ನಿದ್ರೆ ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ 'ಸ್ಮಾರ್ಟ್‌ಫೋನ್' ಕಾರಣ ಎಂದ ಅಧ್ಯಯನ.!!

|

ಮನುಷ್ಯ ಸ್ಮಾರ್ಟ್‌ಫೋನ್‌ ಇಲ್ಲದೇ ಯಾವ ಕೆಲಸವು ಆಗದು ಎನ್ನುವ ಮಟ್ಟಿಗೆ ಸ್ಮಾರ್ಟ್‌ಪೋನ್‌ಗಳಿಗೆ ಅಡಿಕ್ಟ್ ಆಗಿದ್ದು, ಆದರೆ ಸದ್ದಿಲ್ಲದೇ ಸ್ಮಾರ್ಟ್‌ಫೋನ್‌ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತೀ ಆದರೆ ಅಮೃತವು ವಿಷ ಎನ್ನುವ ಮಾತಿನಂತೆ ಹೆಚ್ಚಾದ ಸ್ಮಾರ್ಟ್‌ಫೋನ್‌ ಬಳಕೆ ಹಾನಿಕಾರಕವಾಗಿದ್ದು, ದಂಪತಿಗಳ ಅನ್ಯೂನ್ಯತೆ ದೂರವಾಗಿಸುತ್ತಿರುವ ಜೊತೆಗೆ ನಿದ್ದೆಗೆ ಭಂಗ ತರುತ್ತಿದೆ.

ನಿದ್ರೆ ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಸ್ಮಾರ್ಟ್‌ಫೋನ್ ಕಾರಣ ಎಂದ ಅಧ್ಯಯನ.!!

ಹೌದು, ವಿಪರೀತ ಸ್ಮಾರ್ಟ್‌ಫೋನ್ ಬಳಕೆ ನಿದ್ರೆಗೆ ಅಡ್ಡಿಪಡಿಸುತ್ತಿದ್ದು, ಸಂತಾನೋತ್ಪತ್ತಿ ಕುಂಠಿತಕ್ಕೂ ಕಾರಣವಾಗಿದೆ ಎನ್ನುವ ಗಂಭೀರ ಅಂಶಗಳು ಆಸ್ಟ್ರೇಲಿಯಾದ 'ಕ್ವೀನ್ಸ್‌ಲ್ಯಾಂಡ್ ತಾಂತ್ರಿಕ ವಿಶ್ವವಿದ್ಯಾಲಯ' ನಡೆಸಿದ ಸರ್ವೇಯಿಂದ ತಿಳಿದು ಬಂದಿದೆ. ಈ ಅಧ್ಯಾಯನಕ್ಕೆ ಆಸ್ಟ್ರೇಲಿಯಾದ 18 ರಿಂದ 83 ವಯಸ್ಸಿನ ನಡುವಿನ 709 ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಬಳಸಿಕೊಳ್ಳಲಾಗಿತ್ತು.

ನಿದ್ರೆ ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಸ್ಮಾರ್ಟ್‌ಫೋನ್ ಕಾರಣ ಎಂದ ಅಧ್ಯಯನ.!!

ಪ್ರಸ್ತುತ ಎಲ್ಲ ವಯೋಮಾನದ ಪುರುಷ ಮತ್ತು ಮಹಿಳೆಯರು ಅತೀಯಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದು, ಕಳೆದ 13 ವರ್ಷಗಳಿಂದ ಟೆಕ್ನೊಫೆರೆನ್ಸ್‌(ತಾಂತ್ರಿಕತೆ)ಯಲ್ಲಿ ಏರಿಕೆ ಕಂಡುಬಂದಿದೆ. ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧ್ಯಯನವು ಹೊರಹಾಕಿದೆ. ಹಾಗಾದರೇ ಸಂಶೋಧನೆಯ ಇತರೆ ಅಂಶಗಳೆನು ಎಂಬುದನ್ನು ನೋಡೋಣ ಬನ್ನಿರಿ.

ಟೆಕ್ನೊಫೆರೆನ್ಸ್‌(technoference)

ಟೆಕ್ನೊಫೆರೆನ್ಸ್‌(technoference)

ಅತೀಯಾದ ಸ್ಮಾರ್ಟ್‌ಫೋನ್‌ ಬಳಕೆಗೆ ಅಡಿಕ್ಟ್‌ ಆಗಿರುವುದಕ್ಕೆ ಈ ಪದ ಬಳೆಸಲಾಗುತ್ತಿದೆ. ಪರಸ್ಪರ ಮಹಿಳೆ ಪುರುಷರಿಬ್ಬರೂ ಸಂಪೂರ್ಣ ಸ್ಮಾರ್ಟ್‌ಫೋನಿನಲ್ಲಯೇ ಮಗ್ನರಾಗುತ್ತಿರುವುದು, ದಂಪತಿಗಳ ಸಂಬಂಧದ ನಡುವೆ ಅಂತರ ಮೂಡಿಸುತ್ತಿದೆ. ಹೀಗಾಗಿ ದಂಪತಿಗಳಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳು ಎದುರಾಗುತ್ತವೆ ಎಂಬ ಅಂಶಗಳನ್ನು ಅಧ್ಯಯನವು ಹೊರಹಾಕಿದೆ.

