ಸದ್ದಿಲ್ಲದೆ Tecno Spark 30C ಲಾಂಚ್ ; 50MP ಕ್ಯಾಮೆರಾ.. 5000mAh ಬ್ಯಾಟರಿ.. ಕಡಿಮೆ ಬೆಲೆ!
Tecno Spark 30C Launched: ಟೆಕ್ನೋ (Tecno) ಕಂಪನಿಯು ತನ್ನ ಗ್ರಾಹಕರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಸದ್ದಿಲ್ಲದೇ ಹೊಸ ಬಜೆಟ್ ಫೋನನ್ನು ಬಿಡುಗಡೆ ಮಾಡಿದೆ. ಹೌದು, ಟೆಕ್ನೋ ಸ್ಪಾರ್ಕ್ 30C (Tecno Spark 30C) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಟೆಕ್ನೋ ಸ್ಪಾರ್ಕ್ 20Cಯ ಉತ್ತರಾಧಿಕಾರಿಯಾಗಿದೆ. ಈ ಹೊಸ ಫೋನ್ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನನ್ನು ದೊಡ್ಡ ಡಿಸ್ಪ್ಲೇ ಮತ್ತು ನಾಲ್ಕು ಸ್ಟೋರೇಜ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಟೆಕ್ನೋ ಕಂಪನಿಯು ಸ್ಪಾರ್ಕ್ 30C ಅನ್ನು ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಹೊಸ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರಲಿದೆ. ಇದು 6.67 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, MediaTek Helio G81 ಚಿಪ್ಸೆಟ್, ವಿಸ್ತೃತ ತಂತ್ರಜ್ಞಾನದ ಸಹಾಯದಿಂದ 16 GB RAM, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000 mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟೆಕ್ನೋ ಸ್ಪಾರ್ಕ್ 30C ಬೆಲೆ ಎಷ್ಟು?
ಟೆಕ್ನೋ ಸ್ಪಾರ್ಕ್ 30C ಮೊಬೈಲ್ ನಾಲ್ಕು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದು 4GB + 128GB, 6GB + 128GB, 4GB + 256GB ಮತ್ತು 8GB + 256GB ಸ್ಟೋರೇಜ್ ರೂಪಾಂತರಗಳನ್ನು ಒಳಗೊಂಡಿದೆ. ಪ್ರಸ್ತುತ ಕಂಪನಿಯು ಈ ಫೋನಿನ ಬೆಲೆಯನ್ನು ಪ್ರಕಟಿಸಿಲ್ಲ. ಆದರೆ, ಈ ಬಗ್ಗ ಶೀಘ್ರದಲ್ಲೇ ಮಾಹಿತಿ ಬಹಿರಂಗವಾಗಲಿದೆ. ಈ ಫೋನನ್ನು ಆರ್ಬಿಟ್ ಬ್ಲಾಕ್, ಮ್ಯಾಜಿಕ್ ಸ್ಕಿನ್ 3.0 ಮತ್ತು ಆರ್ಬಿಟ್ ವೈಟ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಟೆಕ್ನೋ ಸ್ಪಾರ್ಕ್ 30C ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಸ್ಪಾರ್ಕ್ 30C ಸ್ಮಾರ್ಟ್‌ಫೋನ್ ದೊಡ್ಡ 6.67 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 720 x 1600 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಅಲ್ಲದೆ ಮುಂಭಾಗದ ಡಿಸ್ಪ್ಲೇಯು ಪಂಚ್ ಹೋಲ್ ವಿನ್ಯಾಸದಿಂದ ಕೂಡಿದೆ.
ಪ್ರೊಸೆಸರ್: ಟೆಕ್ನೋದ ಬಜೆಟ್ ಸ್ಮಾರ್ಟ್‌ಫೋನ್ ಸ್ಪಾರ್ಕ್ 30C MediaTek Helio G81 ಚಿಪ್ಸೆಟ್ ಅನ್ನು ಹೊಂದಿದೆ. ಇದರ ಸಹಾಯದಿಂದ ನೀವು ಸುಗಮ ಅನುಭವವನ್ನು ಹೊಂದಲು ಅವಕಾಶವನ್ನು ಪಡೆಯಬಹುದು. ಟೆಕ್ನೋ ಸ್ಪಾರ್ಕ್ 30C ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.
ಸ್ಟೋರೇಜ್: ಟೆಕ್ನೋ ಸ್ಪಾರ್ಕ್ 30C ಸ್ಮಾರ್ಟ್‌ಫೋನ್ ನಾಲ್ಕು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 8GB RAM ಮತ್ತು 256 GB ವರೆಗಿನ ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಇದು ಮಾತ್ರವಲ್ಲದೆ, 8GB ವರೆಗಿನ ವಿಸ್ತೃತ RAM ಬೆಂಬಲವು ಈ ಫೋನಿನಲ್ಲಿ ಲಭ್ಯವಿದೆ. ಇದರ ಸಹಾಯದಿಂದ ನೀವು 16GB ವರೆಗೆ ಹೆಚ್ಚಿಸಬಹುದು.
ಈ ಸುದ್ದಿ ಓದಿದ್ದೀರಾ?: Tecno Spark Go 1 ಸೇಲ್ ಶುರು: ಅಗ್ಗದ ಬೆಲೆ.. ಬಂಪರ್ ಆಫರ್!
ಕ್ಯಾಮೆರಾ: ಈ ಸ್ಮಾರ್ಟ್‌ಫೋನ್ ಡ್ಯುಯಲ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ, ಸೆಲ್ಪಿ ಮತ್ತು ವಿಡಿಯೋ ಕರೆಗಾಗಿ, ಡ್ಯುಯಲ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ನೀವು ಫೋನ್‌ನಿಂದ ಉತ್ತಮ ಕ್ಯಾಮೆರಾ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ.
ಬ್ಯಾಟರಿ: ಈ ಬಜೆಟ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 18 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲವಿದೆ.
ಇತರೆ ವೈಶಿಷ್ಟ್ಯಗಳು: ಟೆಕ್ನೋ ಸ್ಪಾರ್ಕ್ 30C ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸ್ಪೀಕರ್, DTS ಸೌಂಡ್, ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ IP54 ರೇಟಿಂಗ್, ಡ್ಯುಯಲ್ ಸಿಮ್ 4G, ವೈಫೈ ಬ್ಲೂಟೂತ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








