Subscribe to Gizbot

ಶಿಯಯೋ ನೋಟ್ 5 ಪ್ರೋ ಸೆಡ್ಡು: ಫೇಸ್‌ ID ಸೇರಿದಂತೆ ಅದೇ ವಿಶೇಷತೆ, ಬೆಲೆ ಅರ್ಧಕ್ಕಿಂತ ಕಡಿಮೆ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ದಿಕ್ಕೊಂದು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿವೆ. ಇದೇ ಮಾದರಿಯಲ್ಲಿ ಟೆಕ್ನೋ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಬಜೆಟ್ ಬೆಲೆಯಲ್ಲಿ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ತಲ್ಲಣವನ್ನು ಸೃಷ್ಠಿಸಿದೆ, ಬೆಲೆ ಬಜೆಟ್ ದಾದರರು ವಿಶೇಷತೆಗಳು ಮಾತ್ರವೇ ಅತ್ಯತ್ತಮವಾಗಿದೆ ಎನ್ನಲಾಗಿದೆ.

ನೋಟ್ 5 ಪ್ರೋ ಸೆಡ್ಡು: ಫೇಸ್‌ ID ಸೇರಿದಂತೆ ಅದೇ ವಿಶೇಷತೆ, ಬೆಲೆ ಕಡಿಮೆ..!

ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಟೆಕ್ನೋ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನ್ ರೂ.7,990ಕ್ಕೆ ಮಾರಾಟವಾಗಲಿದ್ದು, ಟಾಪ್ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ವಿಶೇಷತೆಗಳನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್ ಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಹಾಗಿದೆ.

ಓದಿರಿ: ಈ ಚುನಾವಣೆಯಲ್ಲಿ ನೀವು ಓಟ್‌ ಮಾಡಬಹುದಾ Or ಇಲ್ವಾ..? ಈಗಲೇ ಆನ್‌ಲೈನಿನಲ್ಲಿ ಚೆಕ್ ಮಾಡಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
18:9 ಅನುಪಾತದ ಡಿಸ್‌ಪ್ಲೇ:

18:9 ಅನುಪಾತದ ಡಿಸ್‌ಪ್ಲೇ:

ಟೆಕ್ನೋ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನ್ ನಲ್ಲಿ 5.45 ಇಂಚಿನ 18:9 ಅನುಪಾತದ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೆ ಇದರೊಂದಿಗೆ ವೇಗದ ಕಾರ್ಯಚರಣೆಗಾಗಿ ಮೀಡಿಯಾ ಟೆಕ್ MT6738 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ.

2GB RAM :

2GB RAM :

ವೇಗದ ಕಾರ್ಯಚರಣೆಗಾಗಿ ಟೆಕ್ನೋ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನಿನಲ್ಲಿ 2GB RAM ಅನ್ನು ಅಳವಡಿಲಾಗಿದೆ. ಅಲ್ಲದೇ 16GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದರೊಂದಿಗೆ ಲಭ್ಯವಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಟೆಕ್ನೋ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ ಡ್ಯುಯಲ್ ಟೂನ್ LED ಪ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾ ವನ್ನು ಅಳವಡಿಸಿದ್ದು, LED ಪ್ಲಾಷ್ ಲೈಟ್ ಸಹ ಇದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಟೆಕ್ನೋ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಫೇಸ್‌ ID ಸೇರಿದಂತೆ ಉನ್ನತ ಆಯ್ಕೆಗಳನ್ನು ಕಾಣಬಹುದಾಗಿದೆ.

What is Jio Cricket Gold Pass? How to Buy it
3050mAh ಬ್ಯಾಟರಿ:

3050mAh ಬ್ಯಾಟರಿ:

3050mAh ಬ್ಯಾಟರಿಯನ್ನು ಟೆಕ್ನೋ ಕಾಮೊನ್ ಐಸ್ಕೈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, 4G VoLTE ಸಪೋರ್ಟ್ ಮಾಡಲಿದೆ. ದೇಶದಲ್ಲಿರುವ ಪ್ರಮುಖ ರೀಟೇಲ್ ಸ್ಟೋರ್ ಗಳಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Tecno Camon iSky launched in India with 18:9 display and Face ID for Rs 7,990. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot