2017ಕ್ಕೆ ಆಪಲ್‌ನಿಂದ 3 ಐಫೋನ್‌ಗಳು ಲಾಂಚ್: ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!

Written By:

ಆಪಲ್ ಮುಂದಿನ ವರ್ಷ ಮೂರು ವಿಭಿನ್ನ ಐಫೋನ್‌ಗಳನ್ನು ಲಾಂಚ್ ಮಾಡುತ್ತಿದೆ ಎಂದು ವಿಶ್ಲೇಷಕ ಕಂಪನಿ 'ಕೆಜಿಐ ಸೆಕ್ಯೂರಿಟಿ' ವರದಿ ಮಾಡಿದೆ.

2017 ರಲ್ಲಿ ಬಿಡುಗಡೆ ಆಗುವ ಹೊಸ ಐಫೋನ್ 5.5 ಇಂಚಿನ OLED ಸ್ಕ್ರೀನ್ ಹೊಂದಲಿದೆ ಎಂದು 9to5Mac ಆನ್‌ಲೈನ್‌ ತಾಣ ವರದಿ ಮಾಡಿದೆ ಮತ್ತು ಇತರೆ ಎರಡು ವಿಭಿನ್ನ ಐಫೋನ್‌ಗಳು LCD ಡಿಸ್‌ಪ್ಲೇ ಅನ್ನು, ಪ್ರಸ್ತುತದ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ರೀತಿಯಲ್ಲಿ ಪಡೆಯಲಿವೆ ಎಂದು ತಿಳಿಯಲಾಗಿದೆ. ಹಾಗಿದ್ರೆ 2017 ರಲ್ಲಿ ಲಾಂಚ್‌ ಆಗುವ ಮೂರು ಹೊಸ ಐಫೋನ್‌ಗಳ ಬಗ್ಗೆ ಇನ್ನಷ್ಟು ವಿಶೇಷ ಮಾಹಿತಿಯನ್ನು ಮುಂದೆ ಓದಿರಿ.

ಉಚಿತ 'ಐಫೋನ್ 7' ಪಡೆಯಲು ನಿಮ್ಮ ಹೆಸರನ್ನು 'ಐಫೋನ್ 7'ಗೆ ಬದಲಿಸಿ ಬಿಡಿ!

47,999 ರೂ ಬೆಲೆಯ 64GB 'ಐಫೋನ್ 6ಎಸ್' ಅನ್ನು 42,999 ರೂಗೆ ಖರೀದಿಸಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಟೆಕ್‌ ವೆಬ್‌ಸೈಟ್ 'MacRumors' ಕುವೋದಿಂದ ಪಡೆದ ಸಂಶೋಧನೆ ಮಾಹಿತಿ ಪ್ರಕಾರ ಮೊದಲೇ ಹೇಳಿದಂತೆ 5.5 ಇಂಚಿನ OLED ಸ್ಕ್ರೀನ್‌ನ ವಿಶಾಲ ಡಿಸ್‌ಪ್ಲೇ ಮಾಡೆಲ್‌ ಐಫೋನ್ ಡ್ಯುಯಲ್ ಕ್ಯಾಮೆರಾ ಹೊಂದಲಿದೆ. ಇನ್ನು 4.7 ಇಂಚಿನ ಐಫೋನ್ ಕೇವಲ ಒಂದು ಕ್ಯಾಮೆರಾ ಹೊಂದಲಿದೆ. ಆಫಲ್ LTPS ನಿಂದ OLED ಡಿಸ್‌ಪ್ಲೇಗೆ ಇದೇ ಮೊದಲು ಬರುತ್ತಿದೆ. ಆದರೆ ಎರಡು 'ಐಫೋನ್ 8'ಗಳು LTPS ಡಿಸ್‌ಪ್ಲೇ ಹೊಂದಲಿವೆ. ಒಂದು ಐಫೋನ್‌ 8 ಮಾತ್ರ OLED ಡಿಸ್‌ಪ್ಲೇ ಪ್ಯಾನೆಲ್‌ ಹೊಂದಲಿದೆ.

