ಗಮನಿಸಿ.. ಸದ್ಯ ಟ್ರೆಂಡಿಂಗ್‌ನಲ್ಲಿ ಇರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ
ಮಾರುಕಟ್ಟೆಗೆ ಮೊಬೈಲ್ ಸಂಸ್ಥೆಗಳಿಂದ ನೂತನ ಸ್ಮಾರ್ಟ್‌ಫೋನ್‌ಗಳು ಬರುತ್ತಲೆ ಇರುತ್ತವೆ. ಆದರೆ ಬಿಡುಗಡೆ ಆಗುವ ಎಲ್ಲ ಮೊಬೈಲ್‌ಗಳು ನಿರೀಕ್ಷಿಸಿದಷ್ಟು ಜನಪ್ರಿಯವಾಗುವುದಿಲ್ಲ. ಇನ್ನು ಲಾಂಚ್ ಆಗುವ ಫೋನ್‌ಗಳಲ್ಲಿ ಕೆಲವು ಡಿಸೈನ್, ಕ್ಯಾಮೆರಾ, ಪ್ರೊಸೆಸರ್ ಹಾಗೂ ಬಿಗ್ ಬ್ಯಾಟರಿಗಳಂತಹ ಫೀಚರ್ಸ್‌ಗಳ ಮೂಲಕ ಹೆಚ್ಚಿನ ಗಮನ ಸೆಳೆಯುತ್ತವೆ. ಅಂತಹ ಫೋನ್‌ಗಳು ಸದ್ದು ಮಾಡುತ್ತವೆ.
ಹೌದು, ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳು ಸೇರಿ ಇತರೆ ಸಂಸ್ಥೆಗಳು ನೂತನ ಮೊಬೈಲ್ ಪರಿಚಯಿಸುತ್ತವೆ. ಆ ಪೈಕಿ ಕೆಲವು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್ ಮೂಲಕ ಅಧಿಕ ಗ್ರಾಹಕರ ಗಮನ ಸೆಳೆಯುತ್ತವೆ. ಮತ್ತೆ ಕೆಲ ಮೊಬೈಲ್‌ಗಳು ಬೆಲೆಯಿಂದ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುತ್ತವೆ. ಹಾಗಾದರೆ ಪ್ರಸ್ತುತ ಈ ನವೆಂಬರ್ ತಿಂಗಳಿನ ಮೂರನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಮೊಬೈಲ್‌ಗಳ ಲಿಸ್ಟ್ ಇಲ್ಲಿದೆ ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಡಿಸ್‌ಪ್ಲೇ 3120 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಒಳಗೊಂಡಿದೆ. ಅಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಅಲ್ಲದೇ ಇದು ಕ್ವಾಡ್ ಕ್ಯಾಮೆರಾ ರಚನೆ ಹೊಂದಿದ್ದು, 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 5G ಮೊಬೈಲ್
ಗ್ಯಾಲಕ್ಸಿ A55 5G ಮೊಬೈಲ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಇದು ಎಕ್ಸಿನೋಸ್ 1480 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ AMD Xclipse 530 GPU ಸಪೋರ್ಟ್ ಹಾಗೂ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕಾಣಬಹುದಾಗಿದೆ. ಅಲ್ಲದೇ ಈ ಮೊಬೈಲ್ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.
ರೆಡ್‌ಮಿ ನೋಟ್ 13 ಪ್ರೊ ಮೊಬೈಲ್
ಶಿಯೋಮಿ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 6.67 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಡಿಸ್‌ಪ್ಲೇ 1220 x 2712 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಪಡೆದಿದೆ. ಅಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 7s Gen 2 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಹಾಗೆಯೇ ತ್ರಿವಳಿ ಕ್ಯಾಮೆರಾ ರಚನೆ ಇದ್ದು, 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5,100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.
ನುಬಿಯಾ ರೆಡ್ ಮ್ಯಾಜಿಕ್ 10 ಪ್ರೊ+
ನುಬಿಯಾ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ರೆಡ್ ಮ್ಯಾಜಿಕ್ 10 ಪ್ರೊ+ ಫೋನ್ 6.58 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1216x2688 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಸ್ನ್ಯಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಸೌಲಭ್ಯ ಹೊಂದಿದ್ದು, 7050mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಸಹ ಪಡೆದಿದೆ.


Click it and Unblock the Notifications








