ಆಕ್ಟಾ ಕೋರ್ ಫೋನುಗಳ ಈ ಮಿಥ್ಯೆಗಳು ವಾಸ್ತವದಲ್ಲಿ ಸತ್ಯ!

|

1990ರ ಪ್ರಾರಂಭದಲ್ಲಿ, ಪ್ರೊಸೆಸರ್ರಿನ ಕ್ಲಾಕ್ ವೇಗವೇ ಚೆಪ್ ಸೆಟ್ಟಿನ ಶಕ್ತಿಯನ್ನು ನಿರ್ಧರಿಸುತ್ತದೆ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಅದೇನೂ ಪೂರ್ತಿ ಸತ್ಯವಲ್ಲ ಯಾಕೆಂದರೆ ಚಿಪ್ ತಯಾರಕರು ಹೆಚ್ಚಿನೆಚ್ಚಿನ ಕೋರ್ ಪ್ರೊಸೆಸರ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ, ಒಂದು ರೀತಿಯಲ್ಲಿ ಇದು ಉಪಯುಕ್ತ, ಮತ್ತು ಅನೇಕ ರೀತಿಯಲ್ಲಿ ಇದರಿಂದ ತುಂಬಾ ಪ್ರಯೋಜನವೇನಿಲ್ಲ.

ಆಕ್ಟಾ ಕೋರ್ ಫೋನುಗಳ ಈ ಮಿಥ್ಯೆಗಳು ವಾಸ್ತವದಲ್ಲಿ ಸತ್ಯ!

ಮೂರು ವರ್ಷಗಳವರೆಗೆ ಡುಯಲ್ ಕೋರ್ ಪ್ರೊಸೆಸರ್ ಗಳನ್ನು ಹೊಂದಿದ್ದ ಸ್ಮಾರ್ಟ್ ಫೋನುಗಳು ಮಾರುಕಟ್ಟೆಯಲ್ಲಿದ್ದವು. ಕ್ವಾಲ್ ಕಮ್, ಮೀಡಿಯಾಟೆಕ್ ರೀತಿಯ ಚಿಪ್ ತಯಾರಕರ ಆಗಮನದೊಂದಿಗೆ ಇಡೀ ಪರಿಸ್ತಿತಿಯೇ ಬದಲಾಗಿಬಿಟ್ಟಿತು.

ಓದಿರಿ: ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು

ವಿಶ್ವದಾದ್ಯಂತ ಅನೇಕ ಚಿಪ್ ತಯಾರಕರಿದ್ದಾರೆ. ಸ್ಯಾಮ್ಸಂಗ್, ಹುವಾಯಿ ತರಹದ ಕಂಪನಿಗಳು ಸ್ವತಃ ಚಿಪ್ ತಯಾರಿಸಲು ಪ್ರಾರಂಭಿಸಿದವು.

ಆಕ್ಟಾ ಕೋರ್ ಫೋನುಗಳ ಈ ಮಿಥ್ಯೆಗಳು ವಾಸ್ತವದಲ್ಲಿ ಸತ್ಯ!

ಬಹಳಷ್ಟು ಬಳೆಕೆದಾರರ ಪ್ರಕಾರ ಆಕ್ಟಾ ಕೋರ್ ಪ್ರೊಸೆಸರ್ ಗಳನ್ನು ಉಪಯೋಗಿಸುವುದು ತಲೆನೋವಿನ ಕೆಲಸ ಮತ್ತು ಸ್ಮಾರ್ಟ್ ಫೋನಿನ ದಕ್ಷತೆಯನ್ನು ಅದು ಕಡಿಮೆ ಮಾಡಿಬಿಡುತ್ತದೆ. ಆಕ್ಟಾ ಕೋರ್ ಪ್ರೊಸೆಸರ್ ಗಳ ಬಗೆಗಿನ ಕೆಲವು ಮಿಥ್ಯೆಗಳು ವಾಸ್ತವದಲ್ಲಿ ಸತ್ಯವಾಗಿದೆ! ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಓದಿರಿ: ಇಂಟರ್ನೆಟ್‌ನಲ್ಲಿ ಆಟೋಪ್ಲೇ ವೀಡಿಯೊ ಜಾಹೀರಾತಿಗೆ ಟ್ರಾಯ್‌ನಿಂದ ಅಂತ್ಯ!

