ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್8 ಫೋಟೊ, ಫೀಚರ್ಸ್ ಲೀಕ್!!
ಚೀನಾದ ಹೆಸರಾಂತ ಸ್ಮಾರ್ಟ್‌ಫೋನ್ ಮಾಹಿತಿದಾರ ಸಂಸ್ಥೆ "ವಿಬೋ" ಸ್ಯಾಮ್‌ಸಂಗ್ ಬಿಡುಗಡೆ ಮಾಡುತ್ತಿರುವ ನೂತನ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಫೋನ್ ಚಿತ್ರವನ್ನು ಬಿಡುಗಡೆ ಮಾಡಿದೆ!!
ಸ್ಯಾಮ್‌ಸಂಗ್ ಸರಣಿ ಸ್ಮಾರ್ಟ್‌ಫೋನ್ ಒಂದು ಮಾರುಕಟ್ಟೆಗೆ ಬರುತ್ತಿದೆ ಎಂದಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಕುತೋಹಲ ಶುರುವಾಗುತ್ತದೆ. ಸ್ಯಾಮ್‌ಸಂಗ್ ಬಿಡುಗಡೆ ಮಾಡುವ ನೂತನ ಸ್ಮಾರ್ಟ್‌ಫೊನ್ ಯಾವೆಲ್ಲಾ ಫೀಚರ್ ಹೊಂದಿರಬಹುದು ಎನ್ನುವುದೇ ದೊಡ್ಡ ಚರ್ಚಾ ವಿಷಯವಾಗಿಬಿಡುತ್ತದೆ.!!
ಇನ್ನು ಇದೇ ವರ್ಷದಲ್ಲಿ ಸ್ಯಾಮ್‌ಸಂಗ್ ತನ್ನ ನೂತನ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆ ಎನ್ನಲಾಗಿದ್ದು, ಚೀನಾದ ಹೆಸರಾಂತ ಸ್ಮಾರ್ಟ್‌ಫೋನ್ ಮಾಹಿತಿದಾರ ಸಂಸ್ಥೆ "ವಿಬೋ" ಸ್ಯಾಮ್‌ಸಂಗ್ ಬಿಡುಗಡೆ ಮಾಡುತ್ತಿರುವ ನೂತನ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಫೋನ್ ಚಿತ್ರವನ್ನು ಬಿಡುಗಡೆ ಮಾಡಿದೆ!!

2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!
ಇತ್ತೀಚಿಗೆ ಬಿಡುಗಡೆಯಾದ ಸ್ಸಾಮ್‌ಸಂಗ್ ಗ್ಯಾಲಾಕ್ಸಿ ಎಸ್7 ನಂತರ ಬಿಡುಗಡೆ ಯಾಗುತ್ತಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂದು ಮೊಬೈಲ್ ಪ್ರಿಯರು ಕಾದುಕುಳಿತಿದ್ದಾರೆ.!! "ವಿಬೋ" ಲೀಕ್ ಮಾಡಿರುವ ಮಾಹಿತಿಯಂತೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 8 8GB RAM ಮತ್ತು 126 GB ಆಂತರಿಕ ಮೆಮೊರಿ, ಶೇಕಡ 93% ಪರ್ಸೆಂಟ್ ಟಚ್‌ಪ್ಯಾಡ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ.

ಪ್ರಖ್ಯಾತ ಚಿಪ್‌ಸೆಟ್ ತಯಾರಕ ಸಂಸ್ಥೆ ಕ್ವಾಲ್ಕಮ್ ಬಿಡುಗಡೆ ಮಾಡಿರುವ ನೂತನ ಸ್ನಾಪ್‌ಡ್ರಾಗನ್ ಚಿಪ್‌ಸೆಟ್, ಆಂಡ್ರಾಯ್ಡ್ 6.0 ಮಾರ್ಶಮಲ್ಲೊ ಆಪರೆಟಿಂಗ್ ಸಿಸ್ಟಮ್, ಹಾಗೂ ಅತ್ಯಾಧುನಿಕ ಎನ್‌ಸ್ಕ್ರಿಪ್ಟೆಟ್ ಸಾಫ್ಟ್‌ವೇರ್ ಹೊಂದಿ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂದು ವಿಬೋ ಹೇಳಿದೆ.


Click it and Unblock the Notifications








