ಪ್ಯಾಂಟ್‌ ಕಿಸೆ ಒಳಗಡೆ ಹೋಗಬಲ್ಲ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್‌ಗಳು

Posted By:

    ಸ್ಮಾರ್ಟ್‌ಫೋನ್‌ನ್ನು ಬಹಳಷ್ಟು ಮಂದಿ ಪ್ರೊಸೆಸರ್‌,ರ್‍ಯಾಮ್‌,ಆಪರೇಟಿಂಗ್‌ ಸಿಸ್ಟಂ,ಕ್ಯಾಮೆರಾ ವಿಶೇಷತೆಗಳನ್ನು ನೋಡಿ ಖರೀದಿಸುತ್ತಾರೆ. ಆದರೆ ಇನ್ನೂ ಕೆಲವರು ಅದರ ಸ್ಕ್ರೀನ್‌ ಸೈಜ್‌ ನೋಡಿ ಬಳಿಕ ಇತರ ವಿಶೇಷತೆಗಳನ್ನು ಲೆಕ್ಕ ಹಾಕಿ ತಮ್ಮ ಬಜೆಟ್‌‌ಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ.

    ಯಾಕೆ ಈ ಮಾತು ಅಂದ್ರೆ ಹೊಸದಾಗಿ ಸ್ಮಾರ್ಟ್‌ಫೋನ್‌ ಖರೀದಿಸುವ ಕೆಲವು ಮಂದಿಗೆ ದೊಡ್ಡ ಸಮಸ್ಯೆಯಾಗಿ ಕಾಣುವುದು ಅದರ ಸ್ಕ್ರೀನ್‌. ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ ಖರೀದಿಸಿದ್ರೆ ಫೋಟೋ ವಿಡಿಯೋಗಳನ್ನು ಚೆನ್ನಾಗಿ ನೋಡಬಹುದು ನಿಜ.ಆದರೆ ಈ ಸ್ಮಾರ್ಟ್‌ಫೋನ್‌‌ಗಳು ಪ್ಯಾಂಟ್‌ ಕಿಸೆ ಒಳಗಡೆ ಹೋಗುವುದಿಲ್ಲ.ಯಾವಾಗಲೂ ಅದನ್ನು ಕೈಯಲ್ಲಿ ಹಿಡಿದುಕೊಂಡೆ ಇರಬೇಕಾಗುತ್ತದೆ. ಹೀಗಾಗಿ ಬಹಳಷ್ಟು ಜನರು ಐದು ಇಂಚಿಗಿಂತಲೂ ದೊಡ್ಡ ದೊಡ್ಡ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾದರೂ, ಇವರು ಮಾತ್ರ 4 ರಿಂದ 4.5 ಇಂಚಿನ ಒಳಗಡೆ ಇರುವ ಸ್ಮಾರ್ಟ್‌ಫೋನ್‌ ಹುಡುಕಿ ಖರೀದಿಸುತ್ತಾರೆ.ನಿಮಗೆ ತಿಳಿದಿರಬಹುದು ಆಪಲ್‌ ಐಫೋನ್‌ ಹೆಚ್ಚು ಜನರು ಇದೇ ಕಾರಣಕ್ಕೆ ಇಷ್ಟ ಪಡುವುದು.ಇತ್ತೀಚಿಗಷ್ಟೇ ಬಿಡುಗಡೆಯಾದ ಐಫೋನ್‌ 5 ಎಸ್‌ ಸಹ ನಾಲ್ಕು ಇಂಚಿನ ಸ್ಕ್ರೀನ್‌ ಹೊಂದಿದೆ.

    ಹೀಗಾಗಿ ಇಲ್ಲಿ ದೇಶೀಯ ಮತ್ತು ವಿಶ್ವದ ಟಾಪ್‌ ಕಂಪೆನಿಗಳ ಪ್ಯಾಂಟ್‌ ಕಿಸೆ ಒಳಗಡೆ ಹೋಗಬಲ್ಲ 4 ರಿಂದ 4.5 ಇಂಚಿನ ಒಳಗಡೆ ಇರುವ ಜೆಲ್ಲಿಬೀನ್‌ ಓಎಸ್‌ ಹೊಂದಿರುವ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ನೋಡಿಕೊಂಡು ಹೋಗಿ.ಇಷ್ಟವಾದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿ.

    ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಝೋಲೋ ಎ 500 ಎಸ್‌

    ಬೆಲೆ:6,490

    ವಿಶೇಷತೆ:
    4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
    ಆಂಡ್ರಾಯ್ಡ್ 4.2 ಜೆಲ್ಲಿಬೀನ್‌ ಓಎಸ್‌
    1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
    1GB RAM
    4GB ಆಂತರಿಕ ಮಮೋರಿ
    5. ಎಂಪಿ ಹಿಂದುಗಡೆ ಕ್ಯಾಮೆರಾ,ಎಲ್‌ಇಡಿ ಫ್ಯಾಶ್‌
    ಮುಂದುಗಡೆ ವಿಜೆಎ ಕ್ಯಾಮೆರಾ
    32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    ವೈಫೈ,ಬ್ಲೂಟೂತ್‌,ಜಿಪಿಎಸ್‌,ಎಜಿಪಿಎಸ್‌
    1400mAh ಬ್ಯಾಟರಿ

    ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಫನ್‌ ಎ 63

    ಬೆಲೆ:6,749

    ವಿಶೇಷತೆ:
    ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
    4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
    ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
    1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
    512MB RAM
    1GB ಆಂತರಿಕ ಮೆಮೋರಿ
    32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    2 ಎಂಪಿ ಹಿಂದುಗಡೆ ಕ್ಯಾಮೆರಾ
    0.3 ಎಂಪಿ ಮುಂದುಗಡೆ ಕ್ಯಾಮೆರಾ
    3ಜಿ,ವೈಫೈ,ಬ್ಲೂಟೂತ್‌‌
    1500 mAh ಬ್ಯಾಟರಿ

