Home
ಮೊಬೈಲ್

ಆನ್‌ಲೈನ್‌ಲ್ಲಿ ಸೋನಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ

By Ashwath

ಸ್ಮಾರ್ಟ್‌ಫೋನಲ್ಲೇ ಗುಣಮಟ್ಟದ ಕ್ಯಾಮೆರಾ ಬೇಕೆಂದು ಕನಸು ಕಾಣುತ್ತಿದ್ದವರಿಗೆ ಸೋನಿ 20 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ನ್ನು ಮೊನ್ನೆ ಬಿಡುಗಡೆ ಮಾಡಿದೆ.8.5ಮಿಲಿ ಮೀಟರ್‌ ದಪ್ಪವಿರುವ ಸ್ಮಾರ್ಟ್‌‌ಫೋನ್‌ 2GHz ಕ್ವಾಡ್‌‌ಕೋರ್‍ ಪ್ರೊಸೆಸರ್‌‌,2GB RAM,16GB ಆಂತರಿಕ ಮೆಮೋರಿಯನ್ನು ಹೊಂದಿದೆ.ಕ್ಯಾಮೆರಾ ಜಿ ಲೆನ್ಸ್‌,1/2.3" 20.7 MP ExmorRS ಸೆನ್ಸರ್‌ ಹೊಂದಿದ್ದು ನೋಕಿಯಾದ 41 ಎಂಪಿ ಕ್ಯಾಮೆರಾ ಫೋನ್‌ಗಿಂತಲೂ ಉತ್ತಮ ಗುಣಮಟ್ಟದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದು ಎಂದು ಸೋನಿ ಕಂಪೆನಿ ಹೇಳಿದೆ.

ಈ ಸ್ಮಾರ್ಟ್‌ಫೋನಲ್ಲಿ ಫೋಟೋಗ್ರಫಿಯನ್ನು ಅಭ್ಯಾಸ ಮಾಡುವವರಿಗೆ 3.6 ಎಕ್ಸ್‌ ಝೂಮ್‌ Carl Zeiss Vario Sonnar T ಲೆನ್ಸ್‌‌ನ್ನು ಸೋನಿ ಬಿಡುಗಡೆ ಮಾಡಿದೆ.ಜಲ ನಿರೋಧಕ(water resistant)ದೂಳು ನಿರೋಧಕ(dust-proof)ಗುಣಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌,ಕಪ್ಪು,ನೆರಳೆ,ಬಿಳಿ ಬಣ್ಣದಲ್ಲಿ ಮಾರುಕಟ್ಟೆಗೆ ಬಂದಿದೆ.

ಸೋನಿ ಎಕ್ಸ್‌ಪೀರಿಯಾ ಝಡ್‌ 1
ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ TRILUMINOS ಸ್ಕ್ರೀನ್‌(1080x1920)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
3000mAh ಬ್ಯಾಟರಿ

ಸೋನಿ ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಗೆ 44,990 ಬೆಲೆಯಲ್ಲಿ ಬಿಡುಗಡೆ ಮಾಡಿದ್ದರೂ ಆನ್‌ಲೈನ್‌ ಶಾಪಿಂಗ್‌ನಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್ ಖರೀದಿಸಲು ಗಿಝ್‌ಬಾಟ್‌ ಇಂದು ಟಾಪ್‌ 10 ಆನ್‌‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ಇಷ್ಟವಾದ ತಾಣದಿಂದ ಸೋನಿ ಸ್ಮಾರ್ಟ್‌ಫೋನ್‌ ಖರೀದಿಸಿ.

ಸೋನಿ ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+