Home
ಮೊಬೈಲ್

ದೇಶಿ ಮಾರುಕಟ್ಟೆಗೆ ಈ ವರ್ಷವೇ ಎಂಟ್ರಿ ಕೊಡಲಿದೆ 'ಮೇಟ್‌ X' ಫೋಲ್ಡೆಬಲ್ ಫೋನ್.!

ಪ್ರಸ್ತತ ಮೊಬೈಲ್‌ ತಂತ್ರಜ್ಞಾನದಲ್ಲಿ ಫೋಲ್ಡೆಬಲ್ ಫೋನ್‌ಗಳ ತಯಾರಿಕೆಯತ್ತ ಮೊಬೈಲ್‌ ತಯಾರಿಕಾ ಕಂಪನಿಗಳು ಒಲವು ತೋರಿಸುತ್ತಿವೆ. ಈಗಾಗಲೇ ಸ್ಯಾಮ್‌ಸಂಗ್, ಹುವಾಯಿ, ಶಿಯೋಮಿ ಮತ್ತು ಮೊಟೊರೊಲಾ ಸಂಸ್ಥೆಗಳು ತಮ್ಮ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಮಾದರಿಗಳನ್ನು ಪ್ರದರ್ಶಿಸಿವೆ. ಅವುಗಳಲ್ಲಿ ಹುವಾಯಿ ಕಂಪನಿಯ 'ಮೇಟ್‌ ಎಕ್ಸ್‌' ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯತ್ತ ಮುಖ ಮಾಡಿದೆ.

ದೇಶಿ ಮಾರುಕಟ್ಟೆಗೆ ಈ ವರ್ಷವೇ ಎಂಟ್ರಿ ಕೊಡಲಿದೆ 'ಮೇಟ್‌ X' ಫೋಲ್ಡೆಬಲ್ ಫೋನ್.!

ಹೌದು, ತನ್ನ ಡಿಸೈನ್‌ ಮತ್ತು ಫೀಚರ್ಸ್‌ಗಳಿಂದ ಗಮನಸೆಳೆದಿರುವ ಹುವಾಯಿ 'ಮೇಟ್‌ ಎಕ್ಸ್‌' ಹೆಸರಿನ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌, ಇದೀಗ ಭಾರತಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದ್ದು, ಈ ವರ್ಷದ ಅಂತ್ಯದೊಳಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗುತ್ತಿದೆ. ಹಾನರ್‌ ಮೇಟ್‌ ಎಕ್ಸ್‌ 5G ವೇರಿಯಂಟ್‌ ಫೋನ್‌ಗಳನ್ನು ಮುಂದಿನ ವರ್ಷ ಮಾರುಕಟ್ಟೆಗೆ ಪರಿಚಯಿಸುಲಾಗುವುದು ಎಂದು ಹೇಳಲಾಗುತ್ತಿದೆ.

ದೇಶಿ ಮಾರುಕಟ್ಟೆಗೆ ಈ ವರ್ಷವೇ ಎಂಟ್ರಿ ಕೊಡಲಿದೆ 'ಮೇಟ್‌ X' ಫೋಲ್ಡೆಬಲ್ ಫೋನ್.!

ಹುವಾಯಿ ಕಂಪನಿಯು ತನ್ನ 'ಮೇಟ್‌ ಎಕ್ಸ್‌' ಫೋನ್‌ ಅನ್ನು ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಬಿಡುಗಡೆ ಮಾಡಲಿದ್ದು, ಗ್ರಾಹಕರನ್ನು ಬಹುಬೇಗ ಸೆಳೆಯಲು ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ 'ಕ್ರೋಮ್‌' ರಿಟೈಲ್‌ ಮಳಿಗೆಗಳಲ್ಲಿ ಲಭ್ಯವಾಗಲಿವೆ ಎನ್ನಲಾಗುತ್ತಿದೆ. ಹಾಗಾದರೇ ಹುವಾಯಿ ಮೇಟ್‌ ಎಕ್ಸ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫುಲ್‌ ವ್ಯೂವ್ ಡಿಸ್‌ಪ್ಲೇ ರಚನೆ

