ಶೀಘ್ರದಲ್ಲಿಯೇ 'ಹುವಾಯಿ' ರಿಲೀಸ್ ಮಾಡಲಿದೆ '5G ಫೊಲ್ಡೆಬಲ್' ಸ್ಮಾರ್ಟ್‌ಫೋನ್!!
ಈ ವರ್ಷ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಸಾಕಷ್ಟು ಹೊಸತನದ ಫೀಚರ್ಸ್‌ಗಳು ಬರಲಿದ್ದು, ಸ್ಮಾರ್ಟ್‌ಫೋನ್ ಪ್ರಿಯರಿಗಂತು ಭಾರೀ ಖುಷಿ ನೀಡಲಿವೆ. ಈಗಾಗಾಲೇ ಪ್ರಮುಖ ಕೆಲವು ಮೊಬೈಲ್ ಕಂಪನಿಗಳು ಅತ್ಯುತ್ತಮ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ, ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಫೀಚರ್ ಅನ್ನು ತಮ್ಮ ಹೊಸ ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸಿವೆ. ಈ ಲಿಸ್ಟಿಗಿಗ 'ಫೊಲ್ಡೆಬಲ್ ಸ್ಮಾರ್ಟ್‌ಫೋನ್'ಗಳು ಸೇರಿಕೊಳ್ಳಲಿವೆ.

ಫೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ ಸ್ಯಾಮ್‌ಸಂಗ್, ಶಿಯೋಮಿ, ಎಲ್‌ಜಿ, ಮೊಟೊರೊಲಾ ಕಂಪನಿಗಳು ಘೋಷಿಸಿದ್ದು, ಇದೀಗ ಜನಪ್ರಿಯ ಹುವಾಯಿ ಕಂಪನಿಯು ಸಹ ಫೊಲ್ಡೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸೂಚನೆ ಸಿಕ್ಕಿದ್ದು, ಈ ಕುರಿತು ಫೋನಿನ ಫೋಟೋ ಮತ್ತು ಕಿರು ಮಾಹಿತಿಗಳು ಲೀಕ್ ಆಗಿವೆ. ಈ ಫೊಲ್ಡೆಬಲ್ ಸ್ಮಾರ್ಟ್‌ಫೋನ್ 'ಹುವಾಯಿ ಮೇಟ್ X' ಹೆಸರಿನಿಂದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.
ಮೊನ್ನೆ ರಿಲೀಸ್ ಆಗಿರುವ ಸ್ಯಾಮ್‌ಸಂಗ್ ಫೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಿಂತ ಭಿನ್ನವಾದ ರಚನೆಯನ್ನು ಹೊಂದಿರಲಿದೆ. 'ಮೇಟ್ X ಫೊಲ್ಡೆಬಲ್' ಫೋನ್ ವಿಶಾಲವದ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಫೋನಿನ ಸೈಡ್ ಭಾಗದಲ್ಲಿ ಸೆನ್ಸಾರ್ ನೀಡಿರುವ ಸಾಧ್ಯತೆಗಳಿವೆ. ಇದರೊಂದಿಗೆ ಹೈ ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿರುವುದರೊಂದಿಗೆ, ಸೆಲ್ಫಿಗಾಗಿ ಎರಡು ಕ್ಯಾಮೆರಾಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

5G ಇರಲಿದೆ!
ಬರಲಿರುವ ಹುವಾಯಿ ಕಂಪನಿಯ 'ಮೇಟ್ X ಫೊಲ್ಡೆಬಲ್' ಸ್ಮಾರ್ಟ್‌ಫೋನ್ 5G ನೆಟವರ್ಕ್ ಸೌಲಭ್ಯವನ್ನು ಒಳಗೊಂಡಿರುವ ಸಾಧ್ಯತೆಗಳು ದಟ್ಟವಾಗಿದ್ದು, ಈ ಮೂಲಕ ಹುವಾಯಿ ಮೇಟ್ X ಫೊಲ್ಡೆಬಲ್ ಸ್ಮಾರ್ಟ್‌ಫೋನ್ ವಿಶ್ವ ಮೊದಲ '5G ಫೊಲ್ಡೆಬಲ್' ಸ್ಮಾರ್ಟ್‌ಫೋನ್ ಎಂದು ಕರೆಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಆದರೆ ಇದೇ ತಿಂಗಳ ಅಂತ್ಯದೊಳಗೆ ಹುವಾಯಿ ಕಂಪನಿ ಪ್ರೆಸ್ ಮೀಟ್ ಮಾಡಲಿದ್ದು, ಈ ಫೊಲ್ಡೆವಲ್ ಫೋನ್ ಬಗ್ಗೆ ಮಾಹಿತಿ ನೀಡಲಿದೆ ಎಂಬ ನಿರೀಕ್ಷೆಗಳಿವೆ.


Click it and Unblock the Notifications








