12GB RAM, 60MP ಕ್ಯಾಮೆರಾವಿರುವ ಟೂರಿಂಗ್ ಫೋನ್‌ ಶೀಘ್ರದಲ್ಲಿ ಗ್ರಾಹಕರಿಗೆ!

Written By:

ಬಹುಸಂಖ್ಯಾತರು 'ಟೂರಿಂಗ್ ರೋಬೋಟಿಕ್‌ ಇಂಡಸ್ಟ್ರಿ' ಬಗ್ಗೆ ಮಾಹಿತಿ ತಿಳಿದಿರಲು ಸಾಧ್ಯವೇ ಇಲ್ಲ. ಟೂರಿಂಗ್ ರೋಬೋಟಿಕ್‌ ಇಂಡಸ್ಟ್ರಿಯ ಗುರಿ ಎಂದರೆ ಭವಿಷ್ಯದ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ದಿಪಡಿಸುವುದು.

ಟೂರಿಂಗ್ ಕಂಪನಿ ಪತ್ರವೊಂದನ್ನು ಹೊರಡಿಸಿದ್ದು, ಇದುವರೆಗೆ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲೇ ಯಾರು ಸಹ ಅಳವಡಿಸಿರದ ಕ್ಯಾಮೆರಾವನ್ನು ವ್ಯವಸ್ಥೆಗೊಳಿಸಿ ಸೂಪರ್‌ ಫೋನ್ ಅನ್ನು ಲಾಂಚ್‌ ಮಾಡುವ ಬಗ್ಗೆ ಮಾಹಿತಿ ತಿಳಿಸಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ 8GB RAM ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುವ ಮಾಹಿತಿ ಕೇಳಿದ್ದೇವು. ಆದರೆ ಇದೀಗ ಟೂರಿಂಗ್ ಕಂಪನಿ ಅದಕ್ಕೂ ಹೆಚ್ಚಿನ RAM ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ.

ಅಂದಹಾಗೆ ಟೂರಿಂಗ್ ಕಂಪನಿ ಲಾಂಚ್‌ ಮಾಡಲಿರುವ ಸೂಪರ್ ಫೋನ್‌ 12GB RAM, 2 ಸ್ನಾಪ್‌ಡ್ರಾಗನ್ 830 ಸಿಪಿಯು, 60MP ಕ್ಯಾಮೆರಾ ಮತ್ತು 1TB ಸ್ಟೋರೇಜ್‌ ಸಾಮರ್ಥ್ಯ ಫೀಚರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಹೆಸರೇನು, ಅದರ ಇತರೆ ವಿಶೇಷತೆಗಳೇನು, ಬೆಲೆ ಎಷ್ಟು, ಇತ್ಯಾದಿ ಮಾಹಿತಿಗಳನ್ನು ಲೇಖನದ ಕೆಳಗಿನ ಸ್ಲೈಡರ್‌ ಓದಿ ತಿಳಿಯಿರಿ.

ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್ ವಿರುದ್ಧ ಪ್ರಕರಣ ದಾಖಲು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡೆಂಜ

ಕಡೆಂಜ

* ಟೂರಿಂಗ್ ಕಂಪನಿ ಸ್ಮಾರ್ಟ್‌ಫೋನ್ ಹೆಸರು 'ಕಡೆಂಜ'
* 5.8 ಇಂಚಿನ 2560*1440p ಡಿಸ್‌ಪ್ಲೇ ಫೀಚರ್‌ ಹೊಂದಲಿದೆ

 'ಕಡೆಂಜ' ಡಿವೈಸ್‌ ವಿಶೇಷತೆ?

'ಕಡೆಂಜ' ಡಿವೈಸ್‌ ವಿಶೇಷತೆ?

* ಕೇವಲ ಒಂದಲ್ಲ. ಎರಡು ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 830 ಪ್ರೊಸೆಸರ್ಸ್‌(16 ಕೈರೊ ಕೋರ್ಸ್‌) ಚಾಲಿತ ಫೀಚರ್ ಹೊಂದಲಿದೆ

60MP ಕ್ಯಾಮೆರಾ

60MP ಕ್ಯಾಮೆರಾ

ಟೂರಿಂಗ್‌ ಸ್ಮಾರ್ಟ್‌ಫೋನ್‌ 'ಕಡೆಂಜ' 60MP ಐಮ್ಯಾಕ್ಸ್ ಕ್ಯಾಮೆರಾ, 6K ಕ್ವಾಡ್ ಹಿಂಭಾಗ ಕ್ಯಾಮೆರಾ ಮತ್ತು 3 ಲೆನ್ಸ್/T 1.2 20MP ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ (ಸೆಲ್ಫಿ ಕ್ಯಾಮೆರಾ) ಇರಲಿದೆ.

ಶೇಕರಣ ಸಾಮರ್ಥ್ಯ

ಶೇಕರಣ ಸಾಮರ್ಥ್ಯ

ಟೂರಿಂಗ್‌ ಫೋನ್‌ 'ಕಡೆಂಜ' ದಲ್ಲಿ 12GB RAM ಮತ್ತು 1 TB ಸ್ಟೋರೇಜ್‌ ಸಾಮರ್ಥ್ಯ ಫೀಚರ್ ಇರಲಿದೆ.

ಆಪರೇಟಿಂಗ್‌ ಸಿಸ್ಟಮ್‌

ಆಪರೇಟಿಂಗ್‌ ಸಿಸ್ಟಮ್‌

ಅಂದಹಾಗೆ ಸ್ಮಾರ್ಟ್‌ಫೋನ್‌ ಸ್ವರ್ಡ್ಫಿಶ್ ಓಎಸ್ ಹೊಂದಲಿದ್ದು, ಇದು ಹೆಚ್ಚು ಅಧ್ಯಯನ ಪೂರ್ವವಾಗಿದೆ.

ವಾಯ್ಸ್ ಪವರ್‌

ವಾಯ್ಸ್ ಪವರ್‌

ಫೋನ್‌ ಅನ್ನು ಕೈಯಲ್ಲಿ ಆನ್‌ ಮತ್ತು ಸ್ವಿಚ್‌ ಮಾಡಲು ಕೆಲವರಿಗೆ ಕಷ್ಟವಾಗಬಹುದು. ಆದ್ದರಿಂದ ಟೂರಿಂಗ್ ಫೋನ್‌ 'ಕಡೆಂಜ'ದಲ್ಲಿ ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್‌ ಅನ್ನು ಕೇವಲ ವಾಯ್ಸ್(ಧ್ವನಿ) ಮೂಲಕವೇ ನಿರ್ವಹಿಸಬಹುದಾಗಿದೆ.

 3 ರೀತಿಯ ಬ್ಯಾಟರಿ ಪವರ್

3 ರೀತಿಯ ಬ್ಯಾಟರಿ ಪವರ್

ಟೂರಿಂಗ್ ಸ್ಮಾರ್ಟ್‌ಫೋನ್‌ 'ಕಡೆಂಜ' 100wH ಮೂರು ರೀತಿಯ ಬ್ಯಾಟರಿ ಪವರ್‌ ಹೊಂದಿದ್ದು, " 2400mAh ಗ್ರಾಫೈನ್‌ ಸೂಪರ್‌ ಕ್ಯಾಪಸಿಟರ್‌ ಬ್ಯಾಟರಿ, 1600mAh ಲಿ ಐಯಾನ್‌ ಬ್ಯಾಟರಿ ಮತ್ತು ಹೈಡ್ರೋಜನ್ ಫ್ಯೂಯೆಲ್‌ ಬ್ಯಾಟರಿ ಸೆಲ್‌ ಹೊಂದಲಿದೆ.

 ಸಿಮ್‌ ಮತ್ತು ನೆಟ್‌ವರ್ಕ್‌

ಸಿಮ್‌ ಮತ್ತು ನೆಟ್‌ವರ್ಕ್‌

4 ನ್ಯಾನೋ ಸಿಮ್‌ಗಳನ್ನು ಫೋನ್‌ನಲ್ಲಿ ಬಳಸಬಹುದಾದ ಮತ್ತು 4G LTE ನೆಟ್‌ವರ್ಕ್‌ ಫೀಚರ್‌ ಹೊಂದಿರುತ್ತದೆ. ಮಾರ್ಷೆಲ್ ಸಮನಾಂತರ ಪ್ರಖ್ಯಾತ ಸೌಂಡ್‌ ಇರಲಿದೆ.

ಸ್ಮಾರ್ಟ್‌ಫೋನ್‌ ಬಿಡುಗಡೆ ಯಾವಾಗ

ಸ್ಮಾರ್ಟ್‌ಫೋನ್‌ ಬಿಡುಗಡೆ ಯಾವಾಗ

ಟೂರಿಂಗ್‌ ಸ್ಮಾರ್ಟ್‌ಫೋನ್‌ 'ಕಡೆಂಜ' 2017 ರಲ್ಲಿ ಬಿಡುಗಡೆ ಆಗಲಿದೆ.

ಇತರೆ ವೈಶಿಷ್ಟಗಳು

ಇತರೆ ವೈಶಿಷ್ಟಗಳು

ಟೂರಿಂಗ್‌ ಸ್ಮಾರ್ಟ್‌ಫೋನ್ 'ಕಡೆಂಜ' ಡೀಸೆಂಟ್‌ ಲುಕ್‌ ಪಡೆಯಲಿದೆ. ಅಲ್ಲದೇ ಸ್ಮಾರ್ಟ್‌ಫೋನ್‌ ಹೊರ ವಿನ್ಯಾಸ ಲಿಕ್ವಿಡ್‌ ಮೆಟಲ್‌ನಿಂದ ಅಭಿವೃದ್ದಿಗೊಳ್ಳಲಿದೆ. ಅಲ್ಯುಮಿನಿಯಂ ಮತ್ತು ಸ್ಟೀಲ್ ಅಂಶಗಳಿಗಿಂತ ಹೆಚ್ಚು ದೃಢತೆ ಹೊಂದಿರಲಿದೆ. ಸ್ಮಾರ್ಟ್‌ಫೋನ್‌ ಪ್ರಿಯರು ಈವರೆಗೆ ನೋಡಿರದ ಕ್ಯಾಮೆರಾ ಫೀಚರ್ 60MP ಇರುವ ಫೋನ್‌ ಅನ್ನು ಖರೀದಿಸಬಹುದಾಗಿದೆ. 'ಕಡೆಂಜ' ಬೆಲೆ ಎಷ್ಟು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಟೂರಿಂಗ್ 'ಕಡೆಂಜ' ಫೋನ್ ಬಗೆಗಿನ ಮಾಹಿತಿಗಾಗಿ ಗಿಜ್‌ಬಾಟ್‌ ಲೇಖನಗಳನ್ನು ಓದುತ್ತಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Turing Phone Cadenza Will Come With 12GB RAM, 2 Snapdragon 830 CPUs, 60MP camera and 1TB storage! Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot