ಫೋಲ್ಡೆಬಲ್ ಫೋನ್ ಖರೀದಿಸಬೇಕೆ?..ಖರೀದಿಸುವ ಮುನ್ನ ಈ ಸಂಗತಿ ಗೊತ್ತಿರಲಿ!
ಪ್ರಸ್ತುತ ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ವಿನ್ಯಾಸದ ಫೋನ್‌ಗಳು ಎಂಟ್ರಿ ಕೊಡುತ್ತಿರುವುದನ್ನು ಕಾಣಬಹುದಾಗಿದೆ. ಅವುಗಳ ಪೈಕಿ ಫೋಲ್ಡೆಬಲ್ (ಮಡಚುವ) ಸ್ಮಾರ್ಟ್‌ಫೋನ್‌ಗಳು ಸಹ ಹೆಚ್ಚು ಆಕರ್ಷಕ ಎನಿಸಿದ್ದು, ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳು ಫೋಲ್ಡೆಬಲ್ ಫೋನ್‌ಗಳ ಆಯ್ಕೆ ಗ್ರಾಹಕರಿಗೆ ನೀಡಿವೆ. ಆದರೆ ಫೋಲ್ಡೆಬಲ್ ಫೋನ್‌ಗಳ ಖರೀದಿಸುವ ಮುನ್ನ ಕೆಲವು ಸಂಗತಿ ತಿಳಿಯಬೇಕಿದೆ.
ಹೌದು, ಫೋಲ್ಡೆಬಲ್ ಮಾದರಿಯ ಫೋನ್‌ಗಳು ಆಕರ್ಷಕ ಫೀಚರ್ಸ್ ಪಡೆದಿದ್ದು, ಅಧಿಕ ಪ್ರೈಸ್ ಟ್ಯಾಗ್ ಅನ್ನು ಕೂಡಾ ಹೊಂದಿವೆ. ಈ ಫೋಲ್ಡೆಬಲ್ ಮಾದರಿಯ ಫೋನ್ ಆಕರ್ಷಕ ಎನಿಸಿದರೂ, ಸರಿಯಾಗಿ ಬಳಕೆ ಮಾಡುವುದು ಅಗತ್ಯ. ಇಲ್ಲದಿದ್ದರೆ, ಹಾನಿಯಾಗುವ ಸಾಧ್ಯತೆಗಳು ಅಧಿಕ ಆಗಿರುತ್ತವೆ. ಅದಾಗ್ಯೂ,ಒಂದು ಅತ್ಯುತ್ತಮ ಫೋಲ್ಡೆಬಲ್ ಫೋನ್ ಖರೀದಿಸುವ ಪ್ಲ್ಯಾನ್ ಮಾಡಿದ್ರೆ, ಈ ಅಂಶಗಳನ್ನು ಮರೆಯದೆ ಗಮನಿಸಿ. ಮುಂದೆ ಓದಿರಿ.

ಸ್ಕ್ರೀನ್ ಕಾಳಜಿ ಅಗತ್ಯ
ಫೋನಿನ ಸ್ಕ್ರೀನ್ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಇರುತ್ತದೆ. ಸ್ಕ್ರೀನ್‌ಗೆ ಅತಿಯಾದ ಬಲದಿಂದ ಅಥವಾ ಪೆನ್ನುಗಳು ಅಥವಾ ಬೆರಳಿನ ಉಗುರುಗಳಂತಹ ಚೂಪಾದ ವಸ್ತುಗಳಿಂದ ಒತ್ತುವುದನ್ನು ಸಾಧ್ಯವಾಗಷ್ಟು ತಪ್ಪಿಸುವುದು ಸೂಕ್ತ. ಸ್ಕ್ರೀನ್ ಅನಗತ್ಯ ಒತ್ತಡವನ್ನು ಬೀಳುವುದರಿಂದ ಡಿಸ್ಪ್ಲೇ ಹಾನಿ ಆಗುವ ಸಾಧ್ಯತೆ ಇರುತ್ತದೆ.
ಸ್ಕ್ರೀನ್ ಗಾರ್ಡ್ ಸೂಕ್ತ
ಕೆಲವು ಹೊಸ ಫೋಲ್ಡಬಲ್ ಫೋನ್‌ಗಳು ಪ್ರಿ-ಫಿಟ್ ಮಾಡಿದ ಸ್ಕ್ರೀನ್ ಗಾರ್ಡ್‌ಗಳ ರಚನೆ ಪಡೆದಿವೆ. ಅದಾಗ್ಯೂ, ಗ್ರಾಹಕರು ಅವುಗಳನ್ನು ತೆಗೆದುಹಾಕದಿರಲು ಹೆಚ್ಚು ಶಿಫಾರಸು ಮಾಡಲಾಗಿದೆ. ಏಕೆಂದರೆ ಸಂಸ್ಥೆಯಿಂದ ಫಿಟ್ ಆಗಿರುವ ಸ್ಕ್ರೀನ್ ಗಾರ್ಡ್‌ಗಳು ಗೀರುಗಳು ಹಾಗೂ ಇತರೆ ಸಣ್ಣ ಹಾನಿಗಳ ಸಂದರ್ಭ ರಕ್ಷಣೆಯ ಒದಗಿಸುತ್ತವೆ.

