Wireless charging: ಅತ್ಯುತ್ತಮ ವೈರ್‌ಲೆಸ್ ಚಾರ್ಜಿಂಗ್ ಫೀಚರ್ಸ್ ಆಯ್ಕೆಯ ಫೋನ್‌ಗಳಿವು!
ಸ್ಮಾರ್ಟ್‌ಫೋನ್‌ಗಳ (Smartphones) ವಿಭಾಗದಲ್ಲಿ ವಿವಿಧ ಫೀಚರ್ಸ್ ಆಯ್ಕೆಯನ್ನು ಗಮನಿಸಬಹುದು. ಅದರಂತೆ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ (Wireless charging) ಇರುವ ಫೋನ್‌ಗಳು ಸಹ ಪ್ರಮುಖವಾಗಿದೆ. ಅದರಲ್ಲೂ ಪ್ರೀಮಿಯಂ ಫೋನ್‌ಗಳಲ್ಲಿ ಈ ಸೌಲಭ್ಯ ಇದ್ದು, ಈ ಫೀಚರ್ಸ್‌ಗೆ ಗ್ರಾಹಕರು ಫಿದಾ ಆಗಿದ್ದಾರೆ.
ಹೌದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಂದು ಕಡೆಯಾದರೆ ವೈರ್‌ಲೆಸ್ ಚಾರ್ಜಿಂಗ್ ಫೀಚರ್ಸ್ ಮತ್ತೊಂದು ಕಡೆ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿದೆ. ಈ ಸೌಲಭ್ಯ ಇರುವ ಅದೆಷ್ಟೋ ಫೋನ್‌ಗಳನ್ನು ಆಪಲ್, ಸ್ಯಾಮ್‌ಸಂಗ್ ನೋಡಬಹುದಾಗಿದೆ. ಹಾಗಿದ್ರೆ, ಬನ್ನಿ ಈ ವೈರ್‌ಲೆಸ್ ಫೀಚರ್ಸ್ ಆಯ್ಕೆ ಇರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು?, ಅವುಗಳ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಆಪಲ್ ಐಫೋನ್ 15 ಪ್ರೊ ಮ್ಯಾಕ್ಸ್: ಈ ಸ್ಮಾರ್ಟ್‌ಫೋನ್ (Apple iPhone 15 Pro Max) 179,900 ರೂ.ಗಳ ಬೆಲೆಗೆ ಲಭ್ಯ ಇದ್ದು, ಹೆಕ್ಸಾ ಕೋರ್ (3.78 GHz, ಡ್ಯುಯಲ್ ಕೋರ್ + 2.11 GHz, ಕ್ವಾಡ್ ಕೋರ್) ಆಪಲ್ A17 ಪ್ರೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ FHD+, OLED ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಮೂಲಕ ಉತ್ತಮ ಬಳಕೆಯ ಅನುಭವ ನೀಡಲಿದೆ. ಹಾಗೆಯೇ 4422 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ.
ಆಪಲ್ ಐಫೋನ್ 13 ಪ್ರೊ ಮ್ಯಾಕ್ಸ್: ಈ ಫೋನ್ (Apple iPhone 13 Pro Max) ಸಹ ವೈರ್‌ಲೆಸ್ ಚಾರ್ಜಿಂಗ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇನ್ನು ಹೆಕ್ಸಾ ಕೋರ್ (3.23 GHz, ಡ್ಯುಯಲ್ ಕೋರ್ + 1.82 GHz, ಕ್ವಾಡ್ ಕೋರ್) ಆಪಲ್ A15 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 6.7 ಇಂಚಿನ FHD+, OLED ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 12 MP + 12 MP + 12 MP ಟ್ರಿಪಲ್ ರಿಯರ್ ಕ್ಯಾಮೆರಾ, 12 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದ್ದು, 4352 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 1TB: ಈ ಸ್ಮಾರ್ಟ್‌ಫೋನ್ (Samsung Galaxy S24 Ultra) ನಿಮಗೆ 158,999 ರೂ.ಗಳ ಬೆಲೆಗೆ ಲಭ್ಯ ಇದೆ. ಇದು ಆಕ್ಟಾ ಕೋರ್ (3.39 GHz, ಸಿಂಗಲ್ ಕೋರ್ + 3.1 GHz, ಟ್ರೈ ಕೋರ್ + 2.9 GHz, ಡ್ಯುಯಲ್ ಕೋರ್ + 2.2 GHz, ಡ್ಯುಯಲ್ ಕೋರ್) ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.8 ಇಂಚಿನ QHD+, ಡೈನಾಮಿಕ್ ಅಮೋಲೆಡ್ 2x ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಇದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಇದರಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5: ಈ ಫೋನ್ (Samsung Galaxy Z Fold 5) 154,999 ರೂ.ಗಳ ಬೆಲೆಗೆ ಕಾಣಿಸಿಕೊಂಡಿದೆ. ಇದು ಆಕ್ಟಾ ಕೋರ್ (3.36 GHz, ಸಿಂಗಲ್ ಕೋರ್ + 2.8 GHz, ಕ್ವಾಡ್ ಕೋರ್ + 2 GHz, ಟ್ರೈ ಕೋರ್) ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲ ಪಡೆದಿದ್ದು, 50 MP + 12 MP + 10 MP ಟ್ರಿಪಲ್ ರಿಯರ್ ಕ್ಯಾಮೆರಾ, 10 MP + 4 MP ಡ್ಯುಯಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಹಾಗೆಯೇ 4400 mAh ಸಾಮರ್ಥ್ಯದ ಬ್ಯಾಟರಿಯಲ್ಲಿ ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ 1TB: ಈ ಫೋನ್ (Samsung Galaxy S22 Ultra) ಅನ್ನು ನೀವೀಗ 134,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೋನ್ ಆಕ್ಟಾ ಕೋರ್ (3 GHz, ಸಿಂಗಲ್ ಕೋರ್ + 2.4 GHz, ಟ್ರೈ ಕೋರ್ + 1.7 GHz, ಕ್ವಾಡ್ ಕೋರ್) ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6.8 ಇಂಚಿನ ಕ್ಯೂಹೆಚ್‌ಡಿ+, ಡೈನಾಮಿಕ್ ಅಮೋಲೆಡ್ 2x ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.


Click it and Unblock the Notifications








