Home
ಮೊಬೈಲ್

Tecno: ಹೊಸ ಮೊಬೈಲ್ ಬಿಡುಗಡೆ; 50MP ಕ್ಯಾಮೆರಾ, ಬಿಗ್ ಬ್ಯಾಟರಿ.. ಯಾವ ಫೋನ್?

ಟೆಕ್ನೋ ಕಂಪನಿಯು ಹೊಸ ಮೊಬೈಲ್‌ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಕ್ಯಾಮನ್ (Camon) ಸರಣಿಯನ್ನು ವಿಸ್ತರಿಸಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಟೆಕ್ನೋ ಕ್ಯಾಮನ್ 30S (Tecno Camon 30S) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ಬಜೆಟ್ ಬೆಲೆಯಲ್ಲಿ ಈ ಫೋನನ್ನು ಪರಿಚಯಿಸಿದೆ. ಮುಂಬರುವ ದಿನಗಳಲ್ಲಿ ಭಾರತ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ಈ ಮೊಬೈಲ್‌ ಲಗ್ಗೆ ಇಡಲಿದೆ. ನೂತನ ಫೋನಿನ ವಿಶೇಷತೆಗಳು ಮತ್ತು ಬೆಲೆ ತಿಳಿಯಲು ಮುಂದೆ ಓದಿ.

ಬಜೆಟ್‌ ಸ್ನೇಹಿ ಟೆಕ್ನೋ ಕ್ಯಾಮನ್ 30S ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆವರ್ಚುವಲ್ ತಂತ್ರಜ್ಞಾನದ ಸಹಾಯದಿಂದ 16GB RAM, 5000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಸೇರಿದಂತೆ ಮುಂತಾದ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

Tecno: ಹೊಸ ಮೊಬೈಲ್ ಬಿಡುಗಡೆ; 50MP ಕ್ಯಾಮೆರಾ, ಬಿಗ್ ಬ್ಯಾಟರಿ.. ಯಾವ ಫೋನ್?

ಟೆಕ್ನೋ ಕ್ಯಾಮನ್ 30S ಫೋನಿನ ಬೆಲೆ

ಪ್ರಸ್ತುತ ಟೆಕ್ನೋ ಕ್ಯಾಮನ್ 30S ಮೊಬೈಲ್ ಪಾಕಿಸ್ತಾನದಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ಟಾಪ್ ರೂಪಾಂತರ 16GB RAM + 256GB ಬೆಲೆ ಸುಮಾರು 18,000 ರೂ. (PKR 59,999) ಆಗಿದೆ. ಈ ಫೋನ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ನೀವು ನೀಲಿ, ನೆಬ್ಯುಲಾ ವೈಲೆಟ್, ಸೆಲೆಸ್ಟಿಯಲ್ ಕಪ್ಪು ಮತ್ತು ಡಾನ್ ಗೋಲ್ಡ್ ಬಣ್ಣದಲ್ಲಿ ಕೊಳ್ಳಬಹುದು. ಫೋನಿನ ನೀಲಿ ಆಯ್ಕೆಯು ಹಿಂದಿನ ಫಲಕದ ಬಣ್ಣವನ್ನು ಬದಲಾಯಿಸುವ ತಂತ್ರಜ್ಞಾನವನ್ನು ಹೊಂದಿದೆ. ಸೂರ್ಯನ ಬೆಳಕಿನಲ್ಲಿ ಇದರ ಬಣ್ಣವು ಗಾಢ ನೀಲಿ ಬಣ್ಣದಲ್ಲಿ ಕಾಣುತ್ತದೆ.

ಟೆಕ್ನೋ ಕ್ಯಾಮನ್ 30S ಫೋನಿನ ಫೀಚರ್ಸ್

ಡಿಸ್ಪ್ಲೇ ವಿವರ

ಟೆಕ್ನೋ ಕ್ಯಾಮನ್ 30S ಮೊಬೈಲ್ 6.78 ಇಂಚಿನ ಕರ್ವ್ಡ್ ಪೂರ್ಣ ಎಚ್‌ಡಿ ಪ್ಲಸ್ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಜೊತೆಗೆ, 1,300 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಡಿಸ್ಪ್ಲೇ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ. ಇದಲ್ಲದೆ, ಒದ್ದೆಯಾದ ಕೈಯಿಂದಲೂ ಆಪರೇಟ್ ಮಾಡಬಹುದಾದಂತಹ ತಂತ್ರಜ್ಞಾನವನ್ನು ಈ ಫೋನ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಟೆಕ್ನೋ ಕ್ಯಾಮನ್ 30S ಫೋನನ್ನು ಹೆಲಿಯೊ G100 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿ 6GB RAM 128GB ಸ್ಟೋರೇಜ್, 8GB RAM ಜೊತೆಗೆ 128GB ಸ್ಟೋರೇಜ್ ಮತ್ತು 8GB RAM ಜೊತೆಗೆ 256GB ಸ್ಟೋರೇಜ್ ಲಭ್ಯವಿದೆ. ಜೊತೆಗೆ, 8GB ವರ್ಚುವಲ್ RAM ಅನ್ನು ಒದಗಿಸಲಾಗಿದೆ. ಇದರಿಂದ ನೀವು ಒಟ್ಟು 16 GB ವರೆಗೆ ಬಳಸಬಹುದು.

ಈ ಸುದ್ದಿ ಓದಿದ್ದೀರಾ?: Tesla: ಟೆಸ್ಲಾ ಸೈಬರ್‌ಕ್ಯಾಬ್ ಬಿಡುಗಡೆ: ಸ್ಟೀರಿಂಗ್ ವೀಲ್ ಇಲ್ಲ.. ಪೆಡಲ್ ಇಲ್ಲ! ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಟೆಕ್ನೋ ಕ್ಯಾಮನ್ 30S ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದು OIS ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಆಳ ಲೆನ್ಸ್‌ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ ಈ ಫೋನಿನ ಮುಂಭಾಗದಲ್ಲಿ, 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಟೆಕ್ನೋ ಕ್ಯಾಮನ್ 30S ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಈ ಮೊಬೈಲ್ ಧೂಳು ಮತ್ತು ನೀರು ನಿರೋಧಕ IP53 ರೇಟಿಂಗ್ ಪಡೆದಿದೆ. ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳು, ಭದ್ರತೆಗಾಗಿ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು 4G ನೆಟ್‌ವರ್ಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Tecno Camon 30S launched globally: know price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+