ನೀರು ಹಾಗೂ ಧೂಳಿನಿಂದ ರಕ್ಷಣೆ ಅಗತ್ಯ
ನೂತನ ಫೋಲ್ಡೆಬಲ್ ಫೋನ್‌ಗಳು IPX8 ವಾಟರ್-ರೆಸಿಸ್ಟಂಟ್ ರೇಟಿಂಗ್ ಅನ್ನು ಹೊಂದಿದ್ದರೂ, ಫೋನ್ ಮಾಲೀಕರು ನೀರು ಮತ್ತು ಧೂಳಿನ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಆಗಿದೆ. ಅತೀಯಾದ ಧೂಳಿನಿಂದ ಕಾಲಾನಂತರದಲ್ಲಿ ಫೋನ್‌ಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಇತ್ತೀಚಿನ ಗ್ಯಾಲಕ್ಸಿ Z ಫೋಲ್ಡ್ 5 ಹಾಗೂ ಗ್ಯಾಲಕ್ಸಿ Z ಫ್ಲಿಪ್ 5 ಫೋನ್‌ಗಳು IPX8 ರೇಟ್ ಸೌಲಭ್ಯ ಪಡೆದಿವೆ.
ಮ್ಯಾಗ್ನೆಟಿಕ್ ವಸ್ತುಗಳ ಬಗ್ಗೆ ಗಮನ ನೀಡಿ
ಫೋಲ್ಡೆಬಲ್ ಫೋನ್ ಗ್ರಾಹಕರೇ, ಕ್ರೆಡಿಟ್ ಕಾರ್ಡ್‌ಗಳು, ಪಾಸ್‌ಬುಕ್‌ಗಳು ಮತ್ತು ಬೋರ್ಡಿಂಗ್ ಪಾಸ್ ನಂತಹ ಮ್ಯಾಗ್ನೆಟಿಕ್ ವಸ್ತುಗಳಿಂದ ನಿಮ್ಮ ಫೋಲ್ಡೆಬಲ್ ಫೋನ್‌ಗಳನ್ನು ಸಾಧ್ಯವಾದಷ್ಟು ದೂರ ಇಡುವುದು ಉತ್ತಮ. ಏಕೆಂದರೆ ಮ್ಯಾಗ್ನೆಟಿಕ್ ವಸ್ತುಗಳ ಫೋನಿನ ಕಾರ್ಯವನ್ನು ಅಡ್ಡಿಪಡಿಸಬಹುದು ಅಥವಾ ಡೇಟಾ ನಷ್ಟಕ್ಕೆ ಕಾರಣ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಸ್ಯಾಮ್‌ಸಂಗ್ ಸಂಸ್ಥೆಯ ಇತ್ತೀಚಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಸ್ಮಾರ್ಟ್‌ಫೋನ್ 7.6 ಇಂಚಿನ ಇನರ್ ಡಿಸ್‌ಪ್ಲೇಯನ್ನು ಹಾಗೂ 6.2 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕವರ್ ಡಿಸ್‌ಪ್ಲೇ ಸೌಲಭ್ಯ ಪಡೆದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2SoC ಪ್ರೊಸೆಸರ್ ಸೌಲಭ್ಯದಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದು 4,400mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ.
ಅದೇ ರೀತಿ ಟೆಕ್ನೋ ಸಂಸ್ಥೆಯ ಫ್ಯಾಂಟಮ್ V ಫೋಲ್ಡ್ ಫೋನ್ 6.42 ಇಂಚಿನ LTPO ಔಟರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 7.65 ಇಂಚಿನ 2K LTPO ಅಮೋಲೆಡ್ ಫೋಲ್ಡಬಲ್ ಡಿಸ್‌ಪ್ಲೇ ಸಹ ಪಡೆದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಚಿಪ್‌ಸೆಟ್‌ಲ್ಲಿ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.


Click it and Unblock the Notifications








