ಆ್ಯಪಲ್ ಐ ಫೋನ್ 7ರ ಈ ಹತ್ತು ವೈಶಿಷ್ಟ್ಯಗಳು ನಿಮ್ಮನ್ನು ಚಕಿತಗೊಳಿಸುತ್ತವೆ.

|

ಆ್ಯಪಲ್ ಈ ವಾರ ತನ್ನ ಹೊಸ ಸ್ಮಾರ್ಟ್ ಫೋನುಗಳಾದ ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ವೈಶಿಷ್ಟ್ಯಗಳಿಂದ ಬಳಕೆದಾರರನ್ನು ಚಕಿತಗೊಳಿಸುವ ಆ್ಯಪಲ್ ನ ಯೋಜನೆ ಐಫೋನ್ 7 ವಿಷಯದಲ್ಲಿ ಸಾಧ್ಯವಾಗುವ ಹಾಗಿಲ್ಲ.

ಆ್ಯಪಲ್ ಐ ಫೋನ್ 7ರ ಈ ಹತ್ತು ವೈಶಿಷ್ಟ್ಯಗಳು ನಿಮ್ಮನ್ನು ಚಕಿತಗೊಳಿಸುತ್ತವೆ.

ಕೆ.ಜಿ.ಐ ಭದ್ರತಾ ವಿಶ್ಲೇಷಕ, ಮಿಂಗ್ ಚಿ ಕುವೊ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನಲ್ಲಿರುವ ವಿಶೇಷತೆಗಳನ್ನು ಈಗಾಗಲೇ ಹೇಳಿಬಿಟ್ಟಿದ್ದಾರೆ. ಆ್ಯಪಲ್ ಇನ್ ಸೈಡರ್ ಗೆ ಈ ಮಾಹಿತಿ ಲಭಿಸಿದೆ ಮತ್ತು ಎಲ್ಲಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ.

ಅಮೆಜಾನ್‌ ಗ್ರೇಟ್‌ ಸೇಲ್: ಟಿವಿಗಳು ಮತ್ತು ಇತರೆ ವಸ್ತುಗಳ ಮೇಲೆ ಶೇ.50 ರಿಯಾಯಿತಿ

ಹೊಸ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನ ಗುಣ ವಿಶೇಷತೆಗಳ ಕಡೆಗೊಮ್ಮೆ ಗಮನ ಹರಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರೂ ಟೋನ್ ಪರದೆ.

ಟ್ರೂ ಟೋನ್ ಪರದೆ.

ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನಲ್ಲಿ 'ಟ್ರೂ ಟೋನ್ ಪರದೆ' ಇರಲಿದೆ. ಐಪ್ಯಾಡ್ ಪ್ರೋ ಸರಣಿಯಲ್ಲಿ ಮೊದಲಿಗೆ ಈ ಟ್ರೂ ಟೋನ್ ಪರದೆಯನ್ನು ನೋಡಿದ್ದೆವು. ವಿವಿಧ ಕೋನಗಳಿಂದ ವೀಕ್ಷಣೆ ಉತ್ತಮಪಡಿಸುವುದಕ್ಕೆ ಹಾಗೂ ಪ್ರತಿಫಲನ ಕಡಿಮೆ ಮಾಡುವುದಕ್ಕೆ ಈ ವೈಶಿಷ್ಟ್ಯತೆಯನ್ನು ಐಫೋನ್ 7 ಸರಣಿಯಲ್ಲಿ ಸೇರಿಸಲಾಗಿದೆ.

32ಜಿಬಿ ಬೇಸ್ ವೇರಿಯಂಟ್.

32ಜಿಬಿ ಬೇಸ್ ವೇರಿಯಂಟ್.

ಐಫೋನ್ 7 ಸರಣಿಯಲ್ಲಿ ಆ್ಯಪಲ್ 16ಜಿಬಿ ಸಂಗ್ರಹ ಸಾಮರ್ಥ್ಯದ ಫೋನುಗಳನ್ನು ತಯಾರಿಸುವುದಿಲ್ಲ ಎನ್ನಲಾಗಿದೆ. 32ಜಿಬಿಯ ಫೊನುಗಳಿಂದಲೇ ಐಫೋನ್ 7 ಸರಣಿ ಪ್ರಾರಂಭವಾಗುತ್ತದೆ. 128 ಹಾಗೂ 256 ಜಿಬಿಯ ಫೋನುಗಳು ಲಭ್ಯವಿರುತ್ತದೆ.

ಉತ್ತಮಗೊಂಡ ಆ್ಯಂಬಿಯಂಟ್ ಲೈಟ್ ಸೆನ್ಸಾರುಗಳು.

ಉತ್ತಮಗೊಂಡ ಆ್ಯಂಬಿಯಂಟ್ ಲೈಟ್ ಸೆನ್ಸಾರುಗಳು.

ಆ್ಯಪಲ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನ ಕ್ಯಾಮೆರಾದಲ್ಲಿ ಉತ್ತಮಗೊಂಡ ಆ್ಯಂಬಿಯೆಂಟ್ ಲೈಟ್ ಸೆನ್ಸಾರುಗಳಿರಲಿವೆ, ಇದರಿಂದಾಗಿ ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರಗಳನ್ನು ತೆಗೆಯಬಹುದು.

ಐಫೋನ್ 7 ಪ್ಲಸ್ ನಲ್ಲಿ ಡುಯಲ್ ಹಿಂಬದಿಯ ಕ್ಯಾಮೆರ.

ಐಫೋನ್ 7 ಪ್ಲಸ್ ನಲ್ಲಿ ಡುಯಲ್ ಹಿಂಬದಿಯ ಕ್ಯಾಮೆರ.

