Home
ಮೊಬೈಲ್

ಬರಲಿದೆ - 12 ಜಿಬಿ ರ್ಯಾಮ್, 60 ಮೆಗಾಪಿಕ್ಸೆಲ್ ಕ್ಯಾಮೆರ ಹೊಂದಿರುವ ಟುರಿಂಗ್ ಸೆಡೆನ್ಜಾ ಫೋನ್.

By Ashok

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಕಂಪನಿಗಳು ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸುತ್ತಿವೆ. ಈಗ ಸುದ್ದಿ ಮಾಡುತ್ತಿರುವ ಕಂಪನಿ ಟುರಿಂಗ್ ರೋಬೋಟಿಕ್ಸ್ ಇಂಡಸ್ತ್ಟೀಸ್ (ಟಿ.ಆರ್.ಐ).

ಬರಲಿದೆ - 12 ಜಿಬಿ ರ್ಯಾಮ್, 60 ಮೆಗಾಪಿಕ್ಸೆಲ್ ಕ್ಯಾಮೆರ

ಟಿ.ಆರ್.ಐ ಬಿಡುಗಡೆಗೊಳಿಸಿರುವ ಹೊಸ ಸಾಧನದ ಹೆಸರು ಟುರಿಂಗ್ ಫೋನ್ ಸಿಡಾನ್ಜಾ. ಈ ಸ್ಮಾರ್ಟ್ ಫೋನ್ 2017ರಲ್ಲಿ ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಇದರ ಗುಣವೈಶಿಷ್ಟ್ತತೆಗಳು ನಂಬಲಸಾಧ್ಯವೆನ್ನುವಂತಿದೆ. ಈ ಸಾಧನದಲ್ಲಿ ಸ್ವೋರ್ಡ್ ಫಿಶ್ ಒ.ಎಸ್ ಇರಲಿದೆ ಮತ್ತೀ ಸಾಧನ ಸ್ವಯಂ ಕಲಿಯುವ ಗುಣ ಹೊಂದಿದೆ ಎಂದು ಕಂಪನಿ ಹೇಳಿಕೊಳ್ಳುತ್ತಿದೆ.

ಓದಿರಿ: ರಿಲಾಯನ್ಸ್ ಜಿಯೋ ವೇಗವನ್ನು ವರ್ಧಿಸಿಕೊಳ್ಳುವುದು ಹೇಗೆ?

ನಂಬಲಸಾಧ್ಯ ಮತ್ತು ಅವಾಸ್ತವದಂತೆ ತೋರುವ ಗುಣವೈಶಿಷ್ಟ್ಯತೆಗಳನ್ನು ಟಿ.ಆರ್.ಐ ಪಟ್ಟಿ ಮಾಡಿದೆ. ಈಗಿರುವ ಮಾರುಕಟ್ಟೆಯನ್ನು ಟುರಿಂಗ್ ಫೋನ್ ಮುರಿದು ಹಾಕಲಿದೆ ಎಂದು ಕಂಪನಿ ಹೇಳುತ್ತದೆ. ಬಹಳಷ್ಟು ತಡ ಮಾಡಿದ ನಂತರ, ಟುರಿಂಗ್ ಫೋನ್ ವಿಚಿತ್ರ ಪಟ್ಟಿಯೊಂದಿಗೆ ಹೊರಬಂದಿದೆ.

ಫೋನ್ ಹೇಗಿರುತ್ತದೆ ಎಂದು ಕೆಳಗಿನ ಸ್ಲೈಡರುಗಳಲ್ಲಿ ನೋಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡು ಎಸ್.ಡಿ.830 ಪ್ರೊಸೆಸರ್.

ಎರಡು ಎಸ್.ಡಿ.830 ಪ್ರೊಸೆಸರ್.

ಟುರಿಂಗ್ ಫೋನ್ ಸೆಡೆನ್ಜಾದಲ್ಲಿ ಎರಡು ಸ್ನಾಪ್ ಡ್ರಾಗನ್ 830 ಪ್ರೊಸೆಸರ್ ಗಳು ಇರಲಿವೆ. ಸ್ಮಾರ್ಟ್ ಫೋನಿಗೆ ನಿಜಕ್ಕೂ ಎರಡು ಪ್ರೊಸೆಸರ್ ಗಳು ಬೇಕಾ? ಎಂಬ ಪ್ರಶ್ನೆಗಿನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

12ಜಿಬಿ ರ್ಯಾಮ್.

12ಜಿಬಿ ರ್ಯಾಮ್.

6ಜಿಬಿ ರ್ಯಾಮ್ ಫೋನುಗಳು ಈಗಾಗಲೇ ಸದ್ದು ಮಾಡುತ್ತಿವೆ, ಅಷ್ಟು ದೊಡ್ಡ ರ್ಯಾಮ್ ನಿಂದಾಗುವ ಉಪಯೋಗಗಳನ್ನು ನಾವಿನ್ನೂ ನೋಡಬೇಕಿದೆ. 8ಜಿಬಿ ರ್ಯಾಮ್ ಅನ್ನು ಸ್ಮಾರ್ಟ್ ಫೋನಿನಲ್ಲಿ ಇನ್ನೂ ಉಪಯೋಗಿಸಲಾಗಿಲ್ಲ. ಹಾಗಾಗ್ಯೂ, ಟಿ.ಆರ್.ಐ ಪ್ರಕಾರ ಅವರ ಫೋನಿನಲ್ಲಿ 12 ಜಿಬಿ ರ್ಯಾಮ್ ಇರಲಿದೆ. ಜೊತೆಗೆ 1ಟಿಬಿವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು.