ಇತ್ತೀಚೆಗಷ್ಟೇ ಗೂಗಲ್ ತನ್ನ ನೆಕ್ಸಸ್ 5 ಫೋನಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿತು, ನೆಕ್ಸಸ್ 5 ಗೆ ಆ್ಯಂಡ್ರಾಯ್ಡ್ ಎನ್ ಅಪ್ ಡೇಟ್ ಲಭ್ಯವಿಲ್ಲ. ಆದರೂ ಈಗಾಗಲೇ ಎಕ್ಸ್.ಡಿ.ಎ ಫೋರಮ್ಮಿನಲ್ಲಿ ನೆಕ್ಸಸ್ 5ಗೆ ಆ್ಯಂಡ್ರಾಯ್ಡ್ ಎನ್ ಕಸ್ಟಮ್ ರಾಮ್ ಲಭ್ಯವಿದೆ. ನೆಕ್ಸಸ್ 5 ಫೋನಿನಲ್ಲೀಗ ಆ್ಯಂಡ್ರಾಯ್ಡ್ ಎನ್ ಅನ್ನು ಬಳಸುವುದಕ್ಕೆ ಅಡ್ಡಿಯಿಲ್ಲ!

ಬಹಳಷ್ಟು ತಂತ್ರಾಂಶಗಳು ಎಂಟು ಕೋರ್ ಅನ್ನು ಉಪಯೋಗಿಸಲಾರವು.

ಬಹಳಷ್ಟು ತಂತ್ರಾಂಶಗಳು ಎಂಟು ಕೋರ್ ಅನ್ನು ಉಪಯೋಗಿಸಲಾರವು.

ಆಕ್ಟಾ ಕೋರ್ ಪ್ರೊಸೆಸರ್ ಗಳ ಸಂಪೂರ್ಣ ಶಕ್ತಿಯನ್ನು ಉಪಯೋಗಿಸುವ ತಂತ್ರಾಂಶಗಳು ಕೆಲವೇ ಕೆಲವಿವೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಸ್ಮಾರ್ಟ್ ಫೋನಿನ ಚಿಪ್ ಸೆಟ್ ಯಾವುದೇ ಇದ್ದರೂ ಕೆಲಸ ನಿರ್ವಹಿಸುವಂತಹ ತಂತ್ರಾಂಶಗಳೇ ಹೆಚ್ಚಿವೆ.

ಬ್ಯಾಟರಿಯ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಟರಿಯ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಜಾಸ್ತಿ ಕೋರ್ ಪ್ರೊಸೆಸರ್ ಇರುವುದು ಸ್ಮಾರ್ಟ್ ಫೋನಿನ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ. ಚಿಪ್ ಸೆಟ್ ಅನ್ನು ಯಾವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ ಎಂದರೆ ಯಾವಾಗ ಎಷ್ಟು ಬೇಕೋ ಅಷ್ಟು ಕೋರ್ ಅನ್ನು ಮಾತ್ರ ಸ್ಮಾರ್ಟ್ ಫೋನ್ ಬಳಸುತ್ತದೆ. ಇದು ಅಂತಿಮವಾಗಿ ಬ್ಯಾಟರಿಯ ಆಯಸ್ಸು ಕಡಿಮೆಯಾಗುವಂತೆ ಮಾಡುತ್ತದೆ.

ಇದು ಮಾರುಕಟ್ಟೆಯ ಗಿಮಿಕ್ ಅಷ್ಟೇ!

ಇದು ಮಾರುಕಟ್ಟೆಯ ಗಿಮಿಕ್ ಅಷ್ಟೇ!

ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಅನೇಕ ಸ್ಮಾರ್ಟ್ ಫೋನುಗಳಲ್ಲಿ ಅದನ್ನು ಎರಡು ಕ್ವಾಡ್ ಕೊರ್ ಚಿಪ್ ಗಳಾಗಿ ವಿಂಗಡಿಸಲಾಗಿರುತ್ತದೆ. ತಯಾರಕರ ಪ್ರಕಾರ ಒಂದು ಕ್ವಾಡ್ ಕೋರ್ ಚಿಪ್ ಯಾವಾಗಲೂ ಕಾರ್ಯನಿರ್ವಹಿಸುತ್ತಿರುತ್ತದೆ ಮತ್ತು ಇನ್ನೊಂದು ಚಿಪ್ ಅಗತ್ಯವಿದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತದೆ.

