Just In
- 10 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 10 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 11 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 12 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೈ ಎಂಡ್ ಫೀಚರ್ಸ್‌ನ ಬೆಸ್ಟ್ ಬ್ಯುಸಿನೆಸ್ ಸ್ಮಾರ್ಟ್‌ಫೋನ್‌ಗಳು!
ಪ್ರಸ್ತುತ ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ ತುಂಬಾ ಅಗತ್ಯ ಡಿವೈಸ್ ಆಗಿದ್ದು, ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನ್ ಮೇಲೆ ಅವಲಂಬಿತವಾಗಿವೆ. ನಾನಾ ಕಾರಣಗಳಿಗಾಗಿ ಬಳಕೆಯಾಗುವ ಸ್ಮಾರ್ಟ್‌ಫೋನ್ ಅನ್ನು ಕೆಲವರಿಗೆ ಬ್ಯುಸಿನೆಸ್ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ. ಹಾಗಂತಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಸ್ಮಾರ್ಟ್‌ಫೋನ್‌ಗಳು ಬ್ಯುಸಿನೆಸ್ ಕೆಲಸಗಳಿಗೆ ಸೂಕ್ತ ಪ್ಲಾಟ್‌ಫಾರ್ಮ್ ಹೊಂದಿರುವುದಿಲ್ಲ.

ಹೌದು, ಸ್ಮಾರ್ಟ್‌ಫೋನ್‌ಗಳನ್ನು ಬಹುತೇಕರು ತಮ್ಮ ವ್ಯವಹಾರದ ಕೆಲಸಗಳ ಅನುಕೂಲಕ್ಕಾಗಿ ಉಪಯೋಗಿಸುತ್ತಾರೆ. ಅದಕ್ಕಾಗಿ ಅವರ ಅತ್ಯುತ್ತಮ ಕಂಪನಿಗಳ ಹೈ ಎಂಡ್ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇಚ್ಚಿಸುತ್ತಾರೆ. ಬ್ಯುಸಿನೆಸ್ ಲೈಫ್‌ಸ್ಟೈಲ್‌ಗೆ ಅಗತ್ಯ ಎನಿಸುವ ಸೌಲಭ್ಯಗಳನ್ನು ಪಡೆದಿರುತ್ತವೆ. ಹಾಗಾದರೇ ಬ್ಯುಸಿನೆಸ್ ಕೆಲಸಗಳಿಗೆ ಅಗತ್ಯವೆನಿಸುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9
ಗ್ಯಾಲ್ಯಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಅತ್ಯುತ್ತಮ ಬ್ಯುಸಿನೆಸ್ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿದ್ದು, 6/8GB RAM ಮತ್ತು 128/512GB ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. 6.4 ಇಂಚಿನ ಡಿಸ್‌ಪ್ಲೇ, Exynos 9810 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್ ಕ್ಯಾಮೆರಾ ಜೊತೆಗೆ 4,000mAh ಬ್ಯಾಟರಿ ಬಾಳಿಕೆ ಹೊಂದಿದ್ದು, ಇಂಫ್ರೂವ್ಡ್ ಬ್ಲೂಟೂತ್ stylus (S Pen) DeX mode ಮೋಡ್ ಆಯ್ಕೆ ಒಳಗೊಂಡಿದೆ. ಬಳಕೆದಾರರಿಗೆ ಡೆಸ್ಕ್‌ಟಾಪ್ ಅನುಭವ ನೀಡಲಿದೆ.

ಒನ್‌ಪ್ಲಸ್ 6
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 6GB ಮತ್ತು 8GB RAM ಆಯ್ಕೆಯ ಜೊತೆಗೆ 64GB/128GB ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಕ್ವಾಲ್ಕಮ್ ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 20MP + 16ಎಂಪಿ ಕ್ಯಾಮೆರಾ ಸೆನ್ಸಾರ್ ಜೊತೆಗೆ 3300mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ S10 ಪ್ಲಸ್
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ S10 ಪ್ಲಸ್ ಫೋನ್ ಸಹ ಬೆಸ್ಟ್ ಬ್ಯುಸಿನೆಸ್ ಸ್ಮಾರ್ಟ್‌ಫೋನ್ ಆಗಿದ್ದು, 8/12GB RAM ಮತ್ತು 128/512GB/1TB ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. 6.4 ಇಂಚಿನ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 12MP + 12MP + 16ಎಂಪಿ ಸೆನ್ಸಾರ್ ಕ್ಯಾಮೆರಾ ಜೊತೆಗೆ 4,100mAh ಬ್ಯಾಟರಿ ಪವರ್ ಪಡೆದಿದ್ದು, ದೀರ್ಘಕಾಲದವರೆಗೆ ಬಾಳಿಕೆ ಒದಗಿಸಲಿದೆ.

ಐಫೋನ್ XS
ಬ್ಯುಸಿನೆಸ್ ಕೆಲಸಗಳಿಗೆ ಆಪಲ್ ಕಂಪನಿಯ 'ಐಫೋನ್ XS' ಸ್ಮಾರ್ಟ್‌ಫೋನ್ ಸಹ ಪೂರಕ ಬೆಂಬಲ ನೀಡಲಿದ್ದು, ಈ ಫೋನ್ 5.8 ಇಂಚಿನ OLED ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಹಾಗೆಯೇ 64/256/512GB ಸ್ಟೋರೇಜ್ ಸಾಮರ್ಥ್ಯದೊಂದಿಗೆ, 12ಎಂಪಿ+12ಎಂಪಿ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ. 2658mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ತುಂಬಿಕೊಂಡಿದೆ.

ಹುವಾವೆ ಮೇಟ್ 20 ಪ್ರೊ
ಹುವಾವೆ ಮೇಟ್ 20 ಪ್ರೊ ಸ್ಮಾರ್ಟ್‌ಫೋನ್ 6.39 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 40ಎಂಪಿ + 20ಎಂಪಿ + 8ಎಂಪಿ ಸೆನ್ಸಾರ್‌ನ ಮೂರು ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಹಾಗೆಯೇ 4200mAh ಸಾಮರ್ಥ್ಯದಲ್ಲಿದ್ದು, ಒಂದು ದಿನದ ವರೆಗೂ ಬಾಳಿಕೆ ಒದಗಿಸುವ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ ಕಿರಿನ್ 980 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, HDR10 ಬೆಂಬಲ ಸಹ ಪಡೆದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470