ಅಗ್ಗದ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ ಇಲ್ಲವೆ ನೋಡಿ ಬೆಸ್ಟ್ ಆಯ್ಕೆ!

|

ಸದ್ಯ ಸ್ಮಾರ್ಟ್‌ಫೋನ್‌ ಇಲ್ಲದೇ ಯಾವ ಕೆಲಸಗಳು ನಡೆಯವು ಎನ್ನುವಂತ ಸನ್ನಿವೇಶಗಳನ್ನು ನೋಡಿದ್ದವೆ. ಹೀಗಾಗಿ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಇಂದಿನ ಅನಿವಾರ್ಯತೆಗಳಲ್ಲೊಂದಾಗಿದೆ. ಮೊಬೈಲ್‌ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಅವುಗಳಲ್ಲಿ ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಾರೆ. ಆದರೆ ಅಗ್ಗದ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರ ಸಂಖ್ಯೆಯೇ ಹೆಚ್ಚು.

ಅಗ್ಗದ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ ಇಲ್ಲವೆ ನೋಡಿ ಬೆಸ್ಟ್ ಆಯ್ಕೆ

ಹೌದು, ಎಲ್ಲರೂ ದುಬಾರಿ ಬೆಲೆಯ ಪ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಮುಂದಾಗುವುದಿಲ್ಲ. ಬಹುತೇಕ ಗ್ರಾಹಕರು ಇರುವುದರಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಬಜೆಟ್‌ ಬೆಲೆಯ ಸ್ಮಾರ್ಟ್‌ಪೋನ್‌ ಖರೀದಿಸಲು ಇಚ್ಚಿಸುತ್ತಾರೆ. ಇಂಥಹ ಗ್ರಾಹಕರನ್ನು ಗಮನಿಸಿಕೊಂಡೆ ಮೊಬೈಲ್ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಬಜೆಟ್‌ ದರದಲ್ಲಿ ಉತ್ತಮ ಸ್ಮಾರ್ಟ್‌ಪೋನ್‌ ಪರಿಚಯಿಸುತ್ತಿವೆ.

ಅಗ್ಗದ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ ಇಲ್ಲವೆ ನೋಡಿ ಬೆಸ್ಟ್ ಆಯ್ಕೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಅನೇಕ ಬಜೆಟ್‌ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಅವುಗಳಲ್ಲಿ ಖರೀದಿಗೆ ಯಾವುದು ಉತ್ತಮ ಎಂಬ ಗೊಂದಲ ಮೂಡಿರುತ್ತದೆ. ಹೀಗಾಗಿ ಇಂದಿನ ಈ ಲೇಖನದಲ್ಲಿ ಸದ್ಯ ಮೇ ತಿಂಗಳಲ್ಲಿ ಹತ್ತು ಸಾವಿರ ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಪೋನ್‌ಗಳ ಬಗ್ಗೆ ತಿಳಿಸಲಾಗಿದೆ. ಹಾಗಾದರೇ ಬಜೆಟ್‌ ಬೆಲೆಯ ಐದು ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಕೀ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರಿಯಲ್ ಮಿ 3

ರಿಯಲ್ ಮಿ 3

1520 x 720 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.2 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 4230mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ನೀಡಲಾಗಿದೆ. ಮೀಡಿಯಾ ಟೆಕ್‌ ಹಿಲಿಯೊ P70 ಪ್ರೊಸೆಸರ್ ಅದರಲ್ಲಿದ್ದು, ಡೈನಾಮಿಕ್ ಬ್ಲ್ಯಾಕ್, ರೇಡಿಯಂಟ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. ಮೂರು ವೇರಿಯಂಟ್ ಮಾದರಿಗಳಲ್ಲಿ ಲಭ್ಯವಿದ್ದು, ಅವು ಕ್ರಮವಾಗಿ 3GB RAM ಮತ್ತು 32GB (8,999ರೂ.ಗಳು) 4GB RAM ಮತ್ತು, 64GB (10,999ರೂ.ಗಳು) ಹಾಗೂ 3GB RAM ಮತ್ತು 64GB (9,999ರೂ.ಗಳು)

ಶಿಯೋಮಿ ರೆಡ್ಮಿ 7

ಶಿಯೋಮಿ ರೆಡ್ಮಿ 7

ಈ ಫೋನ್‌ ಸಹ 1520 x 720 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.26 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 4000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಸ್ನ್ಯಾಪ್‌ಡ್ರಾಗನ್ 632 ಪ್ರೊಸೆಸರ್ ಇದರಲ್ಲಿ ಕೆಲಸ ಮಾಡಲಿದ್ದು, ಮೂರು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದೆ. 3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಬೆಲೆಯು 8,999ರೂ.ಗಳು ಆಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ10

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ10

6.2 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ Exynos 7870 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಡಿಸ್‌ಪ್ಲೇಯು ನೆಟ್‌ಫ್ಲೆಕ್ಸ್, ಯೂಟ್ಯೂಬ್ ವಿಡಿಯೊಗಳು ಹೆಚ್‌ಡಿ ಕ್ವಾಲಿಟಿಯಲ್ಲಿ ಪ್ಲೇಗೆ ಬೆಂಬಲ ನೀಡಲಿದೆ. 3,400mAh ಸಾಮರ್ಥ್ಯದ ಉತ್ತಮ ಬ್ಯಾಟರಿಯನ್ನು ಹೊಂದಿದ್ದು, ಹಿಂಬದಿಯಲ್ಲಿ 13+5ಎಂಪಿ ಡ್ಯುಯಲ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿದ್ದು, ಆರಂಭಿಕ ಬೆಲೆಯು 7,990ರೂ.ಗಳು ಆಗಿದೆ.

ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್‌ ಎಂ2

ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್‌ ಎಂ2

1520 x 720 ಪಿಕ್ಸಲ್ ರೆಸಲ್ಯೂಶನ ಸಾಮರ್ಥ್ಯದೊಂದಿಗೆ 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ನ್ಯಾಪ್‌ಡ್ರಾಗನ್ 632 ಪ್ರೊಸೆಸರ್‌ ಮಲ್ಟಿಟಾಸ್ಕ್ ಕೆಲಸಗಳಿಗೆ ಬೆಂಬಲ ನೀಡಲಿದ್ದು, 3GB ಮತ್ತು 4GB RAM ಆಯ್ಕೆಗಳಲ್ಲಿ ದೊರೆಯಲಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, 4000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. 3GB RAM ಮತ್ತು 32GB ಬೆಲೆಯು 8,499ರೂ.ಗಳು ಆಗಿದೆ.

ಇನ್‌ಫಿನಿಕ್ಸ್‌ ಸ್ಮಾರ್ಟ್‌ 3 ಪ್ಲಸ್‌

ಇನ್‌ಫಿನಿಕ್ಸ್‌ ಸ್ಮಾರ್ಟ್‌ 3 ಪ್ಲಸ್‌

ಕಳೆದ ತಿಂಗಳು ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ 1520 x 720 ಪಿಕ್ಸಲ್ ರೆಸಲ್ಯೂಶನ ಸಾಮರ್ಥ್ಯದೊಂದಿಗೆ 6.21 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಕ್ವಾರ್ಡ್ ಕೋರ್‌ ಮೀಡಿಯಾ ಟೆಕ್‌ A22 ಪ್ರೊಸೆಸರ್ ಅನ್ನು ಹೊಂದಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ನೀಡಿರುವ ಜೊತೆಗೆ ಉತ್ತಮ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. 3500mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಇದು ಒಳಗೊಂಡಿದ್ದು, ಮಿಡ್‌ ಬ್ಲ್ಯಾಕ್‌ ಮತ್ತು Cyan ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಇದರ ಆರಂಭಿಕ ಬೆಲೆಯು 6,999ರೂ.ಗಳು ಆಗಿದೆ.

ಓದಿರಿ : ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!ಓದಿರಿ : ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!

Best Mobiles in India

English summary
Top 5 Smartphones under Rs 10,000 (May 2019).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X