smartphones: ಟ್ರಿಪಲ್ ಕ್ಯಾಮೆರಾ ಆಯ್ಕೆ ಇರುವ ಪ್ರಮುಖವಾದ ಐದು ಸ್ಲಿಮ್ ಸ್ಮಾರ್ಟ್‌ಫೋನ್‌ಗಳು! ಬೆಲೆ ಎಷ್ಟು ಗೊತ್ತಾ?
ಸ್ಮಾರ್ಟ್‌ಫೋನ್ (smartphones) ತಯಾರಿಕಾ ಕಂಪೆನಿಗಳು ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಈ ವಿಭಾಗದಲ್ಲಿ ಬಜೆಟ್ ಬೆಲೆಯಿಂದ ದುಬಾರಿ ಬೆಲೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದಾಗಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಆಫರ್ ಸಹ ನೀಡಲಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿವೆ. ಅದರಂತೆ ಟ್ರಿಪಲ್ ಕ್ಯಾಮೆರಾ ಹಾಗೂ ಹಗುರವಾದ ವಿನ್ಯಾಸ (Triple camera and lightweight design) ಇರುವ ಫೋನ್‌ಗಳು ಹೆಚ್ಚು ಸೇಲ್ ಆಗುತ್ತಿವೆ. ನೀವು ಏನಾದರೂ ಈ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಇಚ್ಚಿಸಿದ್ರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಹಾಗಿದ್ರೆ, ಬನ್ನಿ ಈ ವಿಭಾಗದಲ್ಲಿ ಟಾಪ್ ಸ್ಥಾನದಲ್ಲಿರುವ ಪ್ರಮುಖ ಐದು ಫೋನ್‌ಗಳ ವಿವರವನ್ನು ಗಮನಿಸೋಣ.

ವಿವೋ V30 ಪ್ರೊ 5G: ಈ ಸ್ಮಾರ್ಟ್‌ಫೋನ್ (Vivo V30 Pro 5G) ಸ್ವಲ್ಪ ದುಬಾರಿ ಎನಿಸಿದರು ಉತ್ತಮ ಫೀಚರ್ಸ್ ಆಯ್ಕೆ ಪಡೆದಿದೆ. ಅಂದರೆ ನೀವು ಇದನ್ನು 41,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.78 ಇಂಚಿನ 1260 x 2800 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120 Hz ರಿಫ್ರೆಶ್ ರೇಟ್ ನೊಂದಿಗೆ ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸ ಪಡೆದಿದೆ. ಉಳಿದಂತೆ ಈ ಫೋನ್ ಡೈಮೆನ್ಸಿಟಿ 8200 ಪ್ರೊಸೆಸರ್ ಬಲ ಹಾಗೂ 50 MP + 50 MP + 50 MP ಟ್ರಿಪಲ್ ರಿಯರ್ ಮತ್ತು 50 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಒಪ್ಪೋ F25 ಪ್ರೊ 5G: ಈ ಫೋನ್ (Oppo F25 Pro 5G) 23,499 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 6.7 ಇಂಚಿನ 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದ್ದು, ಡೈಮೆನ್ಸಿಟಿ 7050 ಪ್ರೊಸೆಸರ್ ಕಾರ್ಯಕ್ಷಮತೆ, 8 GB RAM, 128 GB ಇಂಟರ್ ಸ್ಟೋರೇಜ್ ಬಲದೊಂದಿಗೆ 64 MP + 8 MP + 2 MP ಟ್ರಿಪಲ್ ರಿಯರ್ ಮತ್ತು 32 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

ರಿಯಲ್‌ಮಿ 12 ಪ್ಲಸ್ 5G: ಈ ಸ್ಮಾರ್ಟ್‌ಫೋನ್ (Realme 12 Plus 5G) ಅನ್ನು ನೀವು 19,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ನೊಂದಿಗೆ ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸ ಪಡೆದಿದೆ. ಹಾಗೆಯೇ 8 GB RAM, 128 GB ಇಂಟರ್ ಸ್ಟೋರೇಜ್ ಬಲ 50 MP + 8 MP + 2 MP ಟ್ರಿಪಲ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾ ಮೂಲಕ ಉತ್ತಮ ಅನುಭವ ನೀಡಲಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.
ಶಿಯೋಮಿ ರೆಡ್ಮಿ ನೋಟ್ 13 ಪ್ರೊ 5G: ಈ ಸ್ಮಾರ್ಟ್‌ಫೋನ್ (Xiaomi Redmi Note 13 Pro 5G) 24,042 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು 6.67 ಇಂಚಿನ 1220 x 2712 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಸನ್ ಸಾಮರ್ಥ್ಯ ಇರುವ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್ ಬಲ ಪಡೆದಿದೆ. ಹಾಗೆಯೇ 8 GB RAM, 128 GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಲಭ್ಯ ಇದ್ದು, 200 MP + 8 MP + 2 MP ಟ್ರಿಪಲ್ ರಿಯರ್ ಮತ್ತು 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ 5100 mAh ಸಾಮರ್ಥ್ಯದ ಬ್ಯಾಟರಿ ಹಾಗೂ 67W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಒನ್‌ಪ್ಲಸ್12R: ಈ ಫೋನ್ (OnePlus 12R) ನಿಮಗೆ 39,168 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್ 6.78 ಇಂಚಿನ 1264 x 2780 ಪಿಕ್ಸೆಲ್ ಸ್ಕ್ರೀನ್ ಸಾಮರ್ಥ್ಯ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 50 MP + 8 MP + 2 MP ಟ್ರಿಪಲ್ ರಿಯರ್ ಹಾಗೂ 16 MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದು. ಹಾಗೆಯೇ ಈ ಫೋನ್ 100W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.


Click it and Unblock the Notifications








