ಸ್ಮಾರ್ಟ್‌ಫೋನ್ "ಹಾನರ್ 6ಎಸ್" ಖರೀದಿಸಲು ಎಲ್ಲೆಲ್ಲೂ ಕ್ಯೂ!! ಏನಿದೆ ಅಂತಹ ಫೀಚರ್?

Written By:

ನಿಜವಾಗಿಯೋ ಒಂದು ಕಷ್ಟದ ಕೆಲಸ ಎಂದರೆ ಮಾರುಕಟ್ಟೆಯಲ್ಲಿರುವ ಯಾವ ಸ್ಮಾರ್ಟ್‌ಫೊನ್‌ ಖರೀದಿಸಿದರೆ ಉತ್ತಮ ಎಂಬುದು.! ಹೌದು, ಒಂದು ಉತ್ತಮ ಸ್ಮಾರ್ಟ್‌ಫೊನ್ ಖರೀದಿಸಲು ಸಾವಿರ ಸಲ ಯೋಚಿಸಬೇಕಾಗುತ್ತದೆ. ಒಮ್ಮೆ ಖರ್ಚು ಮಾಡಿದರೆ ನಮ್ಮ ಬಜೆಟ್‌ಗೆ ಸರಿಹೊಂದುವಂತಹ ಸ್ಮಾರ್ಟ್‌ಫೋನ್ ಯಾವುದು ಎಂಬುದನ್ನು ಎಲ್ಲರೂ ಹುಡುಕುತ್ತಾರೆ.!!

ಆದರೆ, ಒಂದು ಒಳ್ಳೆಯ ಬಜೆಟ್ ಸ್ಮಾರ್ಟ್‌ಫೊನ್ ಹುಡುಕುವುದು ಹಲವರಿಗೆ ಕಷ್ಟವಾಗುತ್ತದೆ. ಹಾಗಾಗಿಯೇ ನಾವು ಪ್ರಸ್ತುತ ಸಮಯದಲ್ಲಿ ಖರೀದಿಸಬಹುದಾದ ಒಂದು ಅತ್ಯತ್ತಮ ಸ್ಮಾರ್ಟ್‌ಫೋನ್ ಯಾವುದು. ಆ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬೆಲ್ಲಾ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ!!

ನೋಕಿಯಾದ ಬೆಸ್ಟ್ ಬೇಸಿಕ್ ಮೊಬೈಲ್ "ನೋಕಿಯಾ 3320" ರೀ ಲಾಂಚ್!!

ಹಾಗಾಗಿ, ಪ್ರಸ್ತುತದಲ್ಲಿ ನೀವು ಖರೀದಿಸಬಹುದಾದ ಅತ್ಯತ್ತಮ ಸ್ಮಾರ್ಟ್‌ಫೋನ್ ಎಂದರೆ ಹಾನರ್ 6ಎಸ್‌ ಸ್ಮಾರ್ಟ್‌ಫೋನ್!! ಸ್ಮಾರ್ಟ್‌ಫೊನ್ ಹೊಂದಿರಬೇಕಾದ ಬಹುತೇಕ ಎಲ್ಲಾ ಫೀಚರ್‌ಗಳನ್ನು ಹೊಂದಿರುವ ಹಾನರ್ 6ಎಸ್ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಇಂದಿನ ನಂಬರ್ ಒನ್ ಸ್ಮಾರ್ಟ್‌ಫೊನ್ ಆಗಿದೆ.!! ಹಾಗಾದರೇ ಹಾನರ್ 6ಎಸ್ ಯಾವೆಲ್ಲಾ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸನ್‌ಲೈಟ್ ಕಂಡಿಷನ್ ಹೊಂದಿರುವ 5.5 ಇಂಚ್ ಡಿಸ್‌ಪ್ಲೇ!!

ಸನ್‌ಲೈಟ್ ಕಂಡಿಷನ್ ಹೊಂದಿರುವ 5.5 ಇಂಚ್ ಡಿಸ್‌ಪ್ಲೇ!!

ಒಂದು ಸ್ಮಾರ್ಟ್‌ಫೋನ್ 5.5 ಇಂಚ್ ಡಿಸ್‌ಪ್ಲೇ ಹೊಂದಿದ್ದರೆ ಬಳಕೆಗೆ ಒಳ್ಳೆಯ ಅನುಭವ ನೀಡುತ್ತದೆ. 1080*1920 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿರುವ ಹಾನರ್ 6ಎಸ್ ಸನ್‌ಲೈಟ್ ಕಂಡಿಷನ್ ಕಂಡಿಷನ್‌ನಲ್ಲುಯೋ ಅತ್ಯತ್ತಮ ಕಾರ್ಯ್ ನಿರ್ವಹಣೆ ನೀಡುತ್ತದೆ. ಮತ್ತು ನಿಮ್ಮಿಷ್ಟದ ಕಲರ್ ಟೆಂಪರೇಚರ್ ಬದಲಾಯಿಸುವ ಅವಕಾಶವನ್ನು ಹೊಂದಿದೆ.

ಹುವಾವೆ 655 ಕಿರಿನ್ ಚಿಪ್ ಮತ್ತು 4GB RAM!!

ಹುವಾವೆ 655 ಕಿರಿನ್ ಚಿಪ್ ಮತ್ತು 4GB RAM!!

