ಇಂದು Tecno Pova 6 Neo 5G ಗ್ರ್ಯಾಂಡ್ ಎಂಟ್ರಿ: 108MP ಕ್ಯಾಮೆರಾ, AI ಫೀಚರ್ಸ್!
ಟೆಕ್ನೋ ಸ್ಮಾರ್ಟ್‌ಫೋನ್ ಪ್ರಿಯರಿಗೆ ಇಂದು ವಿಶೇಷವಾದ ದಿನ. ಕಂಪನಿಯು ತನ್ನ ಭಾರತೀಯ ಗ್ರಾಹಕರಿಗಾಗಿ ಹೊಸ 5G ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ಇಂದು ಪೋವಾ (Pova) ಸರಣಿಯಲ್ಲಿ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಟೆಕ್ನೋ ಪೋವಾ 6 ನಿಯೋ 5G (Tecno Pova 6 Neo 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹೊಸ ಫೋನಿನ ವೈಶಿಷ್ಷ್ಯಗಳನ್ನು ತಿಳಿಯೋಣ ಬನ್ನಿ.
ಟೆಕ್ನೋ ಕಂಪನಿಯು ಈ ಹಿಂದೆ Tecno Pova 6 Neo 4G ಅನ್ನು ಬಿಡುಗಡೆ ಮಾಡಿತ್ತು. ಇದೀಗ, ಟೆಕ್ನೋ ಪೋವಾ 6 ನಿಯೋ 5G ಅನ್ನು ಇದರ ಉತ್ತರಾಧಿಕಾರಿಯಾಗಿ ಪರಿಚಯಿಸುತ್ತಿದೆ. ಟೆಕ್ನೋ ಪೋವಾ 6 ನಿಯೋ 4G ಫೋನ್ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು Mediatek Helio G99 Ultimate SoC ಪ್ರೊಸೆಸರ್ ಹೊಂದಿದೆ. ಈ ಫೋನ್ 7,000mAh ಬ್ಯಾಟರಿಯನ್ನು ಒಳಗೊಂಡಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗಲಿದೆ.

ಟೆಕ್ನೋ ಪೋವಾ 6 ನಿಯೋ 5G ಬಿಡುಗಡೆ ಯಾವಾಗ?
ಟೆಕ್ನೋ ಪೋವಾ 6 ನಿಯೋ 5G ಇಂದು (ಸೆಪ್ಟೆಂಬರ್ 11) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಲಾಂಚ್ ಆಗಲಿದೆ. ಮುಂಬರುವ ಹೊಸ ಸ್ಮಾರ್ಟ್‌ಫೋನ್ ಅಮೆಜಾನ್ ಪೋಸ್ಟ್ ಲಾಂಚ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಟೆಕ್ನೋ ಪೋವಾ 6 ನಿಯೋ 5G ಫೋನ್ 108 ಮೆಗಾಪಿಕ್ಸೆಲ್ ಎಐ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ, AIGC ಪೋರ್ಟ್ರೇಟ್, ಎಐ ಕಟೌಟ್, ಎಐ ಮ್ಯಾಜಿಕ್ ಎರೇಸರ್ ಮತ್ತು Ask AI ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಟೆಕ್ನೋ ಪೋವಾ 6 ನಿಯೋ 5G ವೈಶಿಷ್ಟ್ಯಗಳು
ಟೆಕ್ನೋ ಪೋವಾ 6 ನಿಯೋ 5G ಫೋನ್ 6.78 ಇಂಚಿನ FHD+ 120Hz ಡಾಟ್-ಇನ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು Mediatek Helio G99 Ultimate SoC ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು Infinix Note 40 Pro ನಲ್ಲಿಯೂ ಕಂಡುಬರುತ್ತದೆ. ಇದು ವೂಪಿಂಗ್ 7,000mAh ಬ್ಯಾಟರಿಯನ್ನು ಒಳಗೊಂಡಿದೆ ಮತ್ತು Android 14 ಅನ್ನು ನಿರ್ವಹಿಸುತ್ತದೆ.
ಮುಂಬರು ಟೆಕ್ನೋ ಪೋವಾ 6 ನಿಯೋ 5G ಫೋನ್, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಆದರೆ, ಸ್ಮಾರ್ಟ್‌ಫೋನಿನ 5G ರೂಪಾಂತರವು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಬರುತ್ತದೆ ಎಂದು ದೃಢಪಡಿಸಲಾಗಿದೆ. 4G ರೂಪಾಂತರವು ವೈಫೈ, NFC, GPS, ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಇನ್ನಿತರೆ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಇದನ್ನೂ ಓದಿ: ಸದ್ದಿಲ್ಲದೆ Tecno Spark 30C ಲಾಂಚ್ ; 50MP ಕ್ಯಾಮೆರಾ.. 5000mAh ಬ್ಯಾಟರಿ.. ಕಡಿಮೆ ಬೆಲೆ!
ಟೆಕ್ನೋ ಪೋವಾ 6 ನಿಯೋ 4G ವೈಶಿಷ್ಟ್ಯಗಳು
ಟೆಕ್ನೋ ಪೋವಾ 6 ನಿಯೋ 4G ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 6.78-ಇಂಚಿನ ಪೂರ್ಣ HD+ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಕಟೌಟ್ (ನಾಚ್), 120 Hz ರಿಫ್ರೆಶ್ ದರವನ್ನು ಹೊಂದಿದೆ. ಇದನ್ನು MediaTek Helio G99 ಅಲ್ಟಿಮೇಟ್ ಆಕ್ಟಾಕೋರ್ ಪ್ರೊಸೆಸರ್ 6ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಚಿಪ್‌ಸೆಟ್‌ನ ಗಡಿಯಾರದ ವೇಗ 2.2 GHz ಆಗಿದೆ. ಇದು 8GB RAM, 8GB ವರ್ಚುವಲ್ RAM ಹೊಂದಿದೆ.
ಟೆಕ್ನೋ ಪೋವಾ 6 ನಿಯೋ 4G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಎಐ ಸೆಕೆಂಡರಿ ಲೆನ್ಸ್ ಅನ್ನು ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ ಡ್ಯುಯಲ್ ಸಿಮ್, 4G, 3.5 ಎಂಎಂ ಆಡಿಯೋ ಜ್ಯಾಕ್, ಸ್ಟೀರಿಯೋ ಸ್ಪೀಕರ್‌ಗಳು, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 5 GHz ವೈ-ಫೈ, ಬ್ಲೂಟೂತ್ 5.1 ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








