Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸದ್ಯದಲ್ಲೇ ಶಿಯೋಮಿ ಲಾಂಚ್ ಮಾಡಲಿದೆ ಎರಡು ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್!
ಚೀನಾ ಮೂಲದ ಶಿಯೋಮಿ ಮೊಬೈಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದ್ದು, ಇತ್ತೀಚಿಗಷ್ಟೆ 'ರೆಡ್ಮಿ ನೋಟ್ 7 ಪ್ರೊ' ಮೂಲಕ ಭಾರಿ ಸುದ್ದಿ ಮಾಡಿತ್ತು. ಇದೀಗ ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಅಬ್ಬರಿಸುವ ಸೂಚನೆಗಳನ್ನು ಹೊರಹಾಕಿದ್ದು, ಕಂಪನಿಯು ಶೀಘ್ರದಲ್ಲೇ ಫ್ಲ್ಯಾಗ್‌ಶಿಫ್ ಮಾದರಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಹೌದು, ಶಿಯೋಮಿ ಕಂಪನಿಯು ಈ ತಿಂಗಳ ಅಂತ್ಯದೊಳಗೆ ಎರಡು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು ನಾಲ್ಕು ವೇರಿಯಂಟ್ ಆಯ್ಕೆಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ. ಅವುಗಳಲ್ಲಿ ಹೈ ಎಂಡ್ ವೇರಿಯಂಟ್ ಸ್ಮಾರ್ಟ್‌ಫೋನ್ 8 GB RAM + 256 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಈ ಎರಡು ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತ್ಯೇಕ ಪ್ರೊಸೆಸರ್ ಇರಲಿದ್ದು, ಅವು ಕ್ರಮವಾಗಿ ಸ್ನ್ಯಾಪ್‌ಡ್ರಾಗನ್ 855 SoC ಮತ್ತು 730 SoC ಸಾಮರ್ಥ್ಯವನ್ನು ಹೊಂದಿರಲಿವೆ. ಹಾಗೇ ತ್ರಿವಳಿ ಕ್ಯಾಮೆರಾಗಳನ್ನು ಒಳಗೊಂಡಿರಲಿದ್ದು, ಸೋನಿ IMX586 ಸೆನ್ಸಾರ್ ಇರಲಿದೆ ಎನ್ನಲಾಗಿದೆ. ಹಾಗಾದರೇ ಶಿಯೋಮಿಯ ಮುಂಬರುವ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪೊಕೊ 2 ಅಥವಾ ರೆಡ್ಮಿ ಕೆ20
ಶಿಯೋಮಿ ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಹೆಸರನ್ನು ಲೀಕ್ ಮಾಡದೇ ಗ್ರಾಹಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಆದರೆ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಪೊಕೊ 2 ಅಥವಾ ರೆಡ್ಮಿ ಕೆ20 ಹೆಸರುಗಳು ಅಂತಿಮವಾಗಬಹುದು ಎಂದು ಹೇಳಲಾಗುತ್ತಿದೆ.

ಡಿಸ್‌ಪ್ಲೇ
ಕಂಪನಿಯ ಎರಡು ಸ್ಮಾರ್ಟ್‌ಪೋನ್‌ಗಳಲ್ಲಿ ಸ್ನ್ಯಾಪ್‌ಡ್ರಾಗನ್ 855 SoC ಸ್ಮಾರ್ಟ್‌ಫೋನ್ 6.39 ಇಂಚಿನ ಫುಲ್ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ನಾಚ್‌ಲೆಸ್ ರಚನೆಯನ್ನು ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೇ ಡಿಸ್‌ಪ್ಲೇ ರೆಸಲ್ಯೂಶನ್ ಹೆಚ್‌ಡಿ ಗುಣಮಟ್ಟದಲ್ಲಿರಲಿದ್ದು, ಸ್ಕ್ರೀನ್ ಫಿಂಗರ್‌ಪ್ರಿಂಟ್ ರೀಡರ್ ಸಹ ಇರಲಿದೆ ಎಂದು ತಿಳಿದುಬಂದಿದೆ.

ಪ್ರೊಸೆಸರ್
ಶಿಯೋಮಿಯು ಬಿಡುಗಡೆ ಮಾಡುತ್ತಿರುವ ಎರಡು ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಪೋನ್‌ಗಳಲ್ಲಿ ಒಂದು ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಮತ್ತು ಇನ್ನೊಂದು ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 730 SoC ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಫೋನ್‌ಗಳ ಕಾರ್ಯವೈಖರಿ ವೇಗವಾಗಿರಲಿದೆ.

ಮೆಮೊರಿ
ಶಿಯೋಮಿಯ ಎರಡು ಸ್ಮಾರ್ಟ್‌ಪೋನ್‌ಗಳು ನಾಲ್ಕು ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ. ಅವುಗಳು ಕ್ರಮವಾಗಿ 6 GB RAM + 64 GB, 6 GB RAM + 128 GB ಸ್ಟೋರೇಜ್, 8 GB RAM + 128 GB ಸ್ಟೋರೇಜ್ ಮತ್ತು 8 GB RAM + 256 GB ಸ್ಟೋರೇಜ್ ಆಗಿರಲಿವೆ.

ಪಾಪ್‌ಅಪ್ ಸೆಲ್ಫಿ
ಮೊಬೈಲ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ಶಿಯೋಮಿ ಇದೆ ಮೊದಲ ಬಾರಿಗೆ ಪರಿಚಯಿಸಲು ಮುಂದಾಗಿದೆ. ತನ್ನ ಮುಂಬರುವ ಎರಡು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ 20 ಮೆಗಾಪಿಕ್ಸಲ್ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.

ಕ್ಯಾಮೆರಾ
ಕಂಪನಿಯ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರಲಿವೆ. ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದ್ದು, ಸೋನಿಯ IMX586 ಸೆನ್ಸಾರ್ ಒಳಗೊಂಡಿರಲಿವೆ. ಕಂಪನಿಯು ಮೊದಲ ಬಾರಿಗೆ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಪರಿಚಯಿಸಲಿದ್ದು, ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬ್ಯಾಟರಿ
ಬಿಡುಗಡೆ ಆಗಲಿರುವ ಎರಡು ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು 4,000mAh ಸಾಮರ್ಥ್ಯ ಬ್ಯಾಟರಿ ಶಕ್ತಿಯನ್ನು ಒಳಗೊಂಡಿರಲಿದ್ದು, ಸುಮಾರು ಎರಡು ದಿನ ಸ್ಮಾರ್ಟ್‌ಫೋನ್‌ಗೆ ಬಾಳಿಕೆ ಒದಗಿಸಲಿವೆ. ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ಸಾಧ್ಯತೆಗಳಿದ್ದು, ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳಲಿದೆ.

ಕಲರ್ಸ್ ಮತ್ತು ಲಭ್ಯತೆ
ಶಿಯೋಮಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಮೂರು ಬಣ್ಣಗಳ ಆಯ್ಕೆಗಳನ್ನು ಹೊಂದಿರಲಿದ್ದು, ಕ್ರಮವಾಗಿ ಕಾರ್ಬನ್ ಫೈಬರ್, ರೆಡ್ ಮತ್ತು ಬ್ಲೂ ಬಣ್ಣಗಳಲ್ಲಿ ದೊರೆಯಲಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಇದೇ ಮೇ 14ರಂದು ಬಿಡುಗಡೆ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470