ಮರೆಯಾಗುತ್ತಿದೆ ನಿದ್ರೆ

ಮರೆಯಾಗುತ್ತಿದೆ ನಿದ್ರೆ

ಸರ್ವೇಯ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬರು(ಶೇ. 19.5) ಹಾಗೂ ಪ್ರತಿ ಎಂಟು ಪುರುಷರಲ್ಲಿ ಒಬ್ಬರು(ಶೇ. 11.8 ) ಅತೀಯಾದ ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ವರದಿ ತಿಳಿಸಿದೆ.

ಸಂತಾನೋತ್ಪತ್ತಿ ಕುಸಿತ

ಸಂತಾನೋತ್ಪತ್ತಿ ಕುಸಿತ

ದಿನದ ಹೆಚ್ಚಾದ ಸಮಯವನ್ನು ಸ್ಮಾರ್ಟ್‌ಫೋನಿನಲ್ಲಿ ಕಳೆಯುವ ಕಾರಣದಿಂದಾಗಿ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಶೇ.12.6 ನಷ್ಟು ಪುರುಷರ ತಿಳಿಸಿದ್ದಾರೆ. ಹಾಗೂ ಶೇ.14 ರಷ್ಟು ಮಹಿಳೆಯರು ಸಹ ಸಂತಾನೋತ್ಪತ್ತಿ ಕುಸಿತಕ್ಕೆ ಅತೀಯಾದ ಸ್ಮಾರ್ಟ್‌ಫೋನ್ ಬಳಕೆಯೇ ಕಾರಣ ಎಂಬದನ್ನು ತಿಳಿಸಿದ್ದಾರೆ.

ಗಂಭೀರ ನೋವಿಗೆ ಕಾರಣ

ಗಂಭೀರ ನೋವಿಗೆ ಕಾರಣ

ಸಂಶೋಧನೆಯ ವರದಿ ಪ್ರಕಾರ ವಿಪರೀತ ಸ್ಮಾರ್ಟ್‌ಫೋನ್‌ ಉಪಯೋಗಿಸುವುದರಿಂದ ತಲೆನೋವು, ಕಣ್ಣುಗಳ ನೋವುಗಳು ಸೇರಿದಂತೆ ಹಲವು ಗಂಭೀರ ನೋವುಗಳಿಗೆ ಕಾರಣವಾಗುತ್ತದೆ ಎಂಬುದನ್ನು ಶೇ.8.4 ಮಹಿಳೆಯರು ಮತ್ತು ಶೇ.7.9 ರಷ್ಟು ಪುರುಷರು ಹೇಳಿಕೊಂಡಿದ್ದಾರೆ.

ಸಮಸ್ಯೆ ಏರಿಕೆ

ಸಮಸ್ಯೆ ಏರಿಕೆ

2005ರಲ್ಲಿ ನಡೆದ ಇದೇ ಮಾದರಿಯ ಸರ್ವೇಯ ಪ್ರಶ್ನೇಗಳನ್ನೆ ಈ ಅಧ್ಯಯದ ಸರ್ವೇಯಲ್ಲಿ ಕೇಳಲಾಗಿದ್ದು, ಅತೀಯಾದ ಸ್ಮಾರ್ಟ್‌ಫೋನ್ ಬಳಕೆ ನಿದ್ರೆ ಕಸೆದುಕೊಂಡಿದೆ, ಸಂತಾನೋತ್ಪತ್ತಿ ಕ್ಷೀಣಿಸಿದೆ, ವಾಹನ ಚಾಲನೆ ಮಾಡುವಾಗ ಸ್ಮಾರ್ಟ್‌ಫೋನ್‌ ಬಳಕೆ ತೊಂದರೆ ತಂದಿದೆ, ಮತ್ತು ಹಲವು ಸಮಸ್ಯೆಗಳನ್ನು ಎದುರಿಸಲಾಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

Best Mobiles in India

English summary
Excessive use of smartphone is making people lose sleep and become less productive, according to an Australian study that found a jump in 'technoference' over the past 13 years.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X