Home
ಮೊಬೈಲ್

ದಿನವಿಡೀ ಫೋನ್ ಚಾರ್ಜ್ ಮಾಡಿ ನಿಶ್ಚಿಂತೆಯಿಂದಿರಿ

By Shwetha

ಸ್ಮಾರ್ಟ್‌ಫೋನ್‌ ವಿಚಾರದಲ್ಲಿ ನಿಮ್ಮನ್ನು ಹೆಚ್ಚು ಸಂಕಷ್ಟಕ್ಕೆ ಒಳಪಡಿಸುವುದು ಅದರ ