ಇಲ್ಲಿವೇ ನೋಡಿ ಗ್ರಾಹಕರನ್ನು ಸೆಳೆಯುತ್ತಿರುವ ಟಾಪ್ 'ಸ್ಯಾಮ್‌ಸಂಗ್' ಸ್ಮಾರ್ಟ್‌ಫೋನ್‌ಗಳು!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಮ್‌ಸಂಗ್ ಇತ್ತೀಚಿಗೆ ಹೊಸದಾಗಿ ಅಗ್ಗದ ದರದಿಂದ ಹೈ ಎಂಡ್ ರೇಂಜ್‌ವರೆಗಿನ ಹಲವು ಶ್ರೇಣಿಗಳನ್ನು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಈ ಮೂಲಕ ಮತ್ತೆ ಎಲ್ಲ ವರ್ಗದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಜೊತೆಗೆ ಚೀನಾ ಸ್ಮಾರ್ಟ್‌ಫೋನ್ ಓಟಕ್ಕೆ ಲಗಾಮು ಹಾಕುತ್ತಿದ್ದು, ಹೀಗಾಗಿ ಇವತ್ತಿಗೂ ಸ್ಮಾರ್ಟ್‌ಫೋನ್ ಪ್ರಿಯರ ಹಾಟ್ ಫೇವರೇಟ್ ಮೊಬೈಲ್ ಕಂಪನಿ ಸ್ಯಾಮ್‌ಸಂಗ್ ಆಗಿದೆ.

ಒಂದೇ ತರಹದ ರಚನೆಯನ್ನು ಹೊಂದಿರುತ್ತವೆ ಎನ್ನುವ ಅಭಿಪ್ರಾಯಗಳು ಗ್ರಾಹಕರು ವ್ಯಕ್ತಪಡಿಸುತ್ತಿದ್ದರು, ಆದರೆ ಕಂಪನಿ ಸ್ಮಾರ್ಟ್‌ಫೋನ್ ರಚನೆ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಕಂಡುಕೊಂಡಿದ್ದು, ಅದರೊಂದಿಗೆ ಕ್ಯಾಮೆರಾ, ಡಿಸ್‌ಪ್ಲೇ, ಪ್ರೊಸೆಸರ್, ಬ್ಯಾಟರಿ ಮತ್ತು ಸೆನ್ಸಾರ್ ಆಯ್ಕೆಗಳಲ್ಲಿ ನೂತನ ಫೀಚರ್ಸ್‌ಗಳನ್ನು ಸಹ ಅಳವಡಿಸಿಕೊಂಡಿದೆ. ಹಾಗಾದರೇ ಸದ್ಯ ಗ್ರಾಹಕರನ್ನು ಸೆಳೆಯುತ್ತಿರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಮೂರು ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲ್ ಆಗಿವೆ. Exynos 9610 ಚಿಪ್‌ಸೆಟ್ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ30
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್ ಮತ್ತು 16 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇದೆ. Exynos 7904 ಚಿಪ್‌ಸೆಟ್ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್10 ಪ್ಲಸ್
6.4 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇ ಮತ್ತು ಫೋನ್ ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಅವು 12+12+16 ಮೆಗಪಿಕ್ಸಲ್ ಸಾಮರ್ಥ್ಯದಲ್ಲಿವೆ ಹಾಗೂ ಸೆಲ್ಫಿಗಾಗಿ 10+8 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಎರಡು ಕ್ಯಾಮೆರಾ ಒದಗಿಸಲಾಗಿದೆ. Exynos 9820 ಸಾಮರ್ಥ್ಯದ ಚಿಪ್‌ಸೆಟ್ ನೊಂದಿಗೆ 12 GB RAM/1 TB ಮತ್ತು 8 GB RAM/128/512 GB ಸಾಮರ್ಥ್ಯದಲ್ಲಿ ಸ್ಟೋರೆಜ್ ಆಯ್ಕೆ ದೊರೆಯಲಿದ್ದು, 4100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ40
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.9 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿವೆ. Exynos 7885 ಚಿಪ್‌ಸೆಟ್ ಜೊತೆಗೆ 6GB RAM/64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 3100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ20
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್ ಮತ್ತು 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇದೆ. Exynos 7904 ಚಿಪ್‌ಸೆಟ್ ಜೊತೆಗೆ 6/3 GB RAM ಮತ್ತು 32/64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್ 10
6.1 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇ ಮತ್ತು ಫೋನ್ ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಅವು 12+12+16 ಮೆಗಪಿಕ್ಸಲ್ ಸಾಮರ್ಥ್ಯದಲ್ಲಿವೆ ಹಾಗೂ ಸೆಲ್ಫಿಗಾಗಿ 10 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ. Exynos 9820 ಸಾಮರ್ಥ್ಯದ ಚಿಪ್‌ಸೆಟ್ ನೊಂದಿಗೆ 8 GB RAM ಮತ್ತು 128/512 GB ಸಾಮರ್ಥ್ಯದ ಸ್ಟೋರೆಜ್ ಆಯ್ಕೆ ದೊರೆಯಲಿದ್ದು, 3400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ 30
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 16 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿವೆ. Exynos 7904 ಚಿಪ್‌ಸೆಟ್ ಜೊತೆಗೆ 3GB RAM/32 GB ಮತ್ತು 4GB RAM /64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








