ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

|

ರಿಲಯನ್ಸ್ ಮಾಲೀಕತ್ವದ ಜಿಯೋ ಮತ್ತೆ ತನ್ನ ಗ್ರಾಹಕರಿಗೆ ಹೊಸದೊಂದು ಕೊಡುಗೆಯನ್ನು ನೀಡಿದೆ. ಬೇರೆ ನೆಟ್‌ವರ್ಕ್‌ಗಳ ಬಾಯಿಮುಚ್ಚಿಸುವಂತೆ ಮತ್ತೆ ಮೂರು ತಿಂಗಳ ಉಚಿತ ಕೊಡುಗೆಯನ್ನು ಘೋಷಿಸಿದೆ. ಆದರೆ ಅದಕ್ಕೆ ದರವನ್ನು ವಿಧಿಸಲು ಮುಂದಾಗಿದೆ. ಜೊತೆಗೆ ಈ ಕೊಡುಗೆಯನ್ನು ತನ್ನ ಪ್ರೈಮ್ ಸದಸ್ಯತ್ವವನ್ನು ಪಡೆದವರಿಗೆ ಮಾತ್ರ ನೀಡುತ್ತಿದ್ದು, ಪ್ರೈಮ್ ಸದಸ್ಯತ್ವವನ್ನು ಪಡೆಯಲು ಕೊನೆಯ ದಿನಾಂಕವನ್ನು ಮತ್ತೇ ಮುಂದಕ್ಕೆ ಹಾಕಿದ್ದು, ಏಪ್ರಿಲ್ 15ರವರೆಗೂ ಅವಕಾಶ ನೀಡಿದೆ.

ಜಿಯೋ ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಓದಿರಿ:ಜಿಯೋ ಉಚಿತ ಆಫರ್ ಮತ್ತೆ 3 ತಿಂಗಳು! ಪ್ರೈಮ್ ಸಮಯ ಹೆಚ್ಚಳ! ಸಮ್ಮರ್ ಆಫರ್!! ಇನ್ನೇನು??

ಪ್ರೈಮ್ ಸದಸ್ಯತ್ವ ಪಡೆಯುವ ಅವಧಿಯನ್ನು ಹೆಚ್ಚಿಸುವುದರೊಂದಿಗೆ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್ ನೀಡಿದ ಜಿಯೋ ತನ್ನ ಮೇಲೆ ಭರವಸೆ ಇಟ್ಟಿದಕ್ಕೆ ಗ್ರಾಹಕರಿಗೆ ಮತ್ತೊಮ್ಮೆ ಆಚ್ಚರಿಯನ್ನು ನೀಡಿದೆ. ಜಿಯೋ ನೀಡಿರುವ ಈ ಆಫರ್‌ ಇತರೇ ಕಂಪನಿಗಳಿಗೆ ನುಂಗಲಾದ ಬಿಸಿ ತುಪ್ಪವಾಗಿದೆ ಎನ್ನಲಾಗಿದೆ. ಪ್ರೈಮ್ ಆಫರ್‌ಗೆ ಬದಲಾಗಿ ಎಷ್ಟೆ ಆಫರ್‌ ನೀಡಿದರು ಜಿಯೋ ಗ್ರಾಹಕರು ತಮ್ಮ ಮನಸ್ಸು ಬದಲಿಸದೆ ಪ್ರೈಮ್ ಸದಸ್ಯರಾಗುತ್ತಿದ್ದಾರೆ.

ಓದಿರಿ: BSLN ನಿಂದ ದಿನಕ್ಕೆ 10 GB, ತಿಂಗಳಿಗೆ 249 ರೂ.ಗೆ 300 GB ಡೇಟಾ..!!

72 ಮಿಲಿಯನ್ ಜಿಯೋ ಪ್ರೈಮ್ ಸದಸ್ಯರು:

72 ಮಿಲಿಯನ್ ಜಿಯೋ ಪ್ರೈಮ್ ಸದಸ್ಯರು:

100 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ ಆರು ತಿಂಗಳ ಉಚಿತ ಸೇವೆಯ ನಂತರ ಪ್ರೈಮ್ ಸದಸ್ಯತ್ವವನ್ನು ಘೋಷಿಸಿತು. ಇದಕ್ಕೆ ಆರಂಭದಲ್ಲಿ ನಿರಾಸಕ್ತಿ ತೋರಿಸಿದ ಜಿಯೋ ಗ್ರಾಹಕರು ಸದಸ್ಯತ್ವ ಪಡೆಯಲು ಕೊನೆ ದಿನ ಹತ್ತಿರ ಬರುತ್ತಿದಂತೆ ಪ್ರೈಮ್ ಸದಸ್ಯರಾಗಲು ಮುಂಗಾಗಿದ್ದು, ಸುಮಾರು 72 ಮಿಲಿಯನ್ ಗ್ರಾಹಕರು ಪ್ರೈಮ್ ಸದಸ್ಯರಾಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.