ಫುಲ್‌ ವ್ಯೂವ್ ಡಿಸ್‌ಪ್ಲೇ ರಚನೆ

ಅಂಚು ರಹಿತ ಸ್ಮಾರ್ಟ್‌ಫೋನ್‌ಗಳಂತೆ ಈ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಅಂಚು ರಹಿತ ಪೂರ್ಣ OLED ಪರದೆಯ ಡಿಸ್‌ಪ್ಲೇ ನೋಟವನ್ನು ಹೊಂದಿದೆ. ಮಡಚಿದಾಗ ಮುಂಬದಿ 6.6 ಇಂಚಿನಲ್ಲಿ ಮತ್ತು ಹಿಂಬದಿ 6.38 ಇಂಚಿನಲ್ಲಿ ಎರಡು ಕಡೆ ಡಿಸ್‌ಪ್ಲೇ ಕಾಣಿಸಲಿದೆ. ಈ ಫೋಲ್ಡೆಬಲ್ ಫೋನನ್ನು ಪೂರ್ಣ ತೆರೆದಾಗ 8 ಇಂಚಿನಲ್ಲಿರಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಮಡಚಿದಾಗ ಮುಂಬದಿಯಲ್ಲಿ 1148x2480 ಪಿಕ್ಸಲ್ ಶಕ್ತಿಯೊಂದಿಗೆ 6.6 ಇಂಚಿನ ಡಿಸ್‌ಪ್ಲೇ ಇರಲಿದ್ದು ಇದರ ಅನುಪಾತು 19.5:9 ಆಗಿದೆ. ಹಾಗೇ ಹಿಂಬದಿಯಲ್ಲಿ 892x2480 ಪಿಕ್ಸಲ್ ಶಕ್ತಿಯೊಂದಿಗೆ 6.38 ಇಂಚಿ ಡಿಸ್‌ಪ್ಲೇ ಕಾಣಬಹುದು, ಈ ಡಿಸ್‌ಪ್ಲೇ 25:9 ಅನುಪಾತವನ್ನು ಹೊಂದಿದೆ. ಪೂರ್ಣ ತೆರೆದಾಗ 8 ಇಂಚಿನ ವಿಶಾಲ ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್

ಪ್ರೊಸೆಸರ್

ಹಿಸಿಲಿಕಾನ್ ಕಿರಿನ್ 980 SOC ಪ್ರೊಸೆಸರ್ ಈ ಫೋಲ್ಡೆಬಲ್ ಸ್ಮಾರ್ಟ್‌ಪೋನಿನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 7nm ಮೊಡೆಮ್‌ನಲ್ಲಿ 5G ಚಿಪ್‌ ಸೆಟ್ಟ್ ನೀಡಲಾಗಿರುವುದು ಇದರ ವೇಗವನ್ನು ಹೆಚ್ಚಿಸಿದೆ. ಈ ಚಿಪ್‌ ಸೆಟ್‌ 6.5/ 3.5Gbps ವೇಗದಲ್ಲಿ ಡೌನ್‌ಲೋಡ್‌ ಮಾಡುವ ಸಾಮರ್ಥ್ಯವನ್ನು ಒದಗಿಸಲಿದೆ.

ಮೆಮೊರಿ

ಮೆಮೊರಿ

ಹುವಾಯಿ ಮೇಟ್‌ ಎಕ್ಸ್‌ ಫೋಲ್ಡೆಬಲ್ ಫೋನ್‌ 8GB RAM ಶಕ್ತಿಯೊಂದಿಗೆ 512GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒದಗಿಸಿದೆ. ಹಾಗೂ ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ್ ಬಾಹ್ಯ ಶೇಖರಣೆಗಾಗಿ 256GB ಸಾಮರ್ಥ್ಯದವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಹುವಾಯಿ ಮೇಟ್ X ಫೋಲ್ಡೆಬಲ್ ಸ್ಮಾರ್ಟ್‌ಫೋನ್ ರೇರ ಮತ್ತು ಮುಂಬದಿ ಕ್ಯಾಮೆರಾಗಳನ್ನು ಟು ಇನ್ ಇನ್ ಆಗಿ ಪರಿಚಯಿಸಿದೆ. ಒಟ್ಟು ಮೂರು ಸೆನ್ಸಾರ್‌ಗಳನ್ನು ಹೊಂದಿದ್ದು, 40 ಮೆಗಾಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್, 16 ಮೆಗಾಪಿಕ್ಸಲ್ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್ ಮತ್ತು 8 ಮೆಗಾಪಿಕ್ಸಲ್ ಟೆಲಿಫೋಟೋ ಲೆನ್ಸ್ ಗಳನ್ನು ಒಳಗೊಂಡಿದೆ. ಇವು ಕಂಪನಿಯ Leica ಲೆನ್ಸ್ ಆಗಿವೆ.

ಬ್ಯಾಟರಿ

ಬ್ಯಾಟರಿ

4,500mAh ಸಾಮರ್ಥ್ಯದ ಹೇವಿ ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ 55W ಶಕ್ತಿಯ ಸೂಪರ್‌ ಫಾಸ್ಟ್ ಚಾರ್ಜರ್ ತಂತ್ರಜ್ಞಾನ ಒದಗಿಸಲಾಗಿದೆ. ಇದರ ನೆರವಿನಿಂದ ಕೇವಲ 30 ನಿಮಿಷದಲ್ಲಿ ಸುಮಾರು ಶೇ.85 ರಷ್ಟು ಬ್ಯಾಟರಿ ಭರ್ತಿ ಆಗುವುದು. ಜತೆಗೆ ಯುಎಸ್‌ಬಿ ಟೈಪ್-C ಪೋರ್ಟ್‌ ನೀಡಲಾಗಿದೆ.

ಬೆಲೆ?

ಬೆಲೆ?

ಹುವಾಯಿ ಮೇಟ್‌ ಎಕ್ಸ್‌ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಈ ವರ್ಷವೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದ್ದು, ಇದರ ಬೆಲೆಯು ಸುಮಾರು 1,72,000ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
The company plans to launch the 5G variant of the foldable Huawei Mate X in India, later this year.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+