ಸೋನಿ ಪರಿಚಯಿಸಲಿದೆ 52MP ಕ್ಯಾಮೆರಾ ಸ್ಮಾರ್ಟ್‌ಫೋನ್..!!
ವಿಶ್ವ ಮಾರುಕಟ್ಟೆಯಲ್ಲಿ ಚಿರಪರಿಚಿತ ಹೆಸರನ್ನು ಪಡೆದಿರುವ ಸೋನಿ ಕಂಪನಿಯು, ಮೊದಲಿನಿಂದಲೂ ಉತ್ತಮ ಗುಣಮಟ್ಟದ ಉತ್ಪನ್ನಗಳಿಂದ ಗ್ರಾಹಕರ ಮನ ಗೆಲ್ಲುತ್ತಾ ಬಂದಿದೆ. ಇತ್ತೀಚಿಗೆ ಯಾವುದೇ ಹೊಸ ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರಿಗೆ ಪರಿಚಯಿಸಿರಲಿಲ್ಲ. ಆದರೆ, ಇದೀಗ ಸೋನಿ ತನ್ನ ಗ್ರಾಹಕರಿಗೆ ಮತ್ತೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ವಿಶೇಷ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಕಂಪನಿ ಉತ್ಸುಕವಾಗಿದೆ.

ಸೋನಿ ಕಂಪನಿಯ ಎಕ್ಸ್‌ಪಿರಿಯಾ ಸರಣಿಯ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ್ದವು. ಅದರ ಮುಂದುವರಿದ ಭಾಗವಾಗಿ ಕಂಪನಿ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಪಿರಿಯಾ ಸರಣಿಯಲ್ಲಿಯೇ ಗ್ರಾಹಕರಿಗೆ ಪರಿಚಯಿಸಲು ತಯಾರಾಗಿದೆ. ಈ ನೂತನ ಸ್ಮಾರ್ಟ್‌ಫೋನ್ ಹೊಸ ದಾಖಲೆಯ ಫೀಚರ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.

ಹೌದು, ಸೋನಿ "ಎಕ್ಸಪಿರಿಯಾ ಎಕ್ಸ್‌ಝಡ್4" ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುತ್ತಿದ್ದು, ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 52 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಹೊಂದಿರಲಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಸೋನಿ ಮತ್ತೆ ತನ್ನ ಪ್ರಾಬಲ್ಯವನ್ನು ಹೊಂದಲು ಮುಂದಾಗುತ್ತಿದೆ. ಸೋನಿ ಎಕ್ಸ್‌ಪಿರಿಯಾ ಎಕ್ಸ್‌ಝಡ್4 ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನಿಗೆ ಪ್ರಬಲ ಪ್ರತಿಸ್ಪರ್ಧಿ ಆಗಲಿದೆ ಎನ್ನಲಾಗುತ್ತಿದೆ. ಹಾಗಾದರೇ ಸೋನಿಯ ' ಎಕ್ಸ್‌ಪಿರಿಯಾ ಎಕ್ಸ್‌ಝಡ್4' ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ

52 ಮೆಗಾಪಿಕ್ಸಲ್ ಕ್ಯಾಮೆರಾ
ಸೋನಿ ಕಂಪನಿ ಹೊಸದಾಗಿ ಬಿಡುಗಡೆ ಮಾಡುತ್ತಿರುವ ಎಕ್ಸ್‌ಪಿರಿಯಾ ಎಕ್ಸ್‌ಝಡ್4 ಸ್ಮಾರ್ಟ್‌ಫೋನಿನಲ್ಲಿ 52 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡುವುದಾಗಿ ಹೇಳಿದೆ. 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸಲ್ ಕ್ಯಾಮೆರಾ ಹೊಂದಿದ್ದು, ಬಿಟ್ಟರೆ, ಇಲ್ಲಿಯವರೆಗೂ ಬೇರೆ ಯಾವ ಕಂಪನಿಗಳು 50 ಮೆಗಾಪಿಕ್ಸಲ್ ಗಡಿ ದಾಟಿಲ್ಲ. ಹೀಗಾಗಿ ಸೋನಿ 52 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡುವುದರ ಮೂಲಹ ಅರ್ಧಶತಕ ದಾಟಿದೆ ಎಂದು ಹೇಳಬಹುದು.

ಡಿಸ್‌ಪ್ಲೇ
ಸೋನಿಯ ಎಕ್ಸ್‌ಪಿರಿಯಾ ಎಕ್ಸ್‌ಝಡ್4 ಸ್ಮಾರ್ಟ್‌ಫೋನ್ 6.5 ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇ ಅನುಪಾತವು 21:9 ಆಗಿರಲಿದೆ. ವಿಶಾಲವಾದ ಡಿಸ್‌ಪ್ಲೇ ಹೊಂದಿರುವುದು ಈ ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ. ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯ ಗುಣಮಟ್ಟ ಅದ್ಭುತವಾಗಿದ್ದು, ರೌಂಡ್ ಕರ್ವ್‌ನೊಂದಿಗೆ ಅಂದದ ರಚನೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಪ್ರೊಸೆಸರ್
ಈ ಸ್ಮಾರ್ಟ್‌ಫೋನ್ ಕ್ವಾಲ್ಕಂನ ಹೊಸ ಚಿಪ್ ಸೆಟ್ಟಿನೊಂದಿಗೆ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿರಲಿದೆ. ಇನ್ನೂ ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಎಕ್ಸ್‌ಪಿರಿಯಾ ಎಕ್ಸ್‌ಝಡ್4 ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಬಾಹ್ಯ ಸಂಗ್ರಹಕ್ಕೆ ಸಾಮರ್ಥ್ಯ ವಿಸ್ತರಿಸುವ ಅವಕಾಶ ನೀಡಲಾಗುವುದು ಎನ್ನಲಾಗುತ್ತಿದೆ.

ಶಕ್ತಿಯುತ ಬ್ಯಾಟರಿ
ಸೋನಿಯ ಎಕ್ಸ್‌ಪಿರಿಯಾ ಎಕ್ಸ್‌ಝಡ್4 ಸ್ಮಾರ್ಟ್‌ಫೋನ್ 4,400 mAh ಸಾಮರ್ಥ್ಯದ ಉತ್ತಮ ಬ್ಯಾಟರಿ ಹೊಂದಿರಲಿದ್ದು, ಬ್ಯಾಟರಿ ಬಾಳಿಕೆ ನಿರಾತಂಕವಾಗಿ ಒಂದು ದಿನ ಬರುತ್ತದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ವ್ಯೆವಸ್ಥೆ ಸಹ ಇರಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ ಸೋನಿ ಇಷ್ಟು ಸಾಮರ್ಥ್ಯದ ಬ್ಯಾಟರಿಯನ್ನು ತನ್ನ ಸ್ಮಾರ್ಟ್‌ಫೊನ್‌ಗಳಲ್ಲಿ ಪರಿಚಯಿಸುತ್ತಿರುವುದು.

ಯಾವಾಗ ಲಭ್ಯ ಮತ್ತು ಬೆಲೆ ಎಷ್ಟು?
ಸೋನಿ ಕಂಪನಿ ತನ್ನ ಎಕ್ಸ್‌ಪಿರಿಯಾ ಎಕ್ಸ್‌ಝಡ್4 ಸ್ಮಾರ್ಟ್‌ಫೋನ್ ಬಿಡುಗಡೆಯ ಮತ್ತು ದರದ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಈ ವರ್ಷದ ಅಂತ್ಯದೊಳಗೆ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಡಾರ್ಕ್ ಬ್ಲೂ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣಗಳಲ್ಲಿ ದೊರೆಯಲಿದೆ. ಇನ್ನೂ ಇದರ ಬೆಲೆ ಸುಮಾರು 79,000ರೂ,ಗಳು ಎಂದು ಅಂದಾಜಿಸಲಾಗಿದೆ.


Click it and Unblock the Notifications