ಪ್ರೈಮ್ ಸದಸ್ಯತ್ವ ಪಡೆಯಲು ಅವಧಿ ವಿಸ್ತರಣೆ:

ಪ್ರೈಮ್ ಸದಸ್ಯತ್ವ ಪಡೆಯಲು ಅವಧಿ ವಿಸ್ತರಣೆ:

ಜಿಯೋ ಪ್ರೈಮ್ ಸದಸ್ಯರಾಗುವ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರೈಮ್ ಸದಸ್ಯತ್ವ ಪಡೆಯುವ ಕೊನೆಯ ದಿನಾಂಕವನ್ನು 15 ದಿನಗಳ ಕಾಲ ವಿಸ್ತರಿಸಿದ್ದು, 72 ಮಿಲಿಯನ್ ಸಂಖ್ಯೆ ಇನಷ್ಟು ಜಾಸ್ತಿಯಾದರು ಯಾವುದೇ ಆಚ್ಚರಿ ಇಲ್ಲ ಎನ್ನಲಾಗಿದೆ.

ಮತ್ತಷ್ಟು ಜನರನ್ನು ಆಕರ್ಷಿಸಲು ಸಮರ್ ಸರ್‌ಪ್ರೈಸ್ ಆಫರ್‌:

ಮತ್ತಷ್ಟು ಜನರನ್ನು ಆಕರ್ಷಿಸಲು ಸಮರ್ ಸರ್‌ಪ್ರೈಸ್ ಆಫರ್‌:

ಜಿಯೋ ಪ್ರೈಮ್ ಸದಸ್ಯರಾಗಲು ಹೆಚ್ಚು ಜನರನ್ನು ಆಕರ್ಷಿಸುವ ಸಲುವಾಗಿ ಜಿಯೋ ಸಮರ್ ಸರ್‌ಪ್ರೈಸ್ ಆಫರ್ ಘೋಷಣೆ ಮಾಡಿದ್ದು, ಪ್ರೈಮ್ ಸದಸ್ಯರಾದವರಿಗೆ ಮಾತ್ರ ಈ ಕೊಡುಗೆ ಲಾಭ ದೊರೆಯಲಿದೆ. ಇದರಿಂದ ಮತ್ತೆ ಮೂರು ತಿಂಗಳು ಉಚಿತ ಸೇವೆಗಳು ಗ್ರಾಹಕರಿಗೆ ಸಿಗಲಿದೆ. ಇದರಿಂದಾಗಿ ಮತ್ತಷ್ಟು ಗ್ರಾಹಕರು ಜಿಯೋ ಕಡಗೆ ಬರಲಿದೆ ಎಂಬುದು ಜಿಯೋ ಆಶಯವಾಗಿದೆ.

ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆದುಕೊಳ್ಳುವುದು ಹೇಗೆ:

ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಪಡೆದುಕೊಳ್ಳುವುದು ಹೇಗೆ:

ಈಗಾಗಲೇ ಜಿಯೋ ಪ್ರೈಮ್ ಸದಸ್ಯರಾಗಿರುವವರು ಹಾಗೂ ಇನ್ನು 15 ದಿನದಲ್ಲಿ ಜಿಯೋ ಪ್ರೈಮ್ ಸದಸ್ಯರಾಗುವವರಿಗಾಗಿಯೇ ಸಮ್ಮರ್ ಸರ್‌ಪ್ರೈಸ್ ಆಫರ್ ನೀಡಲಾಗಿದ್ದು, ಮಾರ್ಜ್ 31 ರಿಂದ ಏಪ್ರಿಲ್ 15 ರ ಒಳಗೆ 303 ರೂ. ಇಲ್ಲವೇ ಇದಕ್ಕಿಂತ ಜಾಸ್ತಿ ರಿಚಾರ್ಜ್ ಮಾಡಿಸಿದವರಿಗೆ ಮೂರು ತಿಂಗಳು ಹ್ಯಾಪಿ ನ್ಯೂಯರ್ ಆಫರ್ ದೊರೆಯಲಿದೆ.

