಲು ಮುಂದಾಗಿದ್ದು, ಸೋನಿ ಎಕ್ಸ್‌ಪೀರಿಯಾ L1 ಸದ್ಯ ಬಿಡುಗೆಡೆಯಾಗಿದ್ದು, ಕೆಲ ದಿನಗಳಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಓದಿರಿ: ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!
ಈ ಬಾರಿ ಸೋನಿ ಎಕ್ಸ್‌ಪೀರಿಯಾ L ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಹಾಗಾಗಿಯೇ ಇದು ಈ ಸರಣಿಯ ಮೊದಲನೇ ಪೋನ್ ಆಗಿದೆ. ನಾಳೆಯಿಂದ ಆಮೆರಿಕಾ ಮಾರುಕಟ್ಟೆಯಲ್ಲಿ ಈ ಪೋನು ದೊರೆಯಲಿದ್ದು, ಭಾರತೀಯ ಮಾರುಕಟ್ಟೆಗೆ ಎಂದು ಬರಲಿದೆ ಎಂಬುದನ್ನು ತಿಳಿಸಿಲ್ಲ.
ಓದಿರಿ: ಸೆಲ್ಪಿ ಇತಿಹಾಸವನ್ನೇ ಬದಲಿಸಲಿರುವ ಓಪ್ಪೋ F3 ಪ್ಲಸ್ ಡುಯಲ್ ಸೆಲ್ಫಿ ಕ್ಯಾಮೆರಾ..!!

ಸಿಂಗಲ್ ಮತ್ತು ಡುಯಲ್ ಸಿಮ್ ಆಯ್ಕೆ:
ಸೋನಿ ಎಕ್ಸ್‌ಪೀರಿಯಾ L1 ಸ್ಮಾರ್ಟ್‌ಪೋನ್ ಎರಡು ಮಾದರಿಯಲ್ಲಿ ಲಭ್ಯವಿರಲಿದ್ದು, ಸಿಂಗಲ್ ಸಿಮ್ ಮತ್ತು ಡಬಲ್ ಸಿಮ್ ಮಾದರಿಯಲ್ಲಿ ಬಿಡುಗಡೆಯಾಗಲಿದೆ. ಇದು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಸಿಗಲಿದೆ.

5.5 ಇಂಚಿನ ಪರದೆ:
1280 x 720 p ರೆಸಲ್ಯೂಷನ್ ಗುಣಮಟ್ಟದ 5.5 ಇಂಚಿನ ಪರದೆಸೋನಿ ಎಕ್ಸ್‌ಪೀರಿಯಾ L1 ಸ್ಮಾರ್ಟ್‌ಪೋನಿನಲ್ಲಿದ್ದು, ವಿಡಿಯೋ ಗುಣಮಟ್ಟ ಉತ್ತಮವಾಗಲಿರದ್ದು, ಸೋನಿ ಡಿಸ್‌ಪ್ಲೇ ಬಗ್ಗೆ ಮಾತನಾಡುವಂತೆಯೇ ಇಲ್ಲ.

2 GB RAM, 16 GB ROM:
ಸೋನಿ ಎಕ್ಸ್‌ಪೀರಿಯಾ L1 ಸ್ಮಾರ್ಟ್‌ಪೋನಿನಲ್ಲಿ 2 GB RAM ಅಳವಡಿಸಲಾಗಿದ್ದು, MediaTek MT6737T ಕ್ವಾಡ್ಕೋರ್ 1.4GHzನ ಪ್ರೋಸೆಸರ್ ವೇಗದ ಕಾರ್ಯಚರಣೆ ನಡೆಸಲಿದೆ. ಅಲ್ಲದೇ 16 GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದ್ದು, 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಂಡ್ರಾಯ್ಡ್ ನ್ಯಾಗಾ 7.0:
ಸೋನಿ ಎಕ್ಸ್‌ಪೀರಿಯಾ L1 ಸ್ಮಾರ್ಟ್‌ಪೋನು ನೂತನ ಆಂಡ್ರಾಯ್ಡ್ ನ್ಯಾಗಾ 7.0ದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಇನ್-ಬಿಲ್ಟ್ ಗೂಗಲ್ ಅಸಿಸ್‌ಟೆಂಡ್ ಆಯ್ಕೆಯನ್ನು ಹೊಂದಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

13 MP ಕ್ಯಾಮೆರಾ:
ಸೋನಿ ಎಕ್ಸ್‌ಪೀರಿಯಾ L1 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ LED ಫ್ಲಾಷ್ ಸಮೇತ 13MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ.

ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಹಲವು:
ಸೋನಿ ಎಕ್ಸ್‌ಪೀರಿಯಾ L1 ಸ್ಮಾರ್ಟ್‌ಪೋನಿನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದ್ದು, 4G LTE, Wi-Fi, Bluetooth, GPS, NFC, ಮತ್ತು USB Type-C ಇದೆ.


Click it and Unblock the Notifications





