Subscribe to Gizbot

ಪೂರ್ಣ ಟಚ್‌ಪ್ಯಾಡ್‌ ಸ್ಮಾರ್ಟ್‌ಫೋನ್‌ "ಶಿಯೋಮಿ ಎಂಐ6" ಫೀಚರ್ ಹೇಗಿದೆ?

Written By:

ಮೊಬೈಲ್ ಮಾರುಕಟ್ಟೆ ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ಇಂದು ಬಿಡುಗಡೆಯಾದ ಮೊಬೈಲ್ ನಾಳೆ ಹಳೆಯದಾಗಿರುತ್ತದೆ.!! ಇದು ಹೊಸ ಫೀಚರ್ ಸ್ಮಾರ್ಟ್‌ಫೋನ್‌ ಎಂದುಕೊಂಡರೆ ನಾಳೆ ಮತ್ತೊಂದು ಫೀಚರ್ ಹೊತ್ತ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿರುತ್ತದೆ.

ಇನ್ನು ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಶಿಯೋಮಿಯ ಮುಂದಿನ ಸರಣಿ "ಶೀಯೋಮಿ ಎಂಐ6" ಸ್ಮಾರ್ಟ್‌ಫೋನ್‌ 2017 ಕ್ಕೆ ಮಾರುಕಟ್ಟೆಗೆ ಬರಲಿದೆ. ತನ್ನದೇ ಗ್ರಾಹಕ ಬಳಗವನ್ನು ಹೊಂದಿರುವ ಶಿಯೋಮಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ.

ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ?

ಹಾಗಾಗದರೆ ಶಿಯೋಮಿ ಕಂಪೆನಿಯ ನೂತನ ಸ್ಮಾರ್ಟ್‌ಫೊನ್ ಶಿಯೋಮಿ ಎಂಐ6, ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ಗ್ರಾಹಕರನ್ನು ಸೆಳೆಯುವುದೇ? ಶಿಯೋಮಿ ಎಂಐ6 ಯಾವ ಕಾನ್ಸೆಪ್ಟ್ ಒಳಗೊಂಡಿದೆ, ಅದರ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೂರ್ಣ ಟಚ್ಸ್ಕ್ರೀನ್ ಹೊಂದಿದೆ ಶಿಯೋಮಿ ಎಂಐ6!!

ಪೂರ್ಣ ಟಚ್ಸ್ಕ್ರೀನ್ ಹೊಂದಿದೆ ಶಿಯೋಮಿ ಎಂಐ6!!

ನೋಡಲು ಅತ್ಯಾಕರ್ಶಕ ವಿನ್ಯಾಸವನ್ನು ಶಿಯೋಮಿ ಒಳಗೊಂಡಿರಬಹುದಾದ ಹೆಚ್ಚಿನ ಫೀಚರ್ ಅದು ಪೂರ್ಣ ಟಚ್ಸ್ಕ್ರೀನ್ ಹೊಂದಿರುವುದು. ಈ ರೀತಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಸೆಳೆಯುತ್ತವೆ.

16 ಮೆಗಾಫಿಕ್ಸೆಲ್ ಕ್ಯಾಮೆರಾಗಳು!

16 ಮೆಗಾಫಿಕ್ಸೆಲ್ ಕ್ಯಾಮೆರಾಗಳು!

ಹೌದು, ಶಿಯೋಮಿ ಎಂಐ6 ತನ್ನ ಹಿಂದಿಯ ಎರಡು ಕ್ಯಾಮೆರಾಗಳನ್ನು ಒಳಗೊಂಡಿರುತ್ತದೆ. ಇನ್ನು ಸೆಲ್ಫಿ ಕ್ಯಾಮೆರಾ 8 ಮೆಗಾಫಿಕ್ಸೆಲ್ ಇರುತ್ತದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ನಾಪ್‌ಡ್ರಾನ್ 835 ಚಿಪ್‌ಸೆಟ್‌ (Snapdragon 835 Soc)

ಸ್ನಾಪ್‌ಡ್ರಾನ್ 835 ಚಿಪ್‌ಸೆಟ್‌ (Snapdragon 835 Soc)

ಶಿಯೋಮಿ ಎಂಐ6 ಸ್ನಾಪ್‌ಡ್ರಾನ್ 835 ಚಿಪ್‌ಸೆಟ್‌ ಹೊಂದಿದೆ ಎನ್ನಲಾಗಿದೆ. ಇದರಿಂದ ಅತ್ಯಾಧುನಿಕ ಗ್ರಾಫಿಕ್ ತಂತ್ರಜ್ಞಾನ ನೋಡುವ ಅನುಭವ ಗ್ರಾಹಕರಿಗೆ ಸಿಗಲಿದೆ.

8GB RAM ಹೊಂದಿದೆ

8GB RAM ಹೊಂದಿದೆ

ಶಿಯೋಮಿಯ ನೂತನ ಮೊಬೈಲ್ 8GB RAM ಮತ್ತು 64GB ಸಂಗ್ರಹಣಾ ಸಾಮರ್ಥ್ಯ ಹೊಂದಿರುತ್ತದೆ . ಆದರೆ SD ಕಾರ್ಡ್ ಸಪೋರ್ಟ್ ಮಾಡುವುದಿಲ್ಲ.

3.5 ಆಡಿಯೋ ಜಾಕ್

3.5 ಆಡಿಯೋ ಜಾಕ್

ಶಿಯೋಮಿ ಎಂಐ6 3.5 ಆಡಿಯೋ ಜಾಕ್ ಒಳಗೊಂಡಿರುತ್ತದೆ. ಇತ್ತೀಚಿಗೆ ಆಪಲ್ ಆಡಿಯೋ ಜಾಕ್ ಬದಲಾಯಿಸಿತ್ತು. ಆದರೆ ಶಿಯೋಮಿ ಇದನ್ನು ಬದಲಾಯಿಸಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Xiaomi Mi 6 might sport whole bezel-less screen. to know more visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot