2,999ಕ್ಕೆ ಸ್ವೈಪ್ 4G ಸ್ಮಾರ್ಟ್‌ಫೋನ್: ವಿಶೇಷತೆಗಳು..?
ರೂ.2,999ಕ್ಕೆ ಮಾರಾಟವಾಗಲಿರುವ ಈ ಸ್ಮಾರ್ಟ್‌ಫೋನು ಕೇವಲ ಸ್ನಾಪ್‌ಕ್ಲೂಸ್.ಕಾಂ ನಲ್ಲಿ ಮಾತ್ರ ಲಭ್ಯವಿರಲಿದೆ ಎನ್ನಲಾಗಿದೆ.
ಸ್ವೈಪ್ ಟೆಕ್ನಾಲಾಜಿಸ್ ಭಾರತದಲ್ಲಿ ಮತ್ತೊಂದು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸ್ವೈಪ್ ಕೆನೋಟ್ ನಿಯೋ 4G ಎಂದು ನಾಮಕರಣ ಮಾಡಿದ್ದು, ರೂ.2,999ಕ್ಕೆ ಮಾರಾಟವಾಗಲಿರುವ ಈ ಸ್ಮಾರ್ಟ್‌ಫೋನು ಕೇವಲ ಸ್ನಾಪ್‌ಕ್ಲೂಸ್.ಕಾಂ ನಲ್ಲಿ ಮಾತ್ರ ಲಭ್ಯವಿರಲಿದೆ.

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?
ಸದ್ಯ ಭಾರತದಲ್ಲಿ 4G ಪೋನುಗಳ ಬೇಡಿಕೆ ಹೆಚ್ಚಾಗಿದೆ, ಹೀಗಾಗಿ ಜಿಯೋ ಬಳಕೆಗಾಗಿ ಗ್ರಾಹಕರು ಕಡಿಮೆ ಬೆಲೆ ಸ್ಮಾರ್ಟ್‌ಫೋನುಗಳ ಕಡೆಗೆ ಮುಖ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಕಂಪನಿಗಳು ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿವೆ.

4 ಇಂಚಿನ ಪರದೆ; 512 MB RAM
ಸ್ವೈಪ್ ಕೆನೋಟ್ ನಿಯೋ 4G ಸ್ಮಾರ್ಟ್‌ಫೋನ್ 4 ಇಂಚಿನ ಪರದೆಯನ್ನು ಹೊಂದಿದ್ದು, 1.5 GHz ವೇಗದ ಕ್ವಾಡ್‌ಕೋರ್ ಪ್ರೋಸೆಸರ್ ನೊಂದಿಗೆ 512 MB RAM ಸಹ ನೀಡಲಾಗಿದೆ. ಈ ಫೋನು ಆಂಡ್ರಾಯ್ಡ್ 6.0ದಲ್ಲಿ ಕಾರ್ಯ ನಿರ್ವಹಿಸಲಿದೆ. ಅಲ್ಲದೆ 4GB ಇಂಟರ್ನಲ್ ಮೆಮೊರಿಯನ್ನು ಈ ಪೋನಿನಲ್ಲಿದೆ.

5MP ಕ್ಯಾಮೆರಾ:
ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 32GB ವರೆಗೂ ಮೆಮೊರಿಯನ್ನು ಈ ಫೋನಿನಲ್ಲಿ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ 5MP ಕ್ಯಾಮೆರಾ ಹಿಂಭಾಗದಲ್ಲಿದ್ದು, ಇರೊಂದಿಗೆ LED ಫ್ಲಾಷ್ ಸಹ ನೀಡಲಾಗಿದೆ. ಮುಂಭಾಗದಲ್ಲಿ 1.3 MP ಕ್ಯಾಮೆರಾವನ್ನು ಸೆಲ್ಫಿಗಾಗಿ ಇದ್ದು, ಅಲ್ಲದೇ ವಿಡಿಯೋ ಕಾಲಿಂಗ್ ಸಂದರ್ಭದಲ್ಲಿ ಈ ಕ್ಯಾಮೆರಾ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಡುಯಲ್ ಸಿಮ್:
ಡುಯಲ್ ಸಿಮ್ ಹಾಕಬಹುದಾದ ಈ ಸ್ಮಾರ್ಟ್‌ಫೋನು 4G ಸಪೋರ್ಟ್ ಮಾಡಲಿದೆ. ಜಿಯೋ ಸಿಮ್ ಇದರಲ್ಲಿ ಬಳಸಬಹುದಾಗಿದೆ. ಇತರೆ ಸ್ಮಾರ್ಟ್‌ಫೋನುಗಳಲ್ಲಿ ಇರುವ ಎಲ್ಲಾ ಆಯ್ಕೆಗಳು ಇದರಲ್ಲಿದೆ. GPS, WiFi, Bluetooth, micro-USB ಮತ್ತು FM ರೆಡಿಯೋ ಇದೆ.


Click it and Unblock the Notifications