    ಲಾವಾ ಐರಿಸ್‌ 402

    ಬೆಲೆ:5,129

    ವಿಶೇಷತೆ:
    ಡ್ಯುಯಲ್‌ ಸಿಮ್‌ 4 ಇಂಚಿನ WVGA ಟಚ್‌ಸ್ಕ್ರೀನ್‌(480x800 ಪಿಕ್ಸೆಲ್‌)
    ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
    1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
    256 MB RAM
    ಫ್ಲಾಶ್‌ ಸಹಿತ 3 ಎಂಪಿ ಹಿಂದುಗಡೆ ಕ್ಯಾಮೆರಾ
    ಮುಂದುಗಡೆ ವಿಜೆಎ ಕ್ಯಾಮೆರಾ
    3ಜಿ, ಬ್ಲೂಟೂತ್‌‌,ವೈಫೈ,ಜಿಪಿಎಸ್‌
    32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    1500mAh ಬ್ಯಾಟರಿ

    ಕಾರ್ಬ‌ನ್‌ ಟೈಟಾನಿಯಂ ಎಸ್ 1

    ಬೆಲೆ:7,567

    ವಿಶೇಷತೆ:
    ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
    4.4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್
    ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
    1.2 GHz ಕ್ವಾಡ್‌ ಕೋರ್‍ ಪ್ರೊಸೆಸರ್‍
    512 MB RAM
    4 GB ಆಂತರಿಕ ಮಮೋರಿ
    32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    5 ಎಂಪಿ ಹಿಂದುಗಡೆ ಕ್ಯಾಮೆರಾ
    1600 mAh ಬ್ಯಾಟರಿ

    ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯೂಸಿಕ್‌ ಎ 88

    ಬೆಲೆ: 8,399

    ವಿಶೇಷತೆ:
    ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
    4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(854 x 480 ಪಿಕ್ಸೆಲ್‌)
    ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
    1.2 GHz ಡ್ಯುಯಲ್ ಕೋರ್‌ ಮೀಡಿಯಾ ಟೆಕ್ ಪ್ರೊಸೆಸರ್
    5 ಎಂಪಿ ಹಿಂದುಗಡೆ ಕ್ಯಾಮೆರಾ
    0.3 ಎಂಪಿ ಮುಂದುಗಡೆ ಕ್ಯಾಮೆರಾ
    4GB ಆಂತರಿಕ ಮೆಮೋರಿ
    512MB RAM
    3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
    1800 mAh ಬ್ಯಾಟರಿ

    ಹುವಾವೇ ಅಸೆಂಡ್‌ ವೈ 300

    ಬೆಲೆ:7,499

    ವಿಶೇಷತೆ:
    ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
    4 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
    ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್
    1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
    5 ಎಂಪಿ ಹಿಂದುಗಡೆ ಕ್ಯಾಮೆರಾ
    0.3 ಎಂಪಿ ಮುಂದುಗಡೆ ಕ್ಯಾಮೆರಾ
    32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    1730 mAh ಬ್ಯಾಟರಿ

    ಸೋನಿ ಎಕ್ಸ್‌ಪೀರಿಯಾ ಎಲ್‌

    ಬೆಲೆ:15,799

    ವಿಶೇಷತೆ:
    ಸಿಂಗಲ್‌ ಸಿಮ್‌
    ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
    4.3 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್(854 x 480 ಪಿಕ್ಸೆಲ್‌)
    1GHz ಡ್ಯುಯಲ್‌ ಕೋರ್‌ಪ್ರೊಸೆಸರ್‌
    1GB RAM
    8GB ಆಂತರಿಕ ಮೆಮೋರಿ
    8 ಎಂಪಿ ಹಿಂದುಗಡೆ ಕ್ಯಾಮೆರಾ
    ಮುಂದುಗಡೆ ವಿಜಿಎ ಕ್ಯಾಮೆರಾ
    32GBವರೆಗೆ ವಿಸ್ತರಸಿಬಹುದಾದ ಶೇಖರಣಾ ಸಾಮರ್ಥ್ಯ ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
    1,750 mAh ಬ್ಯಾಟರಿ

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ

    ಬೆಲೆ:24,690

    ವಿಶೇಷತೆ:
    ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
    4.3 ಇಂಚಿನ qHD ಸೂಪರ್‌ AMOLED ಸ್ಕ್ರೀನ್‌
    ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
    1.7GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
    1.5GB of RAM
    8GB ಆಂತರಿಕ ಮೆಮೋರಿ
    64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    8 ಎಂಪಿ ಹಿಂದುಗಡೆ ಕ್ಯಾಮೆರಾ
    1.9 ಎಂಪಿ ಮುಂದುಗಡೆ ಕ್ಯಾಮೆರಾ
    1900mAh ಬ್ಯಾಟರಿ

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್ II ಪ್ಲಸ್‌

    ಬೆಲೆ: 18,489

    ವಿಶೇಷತೆ:
    4.3 ಇಂಚಿನ AMOLED ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
    ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
    1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
    8 ಎಂಪಿ ಹಿಂದುಗಡೆ ಕ್ಯಾಮೆರಾ
    1GB RAM
    8GB ಆಂತರಿಕ ಮೆಮೋರಿ
    2 ಎಂಪಿ ಮುಂದುಗಡೆ ಕ್ಯಾಮೆರಾ
    64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    1650 mAh ಬ್ಯಾಟರಿ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more