Home
ಸುದ್ದಿಜಾಲ

ಇಂಟರ್ನೆಟ್‌ನಲ್ಲಿ ಆಟೋಪ್ಲೇ ವೀಡಿಯೊ ಜಾಹೀರಾತಿಗೆ ಟ್ರಾಯ್‌ನಿಂದ ಅಂತ್ಯ!

By Suneel

ಇಂಟರ್ನೆಟ್ ಬಳಕೆದಾರರಿಗೆ ಆನ್‌ಲೈನ್ ಜಾಹಿರಾತು ಬಗ್ಗೆ ತಿಳಿದಿದೆ. ಹಾಗೆ ಒಮ್ಮೆ ಇಂಟರ್ನೆಟ್‌ ಆನ್‌ಮಾಡಿ, ಯಾವುದಾದ್ರು ವೆಬ್‌ಸೈಟ್‌ಗೆ ಭೇಟಿ ಕೊಟ್ರೆ ನಾವು ಬೇಡ ಅಂದ್ರು ಇಮೇಜ್‌ ಮತ್ತು ವೀಡಿಯೊಗಳ ಮೂಲಕ ಜಾಹಿರಾತು ಬರುತ್ತಿರುತ್ತವೆ. ವಿಶೇಷ ಅಂದ್ರೆ ವೀಡಿಯೊ ಜಾಹಿರಾತುಗಳು ಆಟೋಮೆಟಿಕ್ ಆಗಿ ಪ್ಲೇ ಆಗುತ್ತಿರುತ್ತವೆ. ಇದರಿಂದ ಇಂಟರ್ನೆಟ್ ಸರ್ಫಿಂಗ್‌ ಮಾಡುವವರಿಗೆ ಕಿರಿ ಕಿರಿಯೂ ಹೌದು, ಡಾಟಾ ಖರ್ಚಾಗುವ ಭಯವೂ ಹೌದು. ಆದ್ರೆ ಇದಕ್ಕೆಲ್ಲಾ ಈಗ ತೆರೆ ಬೀಳುವ ಕಾಲ ಬಂದಾತ್ತು.

ಇಂಟರ್ನೆಟ್‌ನಲ್ಲಿ ಆಟೋಪ್ಲೇ ವೀಡಿಯೊ ಜಾಹೀರಾತಿಗೆ ಟ್ರಾಯ್‌ನಿಂದ ಅಂತ್ಯ!

ಹೌದು, ಭಾರತ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಗಮನಕ್ಕೆ ಆಟೋ ಪ್ಲೇ ವೀಡಿಯೊ ಜಾಹಿರಾತುಗಳು ಗಮನಕ್ಕೆ ಬಂದಿದ್ದು, ಟ್ರಾಯ್‌ ಶೀಘ್ರದಲ್ಲಿ ಆಟೋ ಪ್ಲೇ ವೀಡಿಯೊ ಜಾಹಿರಾತುಗಳನ್ನು ಅಂತ್ಯಗೊಳಿಸಲಿದೆ.

ಆಟೋ ಪ್ಲೇ ವೀಡಿಯೊ ಜಾಹಿರಾತುಗಳು ಮೊಬೈಲ್ ಮತ್ತು ಹೋಮ್‌ ಬೋರ್ಡ್‌ ಕನೆಕ್ಷನ್‌ಗಳಲ್ಲಿಯೂ ಕಾಣಿಸಿಕೊಂಡಿವೆ. ಈ ಸಮಸ್ಯೆ ಬಗ್ಗೆ ಕುರಿತು ಟ್ರಾಯ್‌ ಗಂಭೀರವಾಗಿ ಮಾಡನಾಡಿದ್ದು, ಶೀಘ್ರದಲ್ಲೇ ಕ್ರಿಯಾಶೀಲತೆಯಿಂದ ಸಮಸ್ಯೆಯನ್ನು ಬಗೆಹರಿಸಲಿದೆ. " ಜಾಹಿರಾತುಗಳು ಆಟೋಮೆಟಿಕ್ ಆಗಿ ಡೌನ್‌ಲೋಡ್‌ ಆಗುತ್ತಿವೆ, ಇಂಟರ್ನೆಟ್‌ ಪ್ಯಾಕ್‌ನ ಡಾಟಾವನ್ನು ಬೇಗ ಬಳಸಿಕೊಳ್ಳುತ್ತವೆ. ಇದು ಚಟುವಟಿಕೆ ಕೆಟ್ಟದ್ದು. ಇದು ಗಂಭೀರ ಸಮಸ್ಯೆ ಆಗಿದೆ", ಎಂದು ಟ್ರಾಯ್‌ ಅಧ್ಯಕ್ಷರಾದ ಆರ್‌ ಎಸ್‌ ಶರ್ಮ ಹೇಳಿದ್ದಾರೆ. "ಟ್ರಾಯ್‌ ಅಧಿಕಾರಿಗಳು ಈ ಕುರಿತು ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಒಂದು ಪ್ರತಿಕ್ರಿಯೆಯನ್ನು ಬಹುಬೇಗ ನೀಡುತ್ತೇವೆ" ಎಂದು ಶರ್ಮ ಹೇಳಿದ್ದಾರೆ.

ಇಂಟರ್ನೆಟ್‌ನಲ್ಲಿ ಆಟೋಪ್ಲೇ ವೀಡಿಯೊ ಜಾಹೀರಾತಿಗೆ ಟ್ರಾಯ್‌ನಿಂದ ಅಂತ್ಯ!

ನಾನು(Nanu) ಸರ್ವೆ ಪ್ರಕಾರ ಮೊಬೈಲ್‌ ಆಪ್‌ VoIP ಯು 'ಭಾರತದ ಶೇಕಡ 35 ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚು ಡಾಟಾ ಬಿಲ್‌ ಅನ್ನು ನೀಡುತ್ತಿರುವ ಬಗ್ಗೆ ಅನುಭವ ಪಡೆದಿದ್ದಾರೆ. ಕಾರಣ ಮೊಬೈಲ್ ಅಪ್ಲಿಕೇಶನ್‌ ಬಳಸುವ ಸಂದರ್ಭ ಮತ್ತು ವೆಬ್‌ಸೈಟ್‌ ಸರ್ಫಿಂಗ್ ಸಮಯದಲ್ಲಿ ಆಟೋಮೆಟಿಕ್ ಆಗಿ ವೀಡಿಯೊ ಜಾಹಿರಾತುಗಳು ಬಫರ್‌ ಆಗುತ್ತಿರುವುದು ಎಂದು ತಿಳಿದುಬಂದಿದೆ. ಈ ಸಮಸ್ಯೆ ನಿಯಂತ್ರಿಸಲು ಟೆಕ್ಲಿಕಲ್ ಪರಿಹಾರವನ್ನು ಸಹ ಶೋಧನೆ ನಡೆಸಲಾಗುತ್ತಿದೆ ಎಂದು ಶರ್ಮ'ರವರು ಹೇಳಿದ್ದಾರೆ.

ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು

Best Mobiles in India

English summary
TRAI may soon put an end to autoplay video ads on the internet. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+