Home
ಸುದ್ದಿಜಾಲ

Tesla: ಟೆಸ್ಲಾ ಸೈಬರ್‌ಕ್ಯಾಬ್ ಬಿಡುಗಡೆ: ಸ್ಟೀರಿಂಗ್ ವೀಲ್ ಇಲ್ಲ.. ಪೆಡಲ್ ಇಲ್ಲ! ಬೆಲೆ ಎಷ್ಟು?

Tesla Cybercab Robotaxi: ಸ್ಟೀರಿಂಗ್ ವೀಲ್ ಇಲ್ಲ.. ಪೆಡಲ್ ಕೂಡ ಇಲ್ಲ! ಕೊನೆಗೂ ಬಿಡುಗಡೆ ಆಯ್ತು ಬಹುನಿರೀಕ್ಷಿತ ಟೆಸ್ಲಾ ಸೈಬರ್‌ಕ್ಯಾಬ್ ರೊಬೊಟ್ಯಾಕ್ಸಿ. ಹೌದು, ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಕಂಪನಿಯ ಹೊಸ ಸೈಬರ್‌ಕ್ಯಾಬ್ ರೋಬೋಟ್ಯಾಕ್ಸಿ ಅನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ಮೂಲಕ ಬಹುದಿನಗಳ ಕಾಯುವಿಕೆಗೆ ತೆರೆ ಎಳೆಲಾಗಿದೆ. ವಿಶೇಷವೆಂದರೆ, ಇದು ಚಾಲಕರಹಿತ ಕಾರು ಆಗಿದೆ. ಟೆಸ್ಲಾ ಕಂಪನಿಯ ನೂತನ ಕಾರಿಗೆ 'ಸೈಬರ್‌ಕ್ಯಾಬ್' (Robotaxi) ಎಂದು ಹೆಸರಿಡಲಾಗಿದೆ. ಬನ್ನಿ, ಈ ಕಾರಿನ ವಿಶೇಷತೆಗಳೇನು? ಬೆಲೆ ಎಷ್ಟು? ಎನ್ನುವುದನ್ನು ತಿಳಿಯೋಣ.

ಕ್ಯಾಲಿಫೋರ್ನಿಯಾದ ಬರ್ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸೈಬರ್‌ಕ್ಯಾಬ್ ಅನ್ನು ಲಾಂಚ್ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಎಲೋನ್ ಮಸ್ಕ್ ರೋಬೋಟ್ಯಾಕ್ಸಿಯ ಮೂಲ ಮಾದರಿಯನ್ನು ಪ್ರದರ್ಶಿಸಿದರು. ಮತ್ತು ವಾಹನದ ಭವಿಷ್ಯದ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಲೈವ್ ಸ್ಟ್ರೀಮ್ ಅನ್ನು ಸಾಮಾಜಿಕ ಜಾಲತಾಣ 'ಎಕ್ಸ್‌' ನಲ್ಲಿ ಮಾಡಲಾಗಿದೆ. ಇದನ್ನು 43 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸೈಬರ್‌ಕ್ಯಾಬ್ ಉತ್ಪಾದನೆಯು 2026 ರ ಆರಂಭದಲ್ಲಿ ಪ್ರಾರಂಭವಾಗಬಹುದು ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

Tesla: ಟೆಸ್ಲಾ ಸೈಬರ್‌ಕ್ಯಾಬ್ ಬಿಡುಗಡೆ: ಸ್ಟೀರಿಂಗ್ ವೀಲ್ ಇಲ್ಲ.. ಪೆಡಲ್ ಇಲ್ಲ!

ಟೆಸ್ಲಾ ಸೈಬರ್‌ಕ್ಯಾಬ್ ಹೇಗಿದೆ ಗೊತ್ತಾ?

ರೋಬೋಟ್ಯಾಕ್ಸಿ ಒಂದು ಉದ್ದೇಶ ನಿರ್ಮಿತ ಸ್ವಾಯತ್ತ ವಾಹನವಾಗಿದೆ. ಈ ನೂತನ ಕಾರಿನಲ್ಲಿ ಸ್ಟೀರಿಂಗ್ ಚಕ್ರ ಅಥವಾ ಪೆಡಲ್‌ಗಳು ಇರುವುದಿಲ್ಲ. ಇದರರ್ಥ ಉತ್ಪಾದನೆಗೆ ಹೋಗುವ ಮೊದಲು ಅದು ಸರ್ಕಾರಿ ನಿಯಂತ್ರಕರಿಂದ ಅನುಮೋದನೆ ಪಡೆಯಬೇಕು. ಇದರ ವಿನ್ಯಾಸವು ಸಾಕಷ್ಟು ಫ್ಯೂಚರಿಸ್ಟಿಕ್ ಆಗಿದೆ. ಇದರಲ್ಲಿ ಚಿಟ್ಟೆ ರೆಕ್ಕೆಗಳಂತೆ ಬಾಗಿಲುಗಳು ಮೇಲಕ್ಕೆ ತೆರೆದುಕೊಳ್ಳುತ್ತವೆ. ಮತ್ತು ಸಣ್ಣ ಕ್ಯಾಬಿನ್ ಅನ್ನು ಒದಗಿಸಲಾಗಿದೆ. ಇದರಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: Nothing Phone 2a ಬೆಲೆ ಕುಸಿತ! ಧಮಾಕಾ ಆಫರ್.. ಕಡಿಮೆ ಬೆಲೆಗೆ ಸೇಲ್

ಟೆಸ್ಲಾ ಸೈಬರ್‌ಕ್ಯಾಬ್ ಬೆಲೆ ಎಷ್ಟು?