ಚೆಂದದ ಪರದೆ ಇರುವಂತಿದೆ.

ಚೆಂದದ ಪರದೆ ಇರುವಂತಿದೆ.

ಟುರಿಂಗ್ ಫೋನ್ ಸೆಡೆನ್ಜಾದಲ್ಲಿ 5.8 ಇಂಚಿನ 2560 x 1440 ಪಿಕ್ಸೆಲ್ಸಿನ ಪರದೆಯಿರಲಿದೆ. ಇಂತಹ ಪರದೆಗಳನ್ನು ನಾವೀಗಾಗಲೇ ನೋಡಿದ್ದೇವೆ.

20 ಮೆಗಾಪಿಕ್ಸೆಲ್ಲಿನ ಎರಡು ಮುಂಬದಿಯ ಕ್ಯಾಮೆರ.

20 ಮೆಗಾಪಿಕ್ಸೆಲ್ಲಿನ ಎರಡು ಮುಂಬದಿಯ ಕ್ಯಾಮೆರ.

ಕಂಪನಿಯ ಪ್ರಕಾರ, ಸೆಡೆನ್ಜಾದ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್ಲಿನ ಎರಡು ಕ್ಯಾಮೆರ ಇರಲಿದೆ. ಹಿಂಬದಿಯಲ್ಲಿ ಟ್ರಿಪ್ಲೆಟ್ ಲೆನ್ಸ್ ಇರುವ, ಐಮ್ಯಾಕ್ಸ್ 6ಕೆ ಕ್ವಾಡ್ ಸೌಕರ್ಯವಿರುವ 60 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಇದೆ. ಸ್ಮಾರ್ಟ್ ಫೋನಿನಲ್ಲಿ ಇಂತಹ ಕ್ಯಾಮೆರ? 60ಮೆಗಾಪಿಕ್ಸೆಲ್ಲಿನ ಫೋಟೋ ಅಥವಾ 6ಕೆ ವೀಡಿಯೋ ಬಹಳಷ್ಟು ಮೆಮೊರಿಯನ್ನು ಬೇಡುತ್ತದೆ, ಕಂಪನಿಯ ಪ್ರಕಾರ ಅಷ್ಟು ಮೆಮೊರಿ ಫೋನಿನಲ್ಲಿ ಇದ್ದೇ ಇರುತ್ತದೆ.

ನಾಲ್ಕು ನ್ಯಾನೋ ಸಿಮ್!

ನಾಲ್ಕು ನ್ಯಾನೋ ಸಿಮ್!

ವಿವಿಧ ಕಾರಣಗಳಿಗಾಗಿ ಎರಡು ಸಿಮ್ ಉಪಯೋಗಿಸುವುದು ಈಗ ಸರ್ವೇ ಸಾಮಾನ್ಯ. ಮತ್ತಷ್ಟು ಅನುಕೂಲಕ್ಕಾಗಿ, ಟುರಿಂಗ್ ಫೋನ್ ಸೆಡೆನ್ಜಾ ನಾಲ್ಕು ನ್ಯಾನೋ ಸಿಮ್ ಕಾರ್ಡ್ ಹಾಕುವ ಸೌಲಭ್ಯವನ್ನು ಕೊಡಲಿದೆ.

ದೊಡ್ಡ ಬ್ಯಾಟರಿ ಅತ್ಯವಶ್ಯಕ.

ದೊಡ್ಡ ಬ್ಯಾಟರಿ ಅತ್ಯವಶ್ಯಕ.

ಇಷ್ಟೊಂದು ಗುಣ ವೈಶಿಷ್ಟ್ಯಗಳಿರುವ ಫೋನಿನ ದೊಡ್ಡ ಬ್ಯಾಟರಿ ಅತ್ಯವಶ್ಯಕ. ಸೆಡೆನ್ಜಾದಲ್ಲಿ ಗ್ರಾಫೀನ್ ಸೂಪರ್ ಕಂಡಕ್ಟರ್ ಇರುವ 100Wh ಬ್ಯಾಟರಿ, ಲಿಥಿಯಂ ಐಯಾನ್ ಬ್ಯಾಟರಿ ಹಾಗೂ ಒಂದು ಹೈಡ್ರೊಜೆನ್ ಫುಯಲ್ ಸೆಲ್ ಇರಲಿದೆ.

ಕಲಿಯುವ ಸಾಮರ್ಥ್ಯ.

ಕಲಿಯುವ ಸಾಮರ್ಥ್ಯ.

ಸೆಡೆನ್ಜಾದಲ್ಲಿ ಸ್ವೋರ್ಡ್ ಫಿಶ್ ಒ.ಎಸ್ ಇರಲಿದೆ; ಇನ್ನೂ ಘೋಷಣೆಯಾಗಿರದ ಈ ಒ.ಎಸ್ ಸೈಲ್ ಫಿಶ್ ಮೇಲೆ ಆಧಾರಿತವಾಗಿದೆ. ಕಲಿಕೆ, ನ್ಯೂರಲ್ ನೆಟ್ ವರ್ಕ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಹಾಗೂ ಡಿಫರೆನ್ಶಿಯಲ್ ಪ್ರೈವೆಸಿ ಇದರಲ್ಲಿದೆ.

Best Mobiles in India

English summary
Turning Phone Cadenza is claimed to be released in 2017 and the smartphone has unrealistic specs like two Snapdragon 830 processors, 12 GB RAM and dual 20 MP front facing camera. Read more..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+