Barclays ವಿಶ್ಲೇಷಣೆ

Barclays ವಿಶ್ಲೇಷಣೆ

Barclays ವಿಶ್ಲೇಷಣೆ ಪ್ರಕಾರ ಎರಡು ಸೈಜ್‌ನ ಐಫೋನ್‌ಗಳು ಲಾಂಚ್ ಆಗಲಿದ್ದು, ಐಫೋನ್ 8, 5 ಇಂಚು ಮತ್ತು 5.8 ಇಂಚನ್ನು ಹೊಂದಲಿವೆ. 5.8 ಇಂಚಿನ ಐಫೋನ್‌ 8 OLED ಸ್ಕ್ರೀನ್‌ ಹೊಂದಲಿದೆ ಎಂದು ವಿಶ್ಲೇಷಣೆ ನೀಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಐಫೋನ್ 8 ಗಾತ್ರ

ಐಫೋನ್ 8 ಗಾತ್ರ

ಐಫೋನ್ 8 ಗಾತ್ರದ ಬಗ್ಗೆ ಹಲವು ವರದಿಗಳು ಹರಿದಾಡುತ್ತಿದ್ದು, ಅವುಗಳಲ್ಲಿ ಕೆಲವು ವಕ್ರ ಮತ್ತು ಕಡಿಮೆ ಅಂಚಿನ ಡಿಸ್‌ಪ್ಲೇ ಹೊಂದಲಿವೆ ಎಂದು ಹೇಳಲಾಗುತ್ತಿದೆ.

ವೈರ್‌ಲೆಸ್‌ ಟೆಕ್ನಾಲಜಿ

ವೈರ್‌ಲೆಸ್‌ ಟೆಕ್ನಾಲಜಿ

nikkei ಆನ್‌ಲೈನ್‌ ತಾಣ ವರದಿ ಪ್ರಕಾರ, ಐಫೋನ್‌ 8 ಗೆ, ವೈರ್‌ಲೆಸ್ ಚಾರ್ಜಿಂಗ್ ಮಾದರಿ ಅಳವಡಿಸಲು ಫಾಕ್ಸ್‌ಕಾನ್‌ ಕಾರ್ಯನಿರತವಾಗಿದೆ ಎಂದು ಹೇಳಿದೆ. ಆದರೆ ಇತರೆ ವರದಿಗಳು ಮುಂಬರುವ ಐಫೋನ್‌ಗಳಿಗೆ ಆಪಲ್ ತನ್ನ ಸ್ವಂತ ಕಂಪನಿ ಹೆಸರಿನಲ್ಲಿ ನಿಜವಾಗಿಯೂ ವೈರ್‌ಲೆಸ್ ಟೆಕ್ನಾಲಜಿ ಆಡ್‌ ಮಾಡಲು ವರ್ಕ್‌ ಮಾಡುತ್ತಿದೆ ಹೇಳುತ್ತಿವೆ. ವೈರ್‌ಲೆಸ್ ಚಾರ್ಜಿಂಗ್ ಹೊಂದಬಲ್ಲ, ಚಾರ್ಜಿಂಗ್ ಪ್ಯಾಡ್‌ ಮೇಲೆ ಇಟ್ಟರೆ ಮೊಬೈಲ್‌ ಚಾರ್ಜ್‌ ಆಗುವ ಟೆಕ್ನಾಲಜಿ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

OLED ಸ್ಕ್ರೀನ್‌ ಬಗೆಗಿನ ಗಾಳಿಸುದ್ದಿ

OLED ಸ್ಕ್ರೀನ್‌ ಬಗೆಗಿನ ಗಾಳಿಸುದ್ದಿ

ಆದರೆ ಆಪಲ್‌ ಮುಂದಿನ ಐಫೋನ್‌ಗಳಿಗೆ OLED ಸ್ಕ್ರೀನ್ ಹೊಂದುವ ವಿಷಯ ಗಾಳಿಸುದ್ದಿ ಅಲ್ಲ. ಕಾರಣ ಆಪಲ್‌ ಈಗಾಗಲೇ ಹಲವು ಗ್ಯಾಜೆಟ್‌ಗಳನ್ನು OLED ಸ್ಕ್ರೀನ್ ಸಹಿತ ತಯಾರಿಸಿದೆ. ಆಪಲ್ ವಾಚ್‌ OLED ಸ್ಕ್ರೀನ್ ಹೊಂದಿದ ಗ್ಯಾಜೆಟ್‌ಗಳಲ್ಲಿ ಒಂದು. ಅಲ್ಲದೇ ಹೊಸ ಮ್ಯಾಕ್‌ಬುಕ್‌ನಲ್ಲಿ ಟಚ್‌ ಬಾರ್ OLED ಸ್ಕ್ರೀನ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
There will be three new iPhones in 2017, report claims. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot