Tecno: 8,999 ರೂ.ಗೆ 5G ಫೋನ್! 5000mAh ಬ್ಯಾಟರಿ.. 50MP ಕ್ಯಾಮೆರಾ; ಲಾಂಚ್ ಯಾವಾಗ?
ಟೆಕ್ನೋ ತನ್ನ 'ಸ್ಪಾರ್ಕ್' ಸರಣಿಯ ಅಡಿಯಲ್ಲಿ ಸ್ಪಾರ್ಕ್ 30C 4G (Tecno Spark 30C 4G) ಮೊಬೈಲ್ ಅನ್ನು ಇದೇ ತಿಂಗಳು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ, ಕಂಪನಿಯು ಭಾರತದಲ್ಲಿ ಈ ಫೋನಿನ '5G ಮಾಡೆಲ್' ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಮೊಬೈಲ್‌ಗೆ ಸಂಬಂಧಿಸಿದಂತೆ ಟೆಕ್ನೋ ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ. ಆದಾಗ್ಯೂ, ಟೆಕ್ನೋ ಸ್ಪಾರ್ಕ್ 30C 5G (Tecno Spark 30C 5G) ಭಾರತ ಬಿಡುಗಡೆ, ಬೆಲೆ ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿವೆ.
ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಅನ್ನು ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮುಂಬರುವ ಈ ಫೋನ್ ಅಗ್ಗದ ಬೆಲೆಯಲ್ಲಿ ಲಭ್ಯವಿರಲಿದೆ. ಇದು 6.67 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ, MediaTek Helio G81 ಚಿಪ್ಸೆಟ್, ವಿಸ್ತೃತ ತಂತ್ರಜ್ಞಾನದ ಸಹಾಯದಿಂದ 16 GB RAM, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಟೆಕ್ನೋ ಸ್ಪಾರ್ಕ್ 30C 5G ಫೋನಿನ ಬೆಲೆ (ಸೋರಿಕೆ)
4GB RAM + 64GB ಸ್ಟೋರೇಜ್ ಬೆಲೆ = 8,999 ರೂ.
4GB RAM + 128GB ಸ್ಟೋರೇಜ್ ಬೆಲೆ = 9,499 ರೂ.
ಮುಂಬರುವ ಟೆಕ್ನೋ ಸ್ಪಾರ್ಕ್ 30C 5G ಫೋನಿನ ವಿವರಗಳನ್ನು ದಿ ಟೆಕ್ ಔಟ್‌ಲುಕ್ (The Tech Outlook) ವೆಬ್‌ಸೈಟ್ ಮೂಲಕ ಬಹಿರಂಗಪಡಿಸಲಾಗಿದೆ. ವೆಬ್‌ಸೈಟ್ ವರದಿಯಲ್ಲಿ, ಮುಂಬರುವ 5G ಟೆಕ್ನೋ ಫೋನ್ ಭಾರತದಲ್ಲಿ 4GB RAM ನೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, ಮೂಲ ಮಾದರಿಯು 64GB ಸ್ಟೋರೇಜ್ ಜೊತೆಗೆ 4GB RAM ಅನ್ನು ಹೊಂದಿರಲಿದೆ. ಇದರ ಬೆಲೆ 8,999 ರೂ. ಇರಲಿದೆ. ಅದೇ ರೀತಿ, 128GB ಸ್ಟೋರೇಜ್ ರೂಪಾಂತರದ ಬೆಲೆ 9,499 ರೂ. ಆಗಿರುತ್ತದೆ.
ಟೆಕ್ನೋ ಸ್ಪಾರ್ಕ್ 30C 5G ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ: ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಫೋನನ್ನು 6.67 ಇಂಚಿನ LCD ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಬಹುದು. ಇದು 120Hz ರಿಫ್ರೆಶ್ ದರ ಮತ್ತು 720 x 1600 ಪಿಕ್ಸೆಲ್ ರೆಸಲ್ಯೂಶನ್ ಪಡೆದಿರಲಿದೆ. ಮುಂಭಾಗದ ಡಿಸ್ಪ್ಲೇಯು ಪಂಚ್ ಹೋಲ್ ವಿನ್ಯಾಸ ಒಳಗೊಂಡಿರಲಿದೆ.
ಪ್ರೊಸೆಸರ್: ಮುಂಬರುವ ಟೆಕ್ನೋ ಸ್ಮಾರ್ಟ್‌ಫೋನ್ MediaTek Helio G81 ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಈ ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ?: TECNO: ಈ ದೈತ್ಯ ಫೋನಿನ ಬೆಲೆ ಭಾರೀ ಇಳಿಕೆ: ಕೇವಲ 29,899 ರೂ.! ಖರೀದಿ ಎಲ್ಲಿ?
ಕ್ಯಾಮೆರಾ: ಟೆಕ್ನೋ ಸ್ಪಾರ್ಕ್ 30C 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. ಇದು ಡ್ಯುಯಲ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಬರಲಿದೆ. ಸೆಲ್ಪಿ ಮತ್ತು ವಿಡಿಯೋ ಕರೆಗಾಗಿ, ಡ್ಯುಯಲ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.
ಬ್ಯಾಟರಿ: ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಇತರೆ ವೈಶಿಷ್ಟ್ಯಗಳು: ಟೆಕ್ನೋ ಸ್ಪಾರ್ಕ್ 30C 5G ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸ್ಪೀಕರ್, DTS ಸೌಂಡ್, ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ IP54 ರೇಟಿಂಗ್, ಡ್ಯುಯಲ್ ಸಿಮ್ 4G, ವೈಫೈ ಬ್ಲೂಟೂತ್ ನಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.


Click it and Unblock the Notifications








