Subscribe to Gizbot

ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!

Written By:

ರಿಲಿಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರಿಗೆ ಪ್ರೈಮ್ ಸದಸ್ಯರಾಗುವ ಅವಕಾಶವನ್ನು ಮಾಡಿಕೊಟ್ಟಿದ್ದು, ಅದರಂತೆ ವಿವಿಧ ಮೂಲಗಳಿಂದ ಪ್ರೈಮ್ ಸದಸ್ಯತ್ವವನ್ನು ಪಡೆಯಬಹುದಾಗಿದೆ.

ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಸ್ಟೋರ್‌ಗಳಲ್ಲಿ ರಿಚಾರ್ಜ್ ಮಾಡಿಸುವ ಮೂಲಕ, ಜಿಯೋ ಆಪ್‌ನಲ್ಲೇ ಸದಸ್ಯರಾಗುವ ಮೂಲಕ ಹೀಗೆ ವಿವಿಧ ಆಯ್ಕೆಗಳನ್ನು ನೀಡಿತ್ತು ಸದ್ಯ ಅದೇ ಮಾದರಿಯಲ್ಲಿ ಪೇಟಿಎಂ ನಿಂದಲೂ ಪ್ರೈಮ್ ಸದಸ್ಯತ್ವವನ್ನು ಪಡೆಯುವ ಅವಕಾಶ ಮಾಡಿಕೊಟ್ಟಿದ್ದು, ಅದುವೇ ಕ್ಯಾಷ್ ಬ್ಯಾಕ್ ಆಫರ್‌ನೊಂದಿಗೆ.

ಓದಿರಿ: ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಿಂಗಳ ಹಣ ಕ್ಯಾಷ್‌ ಬ್ಯಾಕ್:

ತಿಂಗಳ ಹಣ ಕ್ಯಾಷ್‌ ಬ್ಯಾಕ್:

ಪೇಟಿಎಂ ಆಫರ್ ನಿಂದಾಗಿ ಜಿಯೋ ಗ್ರಾಹಕರು ವರ್ಷದ 12 ತಿಂಗಳೂ ಹಣಕಟ್ಟೆ ಬೇಕಾದರು, ಕ್ಯಾಷ್‌ ಬ್ಯಾಕ್‌ ನಿಂದಾಗಿ 2 ತಿಂಗಳ ಹಣ ತಿರುಗಿಬರಲಿದೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಮತ್ತಷ್ಟು ಲಾಭವಾಗಲಿದೆ.

ಪೇಟಿಎಂ ಕ್ಯಾಷ್ ಬ್ಯಾಕ್:

ಪೇಟಿಎಂ ಕ್ಯಾಷ್ ಬ್ಯಾಕ್:

ಪೇಟಿಎಂ ಮೂಲಕ ಪ್ರೈಮ್ ಸದಸ್ಯತ್ವವನ್ನು ಪಡೆಯವ ಜಿಯೋ ಗ್ರಾಹಕರಿಗೆ ಪೇಟಿಎಂ ಕ್ಯಾಷ್‌ ಬ್ಯಾಕ್ ಆಫರ್‌ ನೀಡಿದ್ದು, ರೂ. 99ಕ್ಕೆ ರೀಚಾರ್ಜ್ ಮಾಡಿಸಿದಲ್ಲಿ ಜಿಯೋ ಗ್ರಾಹಕರಿಗೆ 10 ರೂ.ಗಳ ಕ್ಯಾಷ್‌ ಬ್ಯಾಕ್ ದೊರೆಯಲಿದೆ. ಇದಲ್ಲದೇ ಪ್ರತಿ ತಿಂಗಳು ಜಿಯೋ ಗ್ರಾಹಕರು ಪ್ರೈಮ್ ರಿಚಾರ್ಜ್ ಮಾಡಿಸುವ ಸಂದರ್ಭದಲ್ಲಿಯೂ 30 ರೂ.ಗಳ ಕಡಿತವನ್ನು ಪಡೆಯಬಹುದಾಗಿದೆ.

ಮಾರ್ಚ್ 31 ರ ವರೆಗೂ ಆಫರ್:

ಮಾರ್ಚ್ 31 ರ ವರೆಗೂ ಆಫರ್:

ಈಗಾಗಲೇ ಜಿಯೋ ಪ್ರೈಮ್ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಮಾರ್ಚ್ 31 ರ ವರೆಗೂ ಪ್ರೈಮ್ ಸದಸ್ಯರಾಗಲು ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಮತ್ತಷ್ಟು ಗ್ರಾಹಕರನ್ನು ಪ್ರೈಮ್ ಕಡಗೆ ಸೆಳೆಯಲು ಜಿಯೋ ಪೇಟಿಎಂ ನೊಂದಿಗೆ ಸೇರಿ ಹೊಸ ಆಫರ್ ನೀಡಲು ಮುಂದಾಗಿದೆ. ಕ್ಯಾಷ್‌ ಬ್ಯಾಕ್‌ ನಿಂದಾಗಿ ಗ್ರಾಹಕರು ಹೆಚ್ಚಿನ ಲಾಭ ಪಡೆಯಬಹುದಾಗಿದೆ.

303 ರೂಗಳ ಆಫರ್:

303 ರೂಗಳ ಆಫರ್:

ಸದ್ಯ ಜಿಯೋ 303 ರೂಗಳ ಆಫರ್ ಹೆಚ್ಚು ಮಂದಿಯನ್ನು ಆಕರ್ಷಿಸುತ್ತಿದ್ದು, 28 ದಿನಗಳ ಅವಧಿಗೆ ಪ್ರತಿ ನಿತ್ಯ 1GB ಯಂತೆ 28GB ಡೇಟಾ ದೊರೆಯಲಿದೆ. ಪೇಟಿಎಂನಲ್ಲಿ primjio ಪ್ರೋಮೊ ಕೋಡ್ ಹಾಕುವ ಮೂಲಕ 30 ರೂ, ಕ್ಯಾಷ್‌ ಬ್ಯಾಕ್ ಪಡೆಯಬಹುದಾಗಿದೆ. ಹತ್ತಿರ ಹತ್ತಿರ ಎರಡು ತಿಂಗಳ ರಿಚಾರ್ಜ್ ಮೊತ್ತವನ್ನು ಉಳಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Paytm announced that Jio users could recharge their prepaid connections through the digital payments app. to know more visit knnada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot