ರಿಲಾಯನ್ಸ್ ಜಿಯೋ ವೇಗವನ್ನು ವರ್ಧಿಸಿಕೊಳ್ಳುವುದು ಹೇಗೆ?

By Shwetha
|

ನಿಸ್ಸಂದೇಹವಾಗಿ ರಿಲಾಯನ್ಸ್ ಜಿಯೋ ಪ್ರಸ್ತುತ ಲಭ್ಯವಿರುವ ಉತ್ತಮ ನೆಟ್‌ವರ್ಕ್‌ನಲ್ಲಿ ಜಿಯೋ ಅತ್ಯುತ್ತಮ ಎಂದೆನಿಸಿದ್ದು ರಿಲಾಯನ್ಸ್ ಜಿಯೋ, ವೊಡಾಫೋನ್ 4ಜಿ ಮತ್ತು ಏರ್‌ಟೆಲ್ 4ಜಿ ಯ ಸ್ಪೀಡ್ ಟೆಸ್ಟ್ ಹೋಲಿಕೆಯಲ್ಲಿ ಜಿಯೋ ಉತ್ತಮ ಎಂಬುದಾಗಿ ಖಾತ್ರಿಗೊಂಡಿದೆ. ವಾಣಿಜ್ಯ ರೂಪದಲ್ಲಿ ಜಿಯೋ ಸೇವೆಯನ್ನು ಸಪ್ಟೆಂಬರ್ 5 ರಂದು ಲಾಂಚ್ ಮಾಡಲಾಗುತ್ತದೆ. ಪ್ರಿವ್ಯೂ ಆಫರ್ ಬಳಕೆದಾರರು ಜಿಯೋ ಸೇವೆಯನ್ನು ಇನ್ನೂ ಆನಂದಿಸುತ್ತಿದ್ದಾರೆ. ಅದರಲ್ಲೂ ಕೆಲವು ಬಳಕೆದಾರರು ವೇಗದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬುದಕ್ಕೆ ಸಲಹೆಗಳೊಂದಿಗೆ ನಾವು ಬಂದಿದ್ದು ಇಂದಿನ ಲೇಖನದಲ್ಲಿ ಇದನ್ನು ಅರಿತುಕೊಳ್ಳಬಹುದಾಗಿದೆ.

ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್ ಬಳಸಿ 2ಜಿ/3ಜಿ ಫೋನ್‌ನಿಂದ ಕರೆ ಹೇಗೆ?

ಪ್ರಿವ್ಯೂ ಆಫರ್‌ನಲ್ಲಿರುವ ಎಲ್‌ಟಿಇ ನೆಟ್‌ವರ್ಕ್ ಅನ್ನು ಎಲ್‌ಟಿಇ ಬ್ಯಾಂಡ್ 3 ಗೆ ಲಾಕ್ ಮಾಡುವ ಮೂಲಕ ಕಂಪೆನಿ ವೇಗವನ್ನು ಕಡಿಮೆಗೊಳಿಸುತ್ತಿದೆ. ಅಂತೆಯೇ ಈ ಬ್ಯಾಂಡ್ ಕಡಿಮೆ ವೇಗವನ್ನು ನೀಡುತ್ತದೆ. ನೀವು ಕಡಿಮೆ ವೇಗದ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದಲ್ಲಿ, ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ವೇಗವನ್ನು ವರ್ಧಿಸಿಕೊಳ್ಳಬಹುದಾಗಿದೆ.

ಎಲ್‌ಟಿಇ ಬ್ಯಾಂಡ್ ಎಂದರೇನು?

ಎಲ್‌ಟಿಇ ಬ್ಯಾಂಡ್ ಎಂದರೇನು?

ಬೇರೆ ಬೇರೆ ಆವರ್ತನ ಬ್ಯಾಂಡ್‌ಗಳಲ್ಲಿ ಎಲ್‌ಟಿಇ ನೆಟ್‌ವರ್ಕ್ಸ್ ಕಾರ್ಯನಿರ್ವಹಿಸುತ್ತದೆ. ಬ್ಯಾಂಡ್ 17, 700MHZ ಆವರ್ತನೆಯದ್ದಾಗಿದೆ, ಬ್ಯಾಂಡ್ 20, 800MHZ ಫ್ರಿಕ್ವೆನ್ಸಿ, ಬ್ಯಾಂಡ್ 5, 850 MHZ ಮತ್ತು ಬ್ಯಾಂಡ್ 3 ಯು 1,800 MHZ ನದ್ದಾಗಿದೆ. ಬ್ಯಾಂಡ್ 40 ಯು 2300 MHZ ಫ್ರಿಕ್ವೆನ್ಸಿ ಬ್ಯಾಂಡ್ ಆಗಿದೆ. 4ಜಿ ಸೇವೆಯನ್ನು ಭಾರತದಲ್ಲಿ ಒದಗಿಸುತ್ತಿರುವ ಪ್ರತಿಯೊಬ್ಬ ಆಪರೇಟರ್ ಕೂಡ ಕೆಲವೊಂದು ಬೆಂಬಲಿತ ಬ್ಯಾಂಡ್‌ಗಳ ಆಧಾರದಲ್ಲಿ ಸೇವೆಯನ್ನು ಒದಗಿಸುತ್ತಾರೆ. ಏರ್‌ಟೆಲ್ ಬ್ಯಾಂಡ್ 4೦ ಅನ್ನು ಒದಗಿಸಿದರೆ, ವೊಡಾಫೋನ್ ಬ್ಯಾಂಡ್ 3 ಯನ್ನು ಬೆಂಬಲಿಸುತ್ತದೆ. ಅದಾಗ್ಯೂ ರಿಲಾಯನ್ಸ್ ಜಿಯೋ ಬ್ಯಾಂಡ್ 3, 5 ಮತ್ತು 40 ಅನ್ನು ಬೆಂಬಲಿಸುತ್ತದೆ.

ಬ್ಯಾಂಡ್ 40 ಯಿಂದ ಉತ್ತಮ ವೇಗ

ಬ್ಯಾಂಡ್ 40 ಯಿಂದ ಉತ್ತಮ ವೇಗ

ಬ್ಯಾಂಡ್ 40 ಯು ಉತ್ತಮ ವೇಗವನ್ನು ನೀಡುತ್ತದೆ ಅಂತೆಯೇ ಬ್ಯಾಂಡ್ 3 ಮತ್ತು ಬ್ಯಾಂಡ್ 5 ಉತ್ತಮ ಕವರೇಜ್ ಅನ್ನು ಒದಗಿಸುತ್ತದೆ. ರಿಲಾಯನ್ಸ್ ಜಿಯೋದ ಈ ಅನುಷ್ಟಾನವು ಸೇವೆಯ ವಾಣಿಜ್ಯ ಸ್ಥಾಪನೆಯವರೆಗೆ ಮಾತ್ರ ಇರುತ್ತದೆ.

ಬ್ಯಾಂಡ್ 40 ಗೆ ಬದಲಾಯಿಸುವುದು ವೇಗವನ್ನು ವರ್ಧಿಸುತ್ತದೆ

ಬ್ಯಾಂಡ್ 40 ಗೆ ಬದಲಾಯಿಸುವುದು ವೇಗವನ್ನು ವರ್ಧಿಸುತ್ತದೆ

ಬ್ಯಾಂಡ್ 40 ಯು ನಿಮಗೆ ನೆಟ್‌ವರ್ಕ್ ಗುಣಮಟ್ಟ ಮತ್ತು ಸಿಗ್ನಲ್ ಬಲವನ್ನು ಆಧರಿಸಿ 50 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗವನ್ನು ನೀಡುತ್ತದೆ. ಅಂತೆಯೇ, ಬ್ಯಾಂಡ್ 40 ಗೆ ಬದಲಾಯಿಸುವುದು ನಿಮ್ಮ ಸಂಪರ್ಕಕ್ಕೆ ಉತ್ತಮ ವೇಗವನ್ನು ಒದಗಿಸುತ್ತದೆ.

ಕ್ವಾಲ್‌ಕಾಮ್ ಡಿವೈಸ್ ಬಳಕೆದಾರರಿಗೆ ಎಲ್‌ಟಿಇ ಬ್ಯಾಂಡ್ ಬದಲಾಯಿಸಲು ಹಂತಗಳು

ಕ್ವಾಲ್‌ಕಾಮ್ ಡಿವೈಸ್ ಬಳಕೆದಾರರಿಗೆ ಎಲ್‌ಟಿಇ ಬ್ಯಾಂಡ್ ಬದಲಾಯಿಸಲು ಹಂತಗಳು

ನಿಮ್ಮ ಫೋನ್ ಕ್ವಾಲ್‌ಕಾಮ್ ಚಿಪ್‌ಸೆಟ್ ಅನ್ನು ಬಳಸುತ್ತಿದೆ ಎಂದಾದಲ್ಲಿ, ಪ್ಲೇ ಸ್ಟೋರ್‌ನಿಂದ ಶಾರ್ಟ್‌ಕಟ್ ಮಾಸ್ಟರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್‌ನಲ್ಲಿ ಮೆನುವನ್ನು ತೆರೆಯಿರಿ ಮತ್ತು "ಸೀಕ್ರೇಟ್ ಕೋಡ್ ಎಕ್ಸ್‌ಪ್ಲೋರರ್" ಅನ್ನು ಆರಿಸಿ. ನಿಮ್ಮ ಫೋನ್ ಬೆಂಬಲಿಸುವ ಸೀಕ್ರೇಟ್ ಕೋಡ್‌ಗಳನ್ನು ಪಡೆದುಕೊಳ್ಳಲು ಇದಕ್ಕೆ ಸ್ವಲ್ಪ ಸಮಯ ಬೇಕು. ಕೋಡ್‌ಗಳ ಪಟ್ಟಿಯಿಂದ, ಫೋನ್‌ ಮಾಡೆಲ್‌ಗಾಗಿ ಬ್ಯಾಂಡ್ ಸಿಲೆಕ್ಶನ್ ಸೀಕ್ರೇಟ್ ಕೋಡ್ ಅನ್ನು ನೀವು ಆರಿಸಬೇಕಾಗುತ್ತದೆ ಮತ್ತು ಲಾಂಚ್ 0 ವನ್ನು ಒತ್ತಿರಿ. ಸರ್ವೀಸ್ ಮೋಡ್ ಸ್ಕ್ರೀನ್‌ನಿಂದ ಬ್ಯಾಂಡ್ ಸಿಲೆಕ್ಶನ್ ಅನ್ನು ಆಯ್ಕೆಮಾಡಿ ಮತ್ತು ಎಲ್‌ಟಿಇ ಆರಿಸಿ. ತದನಂತರ ಆಪ್ಶನ್ ಎಲ್‌ಟಿಇ_೪40 ಅನ್ನು ಎಲ್‌ಟಿಇ_3 ಬದಲಿಗೆ ಆಯ್ಕೆಮಾಡಿ. ಡೌನ್‌ಲೋಡ್ ವೇಗದಲ್ಲಿ ಹೆಚ್ಚಳವನ್ನು ಕಂಡುಕೊಳ್ಳಲು ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡಿ.

ಮೀಡಿಯಾಟೆಕ್ ಚಿಪ್‌ಸೆಟ್ ಬಳಕೆದಾರರಿಗೆ ಈ ಹಂತಗಳು

ಮೀಡಿಯಾಟೆಕ್ ಚಿಪ್‌ಸೆಟ್ ಬಳಕೆದಾರರಿಗೆ ಈ ಹಂತಗಳು

ಮೀಡಿಯಾಟೆಕ್ ಚಿಪ್‌ಸೆಟ್ ಇರುವ ಫೋನ್ ಅನ್ನು ಬಳಸುತ್ತಿರುವ ಬಳಕೆದಾರರು ಪ್ಲೇ ಸ್ಟೋರ್‌ನಿಂದ MTK ಇಂಜಿನಿಯರಿಂಗ್ ಮೋಡ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು MTK ಸೆಟ್ಟಿಂಗ್ಸ್ > ಬ್ಯಾಂಡ್ ಮೋಡ್ > LTE ಮೋಡ್ ಅನ್ನು ಆರಿಸಿ. ಇಲ್ಲಿ ನೀವು ಬ್ಯಾಂಡ್ 40 ಅನ್ನು ಆರಿಸಬೇಕು.

Best Mobiles in India

English summary
If you are facing slow connection speed on your Jio network, you can increase the speed drastically by following a few steps given here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X