ಪ್ರೊಟೊಟೈಪ್ ಮಾಡೆಲ್ ಅನ್ನು ನೋಡಿದಾಗ ಅದರಲ್ಲಿ ಸ್ಟೀರಿಂಗ್ ವೀಲ್ ಅಥವಾ ಪೆಡಲ್ ಇಲ್ಲ. ಪ್ಲಗ್ ಅನ್ನು ಚಾರ್ಜ್ ಮಾಡಲು ಯಾವುದೇ ಸ್ಥಳವಿಲ್ಲ. ಈ ರೋಬೋಟ್ಯಾಕ್ಸಿ ವೈರ್‌ಲೆಸ್ ಮೂಲಕ ವಿದ್ಯುತ್ ಸ್ವೀಕರಿಸುತ್ತದೆ ಮತ್ತು ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ ಎಂದು ಕಂಪನಿಯ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. ಅಂದರೆ, ಇದು ಸ್ಮಾರ್ಟ್‌ಫೋನ್‌ನಂತೆ ವೈರ್‌ಲೆಸ್ ಚಾರ್ಜರ್ ತಂತ್ರಜ್ಞಾನವನ್ನು ಹೊಂದಿರಲಿದೆ. ಈ ಚಾಲಕರಹಿತ ಎಲೆಕ್ಟ್ರಿಕ್ ಕಾರಿನ ಬೆಲೆ $30,000 ಗಿಂತ ಕಡಿಮೆಯಿರುವ ನಿರೀಕ್ಷೆಯಿದೆ.

Tesla: ಟೆಸ್ಲಾ ಸೈಬರ್‌ಕ್ಯಾಬ್ ಬಿಡುಗಡೆ: ಸ್ಟೀರಿಂಗ್ ವೀಲ್ ಇಲ್ಲ.. ಪೆಡಲ್ ಇಲ್ಲ!

ಸಾಮಾನ್ಯ ಕಾರುಗಳಿಗಿಂತ ಸುರಕ್ಷಿತ ಈ ಸೈಬರ್‌ಕ್ಯಾಬ್!

ಸಾಮಾನ್ಯವಾಗಿ ಚಾಲಕರಹಿತ (ಡ್ರೈವರ್‌ಲೆಸ್) ಕಾರುಗಳು ಚಾಲನೆಗೆ ಸುರಕ್ಷಿತವಲ್ಲ ಎಂಬ ಮಾತಿದೆ. ಸ್ವಾಯತ್ತ ಚಾಲನೆ ಹೊಂದಿದ ಟೆಸ್ಲಾದ ಕಾರುಗಳಲ್ಲಿ ಹಲವು ಬಾರಿ ದೋಷಗಳು ಕಂಡುಬಂದಿವೆ. ಆದರೆ, ಇದರ ಹೊರತಾಗಿಯೂ, ಸ್ವಾಯತ್ತ ಕಾರುಗಳು ಯಾವುದೇ ಸಾಮಾನ್ಯ ಕಾರುಗಳಿಗಿಂತ (ಪ್ರಸ್ತುತ ಚಾಲಕರಹಿತ ಕಾರುಗಳು) 10 ರಿಂದ 20 ಪಟ್ಟು ಹೆಚ್ಚು ಸುರಕ್ಷಿತವಾಗಿರುತ್ತವೆ. ಮತ್ತು ನಗರ ಬಸ್‌ಗಳಿಗೆ ಪ್ರತಿ ಮೈಲಿಗೆ 1 ರೂ.ಗೆ ಹೋಲಿಸಿದರೆ, ಇವುಗಳ ಬೆಲೆ ಕೇವಲ 0.20 ರೂ. ಆಗಿರುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.

ಸೈಬರ್‌ಕ್ಯಾಬ್ ಉತ್ಪಾದನೆ ಪ್ರಾರಂಭ ಯಾವಾಗ?

ಟೆಸ್ಲಾ ಕಂಪನಿಯು ಮುಂದಿನ ವರ್ಷ ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಸಂಪೂರ್ಣ ಸ್ವಾಯತ್ತ ಚಾಲನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಸೈಬರ್‌ಕ್ಯಾಬ್ ಉತ್ಪಾದನೆಯು 2026 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ. ಆದಾಗ್ಯೂ, ಇದು 2027 ರವರೆಗೆ ವಿಸ್ತರಿಸಬಹುದು ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಇದಲ್ಲದೆ, ಟೆಸ್ಲಾ ಆಪ್ಟಿಮಸ್ ರೋಬೋಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು $20,000 ರಿಂದ 30,000 ಬೆಲೆಯಲ್ಲಿ ಲಭ್ಯವಿರಲಿದೆ.

Best Mobiles in India

English summary
Tesla Cybercab: Elon Musk announces Tesla Cybercab: A fully autonomous robotaxi without steering wheels or pedals
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+