ಕೈಗೆಟುವ ಬೆಲೆಯಲ್ಲಿ 'ಟೆಕ್ನೊ' ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಲಾಂಚ್.!
ಹಾಂಗ್‌ಕಾಂಗ್ ಮೂಲದ ಟ್ರಾನ್ಸಿಶನ್ ಹೊಲ್ಡಿಂಗ್ ಸಮೂಹದ ಸಬ್ ಬ್ರ್ಯಾಂಡ್ ಆಗಿರುವ ಟೆಕ್ನೊ ಕಂಪನಿಯು ಕಮೊನ್ ಶ್ರೇಣಿಯಲ್ಲಿ ಹಲವು ಹೊಸ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಭಾರತೀಯ ಮಾರುಕಟ್ಟೆಗೆ ಸಹ ಗುರುತಿಸಿಕೊಂಡಿದೆ. ಇದೀಗ ಕಂಪನಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ಮಿಡ್‌ರೇಂಜ್ ಗ್ರಾಹಕರನ್ನು ಸೆಳೆಯುವ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಟೆಕ್ನೊ ಕಂಪನಿಯು 'ಕ್ಯಾಮನ್ i4' ಹೆಸರಿನ ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಬೆಲೆ ಮತ್ತು ಕ್ಯಾಮೆರಾ ಫೀಚರ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನಲ್ಲಿ ಮೀಡಿಯಾ ಟೆಕ್ ಹಿಲಿಯೊ P22 SoC ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.

ಅತ್ಯುತ್ತಮ ಬ್ಯಾಟರಿ ಬಾಳಿಕೆಗೆ ಪವರ್‌ಫುಲ್ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ ಫಾಸ್ಟ್ ಚಾರ್ಜಿಂಗ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಮೂರು ವೇರಿಯಂಟ್ ಮಾದರಿಯ ಆಯ್ಕೆಯನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಅಪರೇಟಿಂಗ್ ಸಿಸ್ಟಮ್ ಇದರಲ್ಲಿದೆ. ಹಾಗಾದರೇ ಟೆಕ್ನೊ ಕ್ಯಾಮನ್ i4 ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ
720x1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 271 PPi ಆಗಿದೆ. ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅನುಪಾತವು ಶೇ.88.6 ಆಗಿದ್ದು, ಸ್ಕ್ರೀನ್ 19.5:9 ಅನುಪಾತವನ್ನು ಹೊಂದಿದೆ.

ಮೂರು ವೇರಿಯಂಟ್ಸ್
ಟೆಕ್ನೊ ಕ್ಯಾಮನ್ i4 ಸ್ಮಾರ್ಟ್‌ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು 2GB RAM ವೇರಿಯಂಟ, 3GB RAM ವೇರಿಯಂಟ್ ಮತ್ತು 4GB RAM ವೇರಿಯಂಟ್ ಆಗಿವೆ. ಇದರೊಂದಿಗೆ ಆಂತರಿಕ ಸಂಗ್ರಹಕ್ಕೆ 32GB ಮತ್ತು 64GB ಎರಡು ಆಯ್ಕೆಗಳನ್ನು ನೀಡಲಾಗಿದ್ದು, ಎಸ್‌ಡಿಕಾರ್ಡ್ ಮೂಲಕ 256GB ವಿಸ್ತರಿಸುವ ಅವಕಾಶ ನೀಡಲಾಗಿದೆ.

ಪ್ರೊಸೆಸರ್
ಟೆಕ್ನೊ ಕ್ಯಾಮನ್ i4 ಸ್ಮಾರ್ಟ್‌ಫೋನಿನ 2GB RAM ಮತ್ತು 3GB RAM ವೇರಿಯಂಟ್ ಮಾದರಿಯಲ್ಲಿ ಮೀಡಿಯಾ ಟೆಕ್ ಹಿಲಿಯೊ A22 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಹೊಂದಿದ್ದು, ಹಾಗೇ 4GB RAM ವೇರಿಯಂಟ್ ಮಾದರಿಯಲ್ಲಿ ಆಕ್ಟಾಕೋರ್ ಹಿಲಿಯೊ P22 SoC ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಕ್ಯಾಮೆರಾ 13ಎಂಪಿ ಸಾಮರ್ಥ್ಯದೊಂದಿಗೆ ಪ್ರಾಥಮಿಕ ಸೆನ್ಸಾರ್ ಹೊಂದಿದ್ದರೇ, ಸೆಕೆಂಡರಿ ಕ್ಯಾಮೆರಾವು 2 ಎಂಪಿ ಸಾಮರ್ಥ್ಯದೊಂದಿಗೆ ಡೆಪ್ತ್ ಸೆನ್ಸಾರ್ ಹೊಂದಿದೆ ಹಾಗೂ ಮೂರನೇ ಕ್ಯಾಮೆರಾ 8ಎಂಪಿ ಸಾಮರ್ಥ್ಯದೊಂದಿಗೆ 120 ಡಿಗ್ರಿ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ.

ಸೆಲ್ಫಿ ಕ್ಯಾಮೆರಾ
16 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದ್ದು, AI ಕೃತಕ ಬುದ್ದಿಮತ್ತೆ ಸಾಮರ್ಥ್ಯ ಬ್ಯೂಟಿ ಮೋಡ್ ಆಯ್ಕೆ ಇದ್ದು, ಫ್ರಂಟ್ ಸ್ಕ್ರೀನ್ ಫ್ಲ್ಯಾಶ್ ಸೌಲಭ್ಯವನ್ನು ಸಹ ನೀಡಲಾಗಿದೆ. ಇದರೊಂದಿಗೆ AR ಮೋಡ್, Algorithm 2.0 ಮತ್ತು AI ಆಟೋ ಸೀನ್ ಗ್ರಹಿಕೆ ಮಾಡುಬ ಆಯ್ಕೆಗಳನ್ನು ಸಹ ನೀಡಲಾಗಿದೆ.

ಬ್ಯಾಟರಿ
ಟೆಕ್ನೊ ಕ್ಯಾಮನ್ i4 ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಒಂದು ದಿನದ ಮಟ್ಟಿಗೆ ಬಾಟರಿ ಬಾಳಿಕೆ ಬರಲಿದೆ ಎನ್ನಬಹುದು. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳುತ್ತದೆ.

ಬೆಲೆ ಮತ್ತು ಬಣ್ಣ
ಟೆಕ್ನೊ ಕ್ಯಾಮನ್ i4 ಸ್ಮಾರ್ಟ್‌ಫೋನಿನ 2GB RAM ವೇರಿಯಂಟ್ ಮಾದರಿಯ ಫೋನ್ ಬೆಲೆಯು 9,599ರೂ.ಗಳು, 3GB RAM ವೇರಿಯಂಟ್ ಮಾದರಿಯ ಸ್ಮಾರ್ಟ್‌ಫೋನ್ ಬೆಲೆಯು 10,999ರೂ.ಗಳು ಹಾಗೂ 4GB RAM ವೇರಿಯಂಟ್ ಮಾದರಿಯ ಸ್ಮಾರ್ಟ್‌ಫೋನ್ 11,999ರೂ.ಗಳು ಆಗಿದೆ. ಮಿಡ್‌ನೈಟ್ ಬ್ಲ್ಯಾಕ್, ನೆಬೂಲಾ ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