ದೊಡ್ಡ ಫೋನಾದ ಐಫೋನ್ 7 ಪ್ಲಸ್ ನಲ್ಲಿ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳಿರಲಿವೆ. 12 ಮೆಗಾಪಿಕ್ಸೆಲ್ಲಿನ ಒಂದು ಹಾಗೂ 2 ಮೆಗಾಪಿಕ್ಸೆಲ್ಲಿನ ಮತ್ತೊಂದು ಕ್ಯಾಮೆರಾ ಇರಲಿದೆ. ಒಂದು ವೈಡ್ ಆ್ಯಂಗಲ್ ಚಿತ್ರಗಳಿಗಾಗಿ ಮತ್ತೊಂದು ಮಾಮೂಲಿ ಕ್ಯಾಮೆರ.

3.5 ಜ್ಯಾಕ್ ಇರುವುದಿಲ್ಲ.

3.5 ಜ್ಯಾಕ್ ಇರುವುದಿಲ್ಲ.

ಹಿಂದಿನ ಗಾಳಿ ಸುದ್ದಿಗಳೇ ಇದನ್ನು ಖಾತ್ರಿ ಪಡಿಸಿದ್ದವು. ಆ್ಯಪಲ್ ತನ್ನ ಹೊಸ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಫೋನುಗಳಲ್ಲಿ 3.5 ಜ್ಯಾಕನ್ನು ತೆಗೆದುಹಾಕಿಬಿಡುತ್ತದೆ. ಬದಲಿಗೆ, ಆಡಿಯೋ ಬೆಂಬಲಕ್ಕೆ ಲೈಟ್ನಿಂಗ್ ಪೋರ್ಟ್ ಇರಲಿದೆ. ವೈರ್ ಲೆಸ್ ಹಿಯರ್ ಪಾಡ್ ಗಳನ್ನು ಆ್ಯಪಲ್ ಹೊರತರುವ ಸಾಧ್ಯತೆಯಿದೆ.

3.5ಎಂ.ಎಂ ಹೆಡ್ ಫೋನ್ ಅಡಾಪ್ಟರ್.

3.5ಎಂ.ಎಂ ಹೆಡ್ ಫೋನ್ ಅಡಾಪ್ಟರ್.

ಆ್ಯಪಲ್ ತನ್ನ ಐಫೋನ್ 7 ಫೋನಿನಲ್ಲಿ 3.5 ಎಂ.ಎಂ ಜ್ಯಾಕ್ ಅನ್ನು ತೆಗೆದು ಹಾಕುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಆದರೆ ಕಂಪನಿಯು ಬಾಕ್ಸಿನಲ್ಲೇ 3.5ಎಂ.ಎಂ ಆಡಿಯೋ ಜಾಕ್ ಕನ್ವರ್ಟರ್ ಕೊಡುವ ಸಾಧ್ಯತೆಯಿದೆ.

ಎರಡು ಸ್ಪೀಕರ್ ಗಳು.

ಎರಡು ಸ್ಪೀಕರ್ ಗಳು.

2016ರಲ್ಲಿ ಬಿಡುಗಡೆಯಾಗು ಐಫೋನುಗಳಲ್ಲಿ ಒಂದು ಹೆಚ್ಚುವರಿ ಸ್ಪೀಕರ್ ಇರಲಿದೆ. ಉತ್ತಮ ಆಡಿಯೋ ಗುಣಮಟ್ಟಕ್ಕಾಗಿ.

ಐಪಿಎಕ್ಸ್ 7 ಜಲ ನಿರೋಧಕ.

ಐಪಿಎಕ್ಸ್ 7 ಜಲ ನಿರೋಧಕ.

2016ರ ಎರಡೂ ಐಫೋನುಗಳಲ್ಲಿ ಐಪಿಎಕ್ಸ್ 7 ಜಲ ನಿರೋಧಕವಿರಲಿದೆ. 30 ನಿಮಿಷಗಳ ಕಾಲ ನೀರಿನಲ್ಲಿದ್ದರೂ ತಡೆದುಕೊಳ್ಳಬಲ್ಲದು.

3ಡಿ ಟಚ್ 2.0.

3ಡಿ ಟಚ್ 2.0.

2016ರ ಐಫೋನುಗಳಲ್ಲಿ 3ಡಿ ಟಚ್ 2.0 ಇರಲಿದೆ.

ಐಫೋನ್ 7ರಲ್ಲಿ 2ಜಿಬಿ ರ್ಯಾಮ್, ಐಫೋನ್ 7ಪ್ಲಸ್ ನಲ್ಲಿ 3ಜಿಬಿ ರ್ಯಾಮ್.

ಐಫೋನ್ 7ರಲ್ಲಿ 2ಜಿಬಿ ರ್ಯಾಮ್, ಐಫೋನ್ 7ಪ್ಲಸ್ ನಲ್ಲಿ 3ಜಿಬಿ ರ್ಯಾಮ್.

ಆ್ಯಪಲ್ ಐಫೋನ್ 7ರಲ್ಲಿ ಹಿಂದಿನ ಫೋನುಗಳಲ್ಲಿದ್ದಂತೆಯೇ 2ಜಿಬಿ ರ್ಯಾಮ್ ಇದ್ದರೆ, ಐಫೋನ್ 7 ಪ್ಲಸ್ ನಲ್ಲಿ ಡುಯಲ್ ಕ್ಯಾಮೆರಾವನ್ನು ಸರಿಯಾಗಿ ನಿರ್ವಹಿಸಲು 3ಜಿಬಿ ರ್ಯಾಮ್ ಇರಲಿದೆ.

Best Mobiles in India

English summary
Apple will announce the next generation iPhones dubbed as the iPhone 7 and iPhone 7 Plus , this week. Apple will be planning to surprise the viewers with the features of the iPhone 7, however, that isn't the case this time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X