ಇದಕ್ಕೂ ಇದೆ ಕ್ಯಾಷ್ ಬ್ಯಾಕ್:

ಇದಕ್ಕೂ ಇದೆ ಕ್ಯಾಷ್ ಬ್ಯಾಕ್:

ಜಿಯೋ ಪ್ರೈಮ್ ಸದಸ್ಯರು 303 ರೂ. ರೀಚಾರ್ಜ್ ಮಾಡಿಸಿದರೆ 50 ರೂ. ಕ್ಯಾಷ್ ಬ್ಯಾಕ್ ದೊರೆಯಲಿದ್ದು, ಇರದೊಂದಿಗೆ ಮತ್ತೆ ಮೂರು ತಿಂಗಳು ಉಚಿತ ಕಾಲ್ ಮಾಡುವ ಅವಕಾಶ ಮತ್ತು ಉಚಿತ ಎಸ್‌ಎಂಎಸ್‌ ಕಳುಹಿಸಬಹುದಾಗಿದೆ. ಅಲ್ಲದೇ ಪ್ರತಿ ನಿತ್ಯ 1 GB 4G ಡೇಟಾವನ್ನು 28 ದಿನಗಳ ಅವಧಿಗೆ ಪಡೆಯಬಹುದಾಗಿದೆ.

ಸಮರ್ ಸರ್‌ಪ್ರೈಸ್ ಆಫರ್ ಪಡೆಯರಿ ಹೀಗೆ:

ಸಮರ್ ಸರ್‌ಪ್ರೈಸ್ ಆಫರ್ ಪಡೆಯರಿ ಹೀಗೆ:

ಜಿಯೋ ಆಪ್ ಡೌನ್‌ಲೋಡ್ ಮಾಡಿಕೊಂಡು ಜಿಯೋ ಐಡಿ ಪಡೆದುಕೊಳ್ಳಿ. ನಂತರ ಅಲ್ಲಿ ಜಿಯೋ ಪ್ರೈಮ್ ಮೆಂಬರ್ ಶಿಪ್ ಬಟನ್ ಕ್ಲಿಕ್ ಮಾಡಿದರೆ ಅಲ್ಲಿರುವ ಗೋಲ್ಡ್ ಕಲರ್ ಡಾಷ್‌ಬೋರ್ಡ್ ಏರಿದಲ್ಲಿರುವ ಜಿಯೋ ಪ್ರೈಮ್ ಸಬ್ ಸೆಲೆಕ್ಷನ್ ನಲ್ಲಿ ಇರುವ ರೂ. 303 ಮತ್ತು ರೂ.499 ಇಲ್ಲವೇ ಯಾವುದಾರು ಆಫರ್ ಅನ್ನು ಪಡೆದುಕೊಂಡಲ್ಲಿ ಮತ್ತೆ ಮೂರು ತಿಂಗಳು ಸಮರ್ ಸರ್‌ಪ್ರೈಸ್ ಆಫರ್ ದೊರೆಯಲಿದೆ.

ಜಿಯೋ ಪ್ರೈಮ್ ಸದಸ್ಯತ್ವ ಪಡೆಯಲು ಸಕಾಲ:

ಜಿಯೋ ಪ್ರೈಮ್ ಸದಸ್ಯತ್ವ ಪಡೆಯಲು ಸಕಾಲ:

ಸಮರ್ ಸರ್‌ಪ್ರೈಸ್ ಆಫರ್ ನೀಡಿರುವ ರಿಲಯನ್ಸ್ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲು ಇದು ಸಕಾಲವಾಗಿದೆ. ನೀವಿನ್ನು ಪ್ರೈಮ್ ಸದಸ್ಯರಾಗಿಲ್ಲ ಎಂದರೇ ಶೀಘ್ರವೇ ಜಿಯೋ ಪ್ರೈಮ್ ಸದಸ್ಯತ್ವ ಪಡೆಯಿರಿ.

Most Read Articles
Best Mobiles in India

Read more about:
English summary
registration and logging in the app, you will be greeting with a ‘Get Jio Prime Membership’ button in Golden colour on the ‘DASHBOARD’ area. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more