ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್ ವಿರುದ್ಧ ಪ್ರಕರಣ ದಾಖಲು

By Shwetha
|

ಸಾಮಾಜಿಕ ತಾಣದಲ್ಲಿ ದಿಗ್ಗಜ ಎಂದೆನಿಸಿಕೊಂಡಿರುವ ವಾಟ್ಸಾಪ್‌ಗೆ ಈಗ ಸಂಕಷ್ಟ ಎದುರಾಗಿರುವುದು ತನ್ನ ಪ್ರೈವಸಿ ಪಾಲಿಸಿ ತೀರ್ಮಾನದಿಂದಾಗಿದೆ. ಹೊಸ ಪದ್ಧತಿಯ ಪ್ರಕಾರ ವಾಟ್ಸಾಪ್ ತನ್ನ ಬಳಕೆದಾರರ ಡೇಟಾವನ್ನು ಪಾಲುದಾರ ಕಂಪೆನಿಯೊಂದಿಗೆ ಹಂಚಿಕೊಳ್ಳಬಹುದಾಗಿದೆ. ಆದರೆ ವಾಟ್ಸಾಪ್‌ನ ಈ ಹೊಸ ನಿಯಮವು ಬಳಕೆದಾರರನ್ನು ಸಂಕಷ್ಟಕ್ಕೆ ಈಡು ಮಾಡುವುದು ನಿಖರ ಎಂಬುದಾಗಿ ತಿಳಿದು ಬಂದಿದ್ದು ಈ ಪ್ರಯುಕ್ತ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಓದಿರಿ: ಜಿಯೋ ಚಾಟ್ ಹಿಸ್ಟ್ರಿಯನ್ನು ಕ್ಲಿಯರ್ ಮಾಡುವುದು ಹೇಗೆ?

ಪ್ರೈವಸಿ ಪಾಲಿಸಿ ಎಂದರೇನು?

ಪ್ರೈವಸಿ ಪಾಲಿಸಿ ಎಂದರೇನು?

ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಟೆಕ್ನಾಲಜಿ ಕಂಪೆನಿಗಳು ನಿಮ್ಮ ಮಾಹಿತಿಯನ್ನು ಹೇಗೆ ಮತ್ತು ಎಲ್ಲಿ ಬಳಸಿಕೊಳ್ಳಲಿವೆ ಎಂಬುದನ್ನು ತಿಳಿಸಲಿವೆ. ನಿಮ್ಮ ಫೋನ್ ಸಂಖ್ಯೆ, ಸಂಪರ್ಕಗಳು, ನಿಮ್ಮ ಚಿತ್ರಗಳು ಇದೆಲ್ಲವನ್ನೂ ಈ ಎರಡೂ ಕಂಪೆನಿಗಳು ಹಂಚಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮಗೆ ಜಾಹೀರಾತುಗಳನ್ನು ಒದಗಿಸಲು ಮತ್ತು ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ತಿಳಿಸಲು ಇವುಗಳನ್ನು ಎಲ್ಲಿ ಮತ್ತು ಹೇಗೆ ಬಳಸಲಾಗುತ್ತದೆ ಎಂಬುದನ್ನು ನೀತಿ ತಿಳಿಸಲಿದೆ.

ವಾಟ್ಸಾಪ್ ಪ್ರೈವಸಿ ಪಾಲಿಸಿ ಏನು ಹೇಳುತ್ತದೆ?

ವಾಟ್ಸಾಪ್ ಪ್ರೈವಸಿ ಪಾಲಿಸಿ ಏನು ಹೇಳುತ್ತದೆ?

ತನ್ನ ಅಪ್ಲಿಕೇಶನ್‌ನಲ್ಲಿ ಯಾವುದೇ ಜಾಹೀರಾತನ್ನು ನೀಡದೇ ವಾಟ್ಸಾಪ್ ಈವರೆಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಆದರೆ ಫೇಸ್‌ಬುಕ್ ಕಂಪೆನಿ 2014 ರಲ್ಲಿ ಇದನ್ನು ಖರೀದಿಸಿದ ನಂತರ, ಈ ಆಗಸ್ಟ್‌ನಲ್ಲಿ ತಮ್ಮ ಪ್ರೈವಸಿ ಪಾಲಿಸಿಯಲ್ಲಿ ಮಾಡಿದ ಅಪ್‌ಡೇಟ್‌ಗಳನ್ನು ಕಂಪೆನಿ ತಿಳಿಸಿದೆ. ತಮ್ಮ ಅಪ್ಲಿಕೇಶನ್‌ನಲ್ಲಿ ಜಾಹೀರಾತುಗಳು ಮತ್ತು ಮಾರುಕಟ್ಟೆ ಆದ್ಯತೆಗಳಿಗೆ ಇವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿವೆ. ಫೇಸ್‌ಬುಕ್ ಮತ್ತು ವಾಟ್ಸಾಪ್ ಇವೆರಡೂ ಬಳಕೆದಾರ ಡೇಟಾವನ್ನು ಒಂದು ಇನ್ನೊಂದರೊಂದಿಗೆ ಹಂಚಿಕೊಳ್ಳುತ್ತವೆ.