ಹುವಾವೆ ಕಂಪೆನಿ ಡೆವಲಪ್ ಮಾಡಿರುವ ಹುವಾವೆ ಕಿರಿನ್ ಚಿಪ್‌ಸೆಟ್ ಮತ್ತು ಫೋರ್ ಕೋರ್ ಕ್ಲಾಕ್ 2.1 ghz ಪ್ರೊಸೆಸರ್ ಹೊಂದಿರುವ ಹಾನರ್ 6ಎಸ್ ಅತ್ಯುತ್ತಮ ಎನ್ನುವಂತೆ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿದೆ. ಕಿರಿನ್ ಚಿಪ್‌ಸೆಟ್ 3D ಗೇಮ್‌ಗಳಿಗೆ ಹೆಚ್ಚು ಸಪೋರ್ಟ್ ಮಾಡುವಹಾಗೆ ವಿನ್ಯಾಸ ಮಾಡಲಾಗಿದೆ. ಇನ್ನು 50 ಕ್ಕು ಹೆಚ್ಚ ಅಪ್‌ಗಳನ್ನು ಒಮ್ಮೆಲೇ ಬಳಕೆ ಮಾಡುವ ಶಕ್ತಿಯನ್ನು ಈ ಸ್ಮಾರ್ಟ್ಫೋನ್ ಹೊಂದಿದೆ.

ಹಾನರ್ 6ಎಸ್ ಕ್ಯಾಮೆರಾನೆ ಬೆಸ್ಟ್‌.!!

ಹಾನರ್ 6ಎಸ್ ಕ್ಯಾಮೆರಾನೆ ಬೆಸ್ಟ್‌.!!

ಹುವಾವೇ ಸರಣಿ ಸ್ಮಾರ್ಟ್‌ಫೊನ್‌ಗಳಲ್ಲಿ ಹಾನರ್ 6ಎಸ್ ಸ್ಮಾರ್ಟ್‌ಫೊನ್ ಕ್ಯಾಮೆರಾ ಹೈ ಎಂಡ್ ವರ್ಷನ್‌ನಲ್ಲಿ ಬಂದಿದೆ. ಹಾನರ್ 6ಎಸ್‌ನಲ್ಲಿ 12MP ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಇದ್ದು, 2.2 ಅಪಾರ್ಚ್ರ್ ಫೋಕಸ್ ನೀಡಲಿದೆ. ಕಡಿಮೆ ಪಿಕ್ಸೆಲ್ ಕ್ಯಾಮೆರಾ ಆದರೂ ಅತ್ಯುತ್ತಮ ಎನ್ನುವಂತಹ ಚಿತ್ರಗಳನ್ನು ಹಾನರ್ 6ಎಸ್ ಸ್ಮಾರ್ಟ್‌ಫೋನ್ ಮೂಲಕ ತೆಗೆಯಬಹುದು. ಇನ್ನು ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಹೊಂದಿದ್ದು, ಅತ್ಯುತ್ತಮ ಸೆಲ್ಫಿ ತೆಗೆಯಬಹುದಾಗಿದೆ.

4G ಜೊತೆಗೆ ಹೈ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್.!!

4G ಜೊತೆಗೆ ಹೈ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್.!!

ಜಿಯೋ ಬಂದ ನಂತರ 4G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೆಲೆ ಬಂತು ಎನ್ನಬಹುದು. ಇದೀಗ ಬಿಡುಗಡೆಯಾಗಿರುವ ಹಾನರ್ 6ಎಸ್ 4G ಕನೆಕ್ಟಿವಿಟಿ ಹೊಂದಿದೆ. ಇನ್ನು ಬ್ಲೂಟೂತ್ ಮತ್ತು ಫೈಲ್ ಶೇರ್‌ಗಳಿಗಾಗಿ ಚಿಪ್‌ಸೆಟ್ ಹೆಚ್ಚು ಸಪೋರ್ಟ್ ಮಾಡಲಿದ್ದು, ಅತ್ಯುತ್ತಮ ಹೈ ಕನೆಕ್ಟಿವಿಟಿ ಸ್ಮಾರ್ಟ್‌ಫೋನ್ ಎಂದು ಹೇಳಬಹದು.!

ಫಿಂಗರ್‌ಪ್ರಿಂಟ್ ಫೀಚರ್ ಮತ್ತು ಬೆಲೆ!!

ಫಿಂಗರ್‌ಪ್ರಿಂಟ್ ಫೀಚರ್ ಮತ್ತು ಬೆಲೆ!!

ಸ್ಮಾರ್ಟ್‌ಫೋನ್‌ಗಳಿಗೆ ಫಿಂಗರ್‌ಪ್ರಿಂಟ್ ಇರಲೇಬೆಕು ಎನ್ನುವುದು ಇಂದಿನ ಜನರ ಟ್ರೆಂಡ್ ಆಗಿದೆ. ಇನ್ನು ಹಾನರ್ 6ಎಸ್ ಅತ್ಯುತ್ತಮ ಬೆಳಕಿನ ವೇಗದ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದು, ಸ್ಮಾರ್ಟ್‌ಫೊನ್ ಸೆಕ್ಯುರಿಟಿ ಉತ್ತಮವಾಗಿದೆ ಎನ್ನಬಹುದು. ಇಷ್ಟೆಲ್ಲಾ ಫೀಚರ್‌ಗಳನ್ನು ಒಳಗೊಂಡಿರುವ ಹಾನರ್ 6ಎಸ್ ಸ್ಮಾರ್ಟ್ಫೊನ್ 9,999 ರೂಪಾಯಿಗಳಿಂದ 12,999 ರೂಪಾಯಿಗಳ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದ್ದು, ಪ್ರಸ್ತುತ ಖರೀದಿಸಲು ಅತ್ಯುತ್ತಮ ಸ್ಮಾರ್ಟ್ಫೊನ್ ಎನ್ನಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Huawei Honor 6X packs in incredible specifications such as a 4GB of RAM, dual rear camera, all at an affordable price tag.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot