Home
ಮೊಬೈಲ್

2016ನೇ ವರ್ಷದಲ್ಲಿ ಹೆಚ್ಚು ಸೇಲ್ ಆದ ಟಾಪ್ 5 ಸ್ಮಾರ್ಟ್‌ಫೋನ್‌ ಲೀಸ್ಟ್!!?

2016 ರಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ವಿಶೇಷತೆ ಏನು? ಎಂಬುದು ಎಲ್ಲರಲ್ಲಿಯೂ ಕುತೋಹಲ ಮೂಡಿಸಿರುತ್ತದೆ.

By Bhaskar N J

2016ನೇ ವರ್ಷದಲ್ಲಿ ನೂರಾರು ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾದವು ಆದರೆ, ಫಿಂಗರ್‌ಪ್ರಿಂಟ್, 4G ಇರುವ ಈ ಕಾಲದಲ್ಲಿ, ಅತ್ಯುತ್ತಮ ಫೀಚರ್‌ ಹೊಂದಿದ್ದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಗೆದ್ದವು. ಇನ್ನು ಇತರೆ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸೇಲ್ ಆಗಲಿಲ್ಲ ಎನ್ನಬಹುದು.

BSNLನಿಂದ ಇತಿಹಾಸದ ಅತ್ಯುತ್ತಮ ಆಫರ್...BSNL ರಾಯಭಾರಿಯಾಗುತ್ತಾರಾ ಮೋದಿ?

2016 ರಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ವಿಶೇಷತೆ ಏನು? ಎಂಬುದು ಎಲ್ಲರಲ್ಲಿಯೂ ಕುತೋಹಲ ಮೂಡಿಸಿರುತ್ತದೆ. ಹಾಗಾಗಿ, 2016 ರಲ್ಲಿ ಹೆಚ್ಚು ಮಾರಾಟವಾದ ಆದ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1  ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರಾಂಡ್ (Samsung Galaxy S7 Edge)

#1 ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರಾಂಡ್ (Samsung Galaxy S7 Edge)

5.5 ಇಂಚ್ ಕರ್ವ್‌ ಡಿಸ್‌ಪ್ಲೇ, ಡುವೆಲ್‌ ಪಿಕ್ಸೆಲ್‌ ಕ್ಯಾಮೆರಾ, ವಾಟರ್‌ ಮತ್ತು ಡಸ್ಟ್ ಪ್ರೂಫ್‌ನಂತಹ ಅತ್ಯಾಧುನಿಕ ಫೀಚರ್‌ ಹೊಂದಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7 ಗ್ರಾಂಡ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಎತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಆಗಿದೆ.

#2  ಐಫೋನ್ 7 ಪ್ಲಸ್‌ (iPhone 7 Plus)

#2 ಐಫೋನ್ 7 ಪ್ಲಸ್‌ (iPhone 7 Plus)

ಆಪಲ್ ಐಫೋನ್ ಎಂದರೆ ಸ್ಮಾರ್ಟ್‌ಫೋನ್‌ ಎನ್ನುವಷ್ಟು ಜನರು ಆಪಲ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಹಿಂದೆ ಬಿದ್ದಿದ್ದಾರೆ. ಅತ್ಯುತ್ತಮ ಫೀಚರ್‌ಗಳನ್ನು ಹೊಂದಿರುವ ಐಫೋನ್ 7 ಪ್ಲಸ್‌ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

 #3 ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್ (Google Pixel XL)

#3 ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್ (Google Pixel XL)

ಗೂಗಲ್‌ ಎಐ (ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್) ಪವರ್‌ ಹೊಂದಿದ ಗೂಗಲ್ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ತನ್ನ ಬ್ರಾಂಡ್‌ ಹೆಸರಿನಲ್ಲಿಯೇ ಹೆಚ್ಚು ಮಾರಾಟವಾಯಿತು ಎನ್ನಬಹುದು. 2.5ಡಿ ಕೋರ್ನಿಂಗ್‌ ಗೊರಿಲ್ಲಾ ಗ್ಲಾಸ್‌, 3450Amh ಬ್ಯಾಟರಿ ಹೊಂದಿದ್ದ ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಮೂರನೇ ಸ್ಥಾನ ಪಡೆದಿದೆ.

#4 ಐಫೋನ್‌ ಎಸ್‌ಇ  (iPhone SE)

#4 ಐಫೋನ್‌ ಎಸ್‌ಇ (iPhone SE)

ಓಲ್ಡ್‌ ಬಾಕ್ಸಿ ಡಿಸೈನ್‌ ಹೊಂದಿದ್ದ, 16 ಜಿಬಿ ಸ್ಟೋರೇಜ್‌ ಬೇಸ್‌ ಮಾಡೆಲ್‌ ಐಫೋನ್‌ ಎಸ್‌ಇ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 4 ಇಂಚ್ ಸ್ಕ್ರೀನ್‌, 12 ಎಂಪಿ ರಿಯರ್‌ ಕ್ಯಾಮೆರಾ, 2GB ರ್ಯಾಮ್ ಹೊಂದಿದ್ದ ಐಫೋನ್‌ ಎಸ್‌ಇ ಕಡಿಮೆ ಬೆಲೆಯಲ್ಲಿ ಜನರನ್ನು ಆಕರ್ಶಿಸಿತ್ತು.

#5 ಒನ್‌ಪ್ಲಸ್ 3ಟಿ (OnePlus 3T)

#5 ಒನ್‌ಪ್ಲಸ್ 3ಟಿ (OnePlus 3T)

ಒನ್‌ಪ್ಲಸ್ 3ಟಿ ಸ್ಮಾರ್ಟ್‌ಫೋನ್‌ ಖರೀದಿಸಲು ಸ್ಮಾರ್ಟ್‌ಫೋನ್ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದ ಸುದ್ದಿ ನಿಮಗೆ ಗೊತ್ತಿರಬಹುದು. ಕಡಿಮೆ ಬೆಲೆಯ ಅತ್ಯುತ್ತಮ ಫೋನ್‌ ಒನ್‌ಪ್ಲಸ್‌3. ಹಾಂಡ್‌ಸೆಟ್‌, ಹೆಚ್‌ಡಿ ಸ್ಕ್ರೀನ್‌, ಫಿಂಗರ್‌ಪ್ರಿಂಟ್‌ ಸೆನ್ಸರ್‌ ಫೀಚರ್‌ನಿಂದಾಗಿ ಹೆಚ್ಚು ಹೆಸರು ಮಾಡಿತು.

Best Mobiles in India

English summary
here is a list of best selling smartphone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+