ನನ್ನ ಫೋನ್ ಸಂಖ್ಯೆ ಫೇಸ್‌ಬುಕ್‌ಗೆ ಮತ್ತು ಸಂದೇಶ ಕಳುಹಿಸುವವರಿಗೆ ತಿಳಿಯಲಿದೆಯೇ?

ನನ್ನ ಫೋನ್ ಸಂಖ್ಯೆ ಫೇಸ್‌ಬುಕ್‌ಗೆ ಮತ್ತು ಸಂದೇಶ ಕಳುಹಿಸುವವರಿಗೆ ತಿಳಿಯಲಿದೆಯೇ?

ಹೌದು ಪಾಲಿಸಿಯಲ್ಲಿ ಮಾಡಿರುವ ಮುಖ್ಯ ಬದಲಾವಣೆ ಇದಾಗಿದೆ. ಉತ್ತಮ ಉತ್ಪನ್ನ ಸಲಹೆಗಳನ್ನು ರಚಿಸಲು ಫೇಸ್‌ಬುಕ್ ನಿಮ್ಮ ವಾಟ್ಸಾಪ್ ಡೇಟಾವನ್ನು ಬಳಸಲಿದೆ ಎಂಬುದಾಗಿ ಖುದ್ದು ವಾಟ್ಸಾಪ್ ತಿಳಿಸಿದೆ.

ಫೇಸ್‌ಬುಕ್ ಜಾಹೀರಾತು ಹೇಗೆ ಕಾರ್ಯನಿರ್ವಹಿಸುತ್ತದೆ?

ಫೇಸ್‌ಬುಕ್ ಜಾಹೀರಾತು ಹೇಗೆ ಕಾರ್ಯನಿರ್ವಹಿಸುತ್ತದೆ?

ಕೆಲವು ಫೇಸ್‌ಬುಕ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಈಗಾಗಲೇ ತಾಣದೊಂದಿಗೆ ಲಿಂಕ್ ಮಾಡಿಕೊಂಡಿದ್ದಾರೆ. ಫೇಸ್‌ಬುಕ್ ನಿಮ್ಮ ಗೌಪ್ಯ ಮಾಹಿತಿಗಳನ್ನು ಬಳಸಿಕೊಂಡರೂ ಅದಕ್ಕೆ ಸೂಕ್ತ ಚೌಕಟ್ಟನ್ನು ಒದಗಿಸಲಿದೆ ಮತ್ತು ಸೀಮಿತವಾಗಿ ಇದನ್ನು ಬಳಸಿಕೊಳ್ಳಲಿದೆ.

ನನ್ನ ವಾಟ್ಸಾಪ್ ಸಂದೇಶವನ್ನು ಫೇಸ್‌ಬುಕ್ ಕೂಡ ಓದಲಿದೆಯೇ?

ನನ್ನ ವಾಟ್ಸಾಪ್ ಸಂದೇಶವನ್ನು ಫೇಸ್‌ಬುಕ್ ಕೂಡ ಓದಲಿದೆಯೇ?

ಸಂದೇಶಗಳು ಡೆಲಿವರಿ ಆದ ನಂತರ ವಾಟ್ಸಾಪ್ ಸಂದೇಶಗಳನ್ನು ಇರಿಸಿಕೊಳ್ಳುವುದಿಲ್ಲ ಎಂಬುದಾಗಿ ತಿಳಿಸಿದೆ. ಆದರೆ ಪಾಲಿಸಿ ಹೇಳುವಂತೆ ನಿಮ್ಮ ಸಂದೇಶಗಳನ್ನು ಫೇಸ್‌ಬುಕ್ ಬಳಸುವ ಸಾಧ್ಯತೆ ಕೂಡ ಇದೆ. ಅಂತೂ ಬಳಕೆದಾರರ ಅನುಮತಿ ಇಲ್ಲದೆ ಫೇಸ್‌ಬುಕ್ ನಿಮ್ಮ ಸಂದೇಶಗಳನ್ನು ಜಾಹೀರಾತುಗಳ ಪ್ರಮೋಶನ್‌ಗೆ ಬಳಸುವ ಸಾಧ್ಯತೆ ಇಲ್ಲ ಎಂಬುದಾಗಿ ವಾಟ್ಸಾಪ್ ತಿಳಿಸಿದೆ.

Best Mobiles in India

English summary
A public interest litigation in the Delhi High Court (HC) challenges the change in WhatsApp's privacy policy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X