ಸದ್ಯ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಫಸ್ಟ್!.ಶಿಯೋಮಿ ನೆಕ್ಸ್ಟ್!
ಹೊಸ ಸ್ಮಾರ್ಟ್‌ಫೋನ್‌ಗಳು ಮಾರಕಟ್ಟೆಗೆ ಎಂಟ್ರಿ ಕೊಡುತ್ತಲೇ ಇದ್ದು, ಆದರೆ ಬಿಡುಗಡೆಕೊಂಡ ಎಲ್ಲ ಸ್ಮಾರ್ಟ್‌ಫೋನ್‌ಗಳು ಜನಪ್ರಿಯತೆ ಹೊಂದುವುದಿಲ್ಲ. ಕೆಲವು ನಿರೀಕ್ಷೆ ಮೀರಿ ಜನಪ್ರಿಯತೆ ಹೊಂದಿದರೇ ಇನ್ನೂ ಕೆಲವು ಹೇಳ ಹೆಸರಿಲ್ಲದೇ ಮರೆಯಾಗುತ್ತವೆ. ಇತ್ತೀಚಿಗೆ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳು ಭಾರೀ ಸುದ್ದಿಯಲ್ಲಿದ್ದು, ಸ್ಯಾಮ್‌ಸಂಗ್ ಮೊದಲ ಸ್ಥಾನದಲ್ಲಿದೆ.

ಹೌದು, ಪ್ರಸಕ್ತ ವರ್ಷ ಹಲವು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೊಂಡಿದ್ದು, ಅದರಲ್ಲಿ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಸಂಸ್ಥೆಗಳ ಹೊಸ ಸ್ಮಾರ್ಟ್‌ಫೋನ್ ಮಾದರಿಗಳು ಭರ್ಜರಿ ಸೌಂಡ್ ಮಾಡುತ್ತಿವೆ. ಹೈ ಎಂಡ್ ಕ್ಯಾಮೆರಾ, ಉನ್ನತ RAM ಸಾಮರ್ಥ್ಯಗಳಂತಹ ನೂತನ ಫೀಚರ್ಸ್‌ಗಳನ್ನು ಅಳವಡಿಸಿರುವುದು ಮತ್ತು ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಸ್ಯಾಮ್‌ಸಂಗ್‌ನ 'ಗ್ಯಾಲ್ಯಾಕ್ಸಿ ಎ50' ಮತ್ತು ಶಿಯೋಮಿಯ ರೆಡ್ಮಿ ನೋಟ್7 ಪ್ರೋ ಸ್ಮಾರ್ಟ್‌ಫೋನ್‌ಗಳು ಮೊದಲೆರಡು ಸ್ಥಾನಗಳನ್ನು ಹೊಂದಿದ್ದು, ಉತ್ತಮ ಸೇಲ್ ಆಗುತ್ತಿವೆ ಎನ್ನಲಾಗುತ್ತದೆ. ಹಾಗಾದರೇ ಸದ್ಯ ಟ್ರೆಂಡಿಂಗ್‌ನಲ್ಲಿರುವ ಟಾಪ್‌ಟೆನ್ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವು ಏನೆಲ್ಲಾ ಸ್ಪೆಶಲ್ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಮೂರು ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲ್ ಆಗಿವೆ. Exynos 9610 ಚಿಪ್‌ಸೆಟ್ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಶಿಯೋಮಿ ರೆಡ್ಮಿ ನೋಟ್7 ಪ್ರೋ
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿವೆ.

ಶಿಯೋಮಿ ರೆಡ್ಮಿ ನೋಟ್7
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಜೊತೆಗೆ, 4/6GB RAM 64GB ಸ್ಟೋರೆಜ್ ಮತ್ತು 3/32GB ಸಾಮರ್ಥ್ಯದ ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿವೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ30
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್ ಮತ್ತು 16 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇದೆ. Exynos 7904 ಚಿಪ್‌ಸೆಟ್ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್10 ಪ್ಲಸ್
6.4 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇ ಮತ್ತು ಫೋನ್ ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಅವು 12+12+16 ಮೆಗಪಿಕ್ಸಲ್ ಸಾಮರ್ಥ್ಯದಲ್ಲಿವೆ ಹಾಗೂ ಸೆಲ್ಫಿಗಾಗಿ 10+8 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಎರಡು ಕ್ಯಾಮೆರಾ ಒದಗಿಸಲಾಗಿದೆ. Exynos 9820 ಸಾಮರ್ಥ್ಯದ ಚಿಪ್‌ಸೆಟ್ ನೊಂದಿಗೆ 12 GB RAM/1 TB ಮತ್ತು 8 GB RAM/128/512 GB ಸಾಮರ್ಥ್ಯದಲ್ಲಿ ಸ್ಟೋರೆಜ್ ಆಯ್ಕೆ ದೊರೆಯಲಿದ್ದು, 4100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಶಿಯೋಮಿ ಬ್ಲ್ಯಾಕ್ ಶಾರ್ಕ್ 2
ಇದೊಂದು ಗೇಮಿಂಗ್ ಫೋನಾಗಿದ್ದು, 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.39 ಇಂಚಿನ ಫುಲ್ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಪವರ್‌ಫುಲ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಜೊತೆಗೆ, 6/8 GB RAM ಮತ್ತು 128 GB ಸ್ಟೋರೆಜ್ ಹಾಗೂ 8/12 GB RAM ಮತ್ತು 256 GB ಸ್ಟೋರೆಜ್ ಸಾಮರ್ಥ್ಯದ ಆಯ್ಕೆಗಳಲ್ಲಿ ದೊರೆಯಲಿದೆ. 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮತ್ತು ಸೆಲ್ಫಿ ಕ್ಯಾಮೆರಾ 20 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿವೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ40
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.9 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿವೆ. Exynos 7885 ಚಿಪ್‌ಸೆಟ್ ಜೊತೆಗೆ 6GB RAM/64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 3100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ20
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್ ಮತ್ತು 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇದೆ. Exynos 7904 ಚಿಪ್‌ಸೆಟ್ ಜೊತೆಗೆ 6/3 GB RAM ಮತ್ತು 32/64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್ 10
6.1 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇ ಮತ್ತು ಫೋನ್ ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಅವು 12+12+16 ಮೆಗಪಿಕ್ಸಲ್ ಸಾಮರ್ಥ್ಯದಲ್ಲಿವೆ ಹಾಗೂ ಸೆಲ್ಫಿಗಾಗಿ 10 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ. Exynos 9820 ಸಾಮರ್ಥ್ಯದ ಚಿಪ್‌ಸೆಟ್ ನೊಂದಿಗೆ 8 GB RAM ಮತ್ತು 128/512 GB ಸಾಮರ್ಥ್ಯದ ಸ್ಟೋರೆಜ್ ಆಯ್ಕೆ ದೊರೆಯಲಿದ್ದು, 3400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ30
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 16 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿವೆ. Exynos 7904 ಚಿಪ್‌ಸೆಟ್ ಜೊತೆಗೆ 3GB RAM/32 GB ಮತ್ತು 4GB RAM /64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








