Home
ಮೊಬೈಲ್

ಮಾರುಕಟ್ಟೆಗೆ ಹೊಸ ಸೋನಿ ಎಕ್ಸಪೀರಿಯಾ ಸ್ಮಾರ್ಟ್‌ಫೋನ್: ಬೆಲೆ, ವಿಶೇಷತೆಗಳು..!

ಈ ಸ್ಮಾರ್ಟ್‌ಫೋನ್‌ಗಳು ಮೊದಲಿಗೆ ಭಾರತದಲ್ಲಿಯೇ ಲಾಂಚ್ ಆಗುತ್ತಿರುವುದು ಎನ್ನಲಾಗಿದ್ದು, ಆಂಡ್ರಾಯ್ಡ್ 8 ಆಪ್‌ಡೇಟ್ ಸಹ ಈ ಫೋನ್‌ಗಳಿಗೆ ದೊರೆಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸೋನಿಯ ಈ ಫೋನ್‌ಗಳು ಸದ್ದು ಮಾಡುವುದಂತು ಖಂಡಿತ

By Srinidhi

ಸೋನಿ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಮೂಲಕ ಮತ್ತೇ ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಲು ಮುಂದಾಗಿದೆ. ಹೊಸದಾಗಿ ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್ ಮಾರುಕಟ್ಟೆಯನ್ನು ಪ್ರವೇಶಿಸಿವೆ.

ಮಾರುಕಟ್ಟೆಗೆ ಹೊಸ ಸೋನಿ ಎಕ್ಸಪೀರಿಯಾ ಸ್ಮಾರ್ಟ್‌ಫೋನ್: ಬೆಲೆ, ವಿಶೇಷತೆಗಳು..!

ಓದಿರಿ: ಚೀನಾದಲ್ಲೇ ಚೀನಾ ಫೋನ್‌ಗಳಿಗೆ ಕಂಟಕ: ಬಂದಿದೆ ಪಿಲಿಪ್ಸ್ ಸ್ಮಾರ್ಟ್‌ಫೋನ್...!

ಈ ಸ್ಮಾರ್ಟ್‌ಫೋನ್‌ಗಳು ಮೊದಲಿಗೆ ಭಾರತದಲ್ಲಿಯೇ ಲಾಂಚ್ ಆಗುತ್ತಿರುವುದು ಎನ್ನಲಾಗಿದ್ದು, ಆಂಡ್ರಾಯ್ಡ್ 8 ಆಪ್‌ಡೇಟ್ ಸಹ ಈ ಫೋನ್‌ಗಳಿಗೆ ದೊರೆಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸೋನಿಯ ಈ ಫೋನ್‌ಗಳು ಸದ್ದು ಮಾಡುವುದಂತು ಖಂಡಿತ.

ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್ ವಿಶೇಷತೆ:

ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್ ವಿಶೇಷತೆ:

ಈ ಎರಡು ಫೋನಿನಲ್ಲಿ 5.2 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ಅಳವಡಿಸಲಾಗಿದೆ. ಹಿಂಭಾಗದಲ್ಲಿ 13MP ಕ್ಯಾಮೆರಾ ಜೊತೆಗೆ LED ಫ್ಲಾಷ್ ನೀಡಲಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ 2620mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್ ವ್ಯತ್ಯಾಸ:

ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್ ವ್ಯತ್ಯಾಸ:

ಈ ಎರಡು ಫೋನ್‌ಗಳು ಒಂದೇ ಮಾದರಿಯ ವಿಶೇಷತೆಗಳನ್ನು ಒಳಗೊಂಡಿದೆ. ಆದರೆ RAM ಮತ್ತು ಸ್ಟೋರೆಜ್ ಮಾತ್ರವೇ ಬದಲಾವಣೆಯಾಗಲಿದೆ ಎನ್ನಲಾಗಿದೆ. ಎಕ್ಸಪೀರಿಯಾ R1 2GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಎಕ್ಸಪೀರಿಯಾ R1 ಪ್ಲಸ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಒಳಗೊಂಡಿದೆ.

ನವೆಂಬರ್ 10 ರಿಂದ ಮಾರುಕಟ್ಟೆಗೆ:

ನವೆಂಬರ್ 10 ರಿಂದ ಮಾರುಕಟ್ಟೆಗೆ:

ಮಾರುಕಟ್ಟೆಯಲ್ಲಿ ಈ ಫೋನ್‌ಗಳು ನವೆಂಬರ್ 10 ರಿಂದ ಕಾಣಿಸಿಕೊಳ್ಳಲಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಎಲ್ಲಾ ಮೊಬೈಲ್ ಶಾಪ್ ಗಳಲ್ಲಿಯೂ ಈ ಫೋನ್ ದೊರೆಯಲಿದ ಎನ್ನಲಾಗಿದೆ.

ಅಮೆಜಾನ್‌ನಲ್ಲಿ ಆಫರ್:

ಅಮೆಜಾನ್‌ನಲ್ಲಿ ಆಫರ್:

ಈ ಪೋನ್ ಅನ್ನು ಶುಕ್ರವಾರದಿಂದ ಅಮೆಜಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರೀ ಬುಕ್ ಮಾಡಿದವರಿಗೆ ಸ್ಪೆಷಲ್ ಆಫರ್ ಸಹ ದೊರೆಯಲಿದೆ. ಇದು ಅಮೆಜಾನ್ ನಲ್ಲಿ ಖರೀದಿಸುವವರಿಗೆ ಮಾತ್ರವೇ ಎನ್ನಲಾಗಿದೆ.

ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್  ಬೆಲೆ:

ಎಕ್ಸಪೀರಿಯಾ R1 ಮತ್ತು ಎಕ್ಸಪೀರಿಯಾ R1 ಪ್ಲಸ್ ಬೆಲೆ:

ಎಕ್ಸಪೀರಿಯಾ R1 ಸ್ಮಾರ್ಟ್‌ಫೋನ್ ಬೆಲೆಯೂ ರೂ.12,990 ಆಗಿದ್ದು, ಇದೇ ಮಾದರಿಯಲ್ಲಿ ಎಕ್ಸಪೀರಿಯಾ R1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆಯೂ ರೂ.14,990 ಆಗಲಿದೆ ಎನ್ನಲಾಗಿದೆ.

Best Mobiles in India

English summary
Sony Xperia R1 Plus, Xperia R1 Mid-Range Smartphones. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+