ಕಂಪ್ಯೂಟರುಗಳಲ್ಲಿ ಉಪಯುಕ್ತ ಸ್ಮಾರ್ಟ್ ಫೋನುಗಳಲ್ಲಲ್ಲ.

ಕಂಪ್ಯೂಟರುಗಳಲ್ಲಿ ಉಪಯುಕ್ತ ಸ್ಮಾರ್ಟ್ ಫೋನುಗಳಲ್ಲಲ್ಲ.

ಬಹಳಷ್ಟು ಕಂಪ್ಯೂಟರ್ ಮತ್ತು ಲ್ಯಾಪ್ ಟಾಪುಗಳಲ್ಲಿ ಆಕ್ಟಾ ಕೋರ್ ಚಿಪ್ ಸೆಟ್ ಗಳನ್ನು ಉಪಯೋಗಿಸಲಾಗುತ್ತಿದೆ ಮತ್ತು ಒಂದೇ ಸಮಯದಲ್ಲಿ ಎಲ್ಲಾ ಕೋರ್ ಗಳು ಕೆಲಸ ಮಾಡುವಂತೆ ಮಾಡಬಹುದು. ಇತ್ತೀಚೆಗೆ, ಬಹಳಷ್ಟು ಸ್ಮಾರ್ಟ್ ಫೋನ್ ತಯಾರಕರು ಚಿಪ್ ಸೆಟ್ ನ ಸೆಟ್ಟಿಂಗ್ಸ್ ಬದಲಿಸುವ ಆಯ್ಕೆ ನೀಡುತ್ತಿದ್ದಾರೆ. ಆಸ್ಫಾಲ್ಟ್ 8 ಅಥವಾ ನೋವಾ 3 ಆಟವಾಡಲು ಮಾತ್ರ ನೀವು ಸ್ಮಾರ್ಟ್ ಫೋನ್ ಖರೀದಿಸುವುದಿಲ್ಲ ಅಲ್ಲವೇ?

ಹೆಚ್ಚು ಕೋರ್ ಇರುವುದು ಸಾಫ್ಟ್ ವೇರ್ ಅಪ್ ಡೇಟ್ ಆಗುವುದನ್ನು ಸೂಚಿಸುವುದಿಲ್ಲ.

ಹೆಚ್ಚು ಕೋರ್ ಇರುವುದು ಸಾಫ್ಟ್ ವೇರ್ ಅಪ್ ಡೇಟ್ ಆಗುವುದನ್ನು ಸೂಚಿಸುವುದಿಲ್ಲ.

ಇದು ಊಹಾತ್ಮಕ ಪ್ರಶ್ನೆ. ಆ್ಯಂಡ್ರಾಯ್ಡ್ ತಯಾರಿಸುವ ನಿರ್ವಹಿಸುವ ಗೂಗಲ್ ಸೇರಿದಂತೆ ಪ್ರತಿಯೊಂದು ಸ್ಮಾರ್ಟ್ ಫೋನ್ ಕಂಪನಿಯು 18 ತಿಂಗಳವರೆಗೆ ಮಾತ್ರ ಬೆಂಬಲ ನೀಡುತ್ತವೆ ಎನ್ನುವುದು ನೆನಪಿರಲಿ. ಕೆಲವೊಂದು ಸ್ಮಾರ್ಟ್ ಫೋನುಗಳ ಮಾತ್ರ 18 ತಿಂಗಳ ನಂತರವೂ ಅಪ್ ಡೇಟ್ ಪಡೆಯುತ್ತವೆ.

Best Mobiles in India

English summary
In the initial stages of 1990's, clock speeds of the processor are considered as the real power of a chipset. However, that isn't the case anymore these days with chip makers upped their ante and released more core processors which are useful in one aspect and can't be useful in many ways.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X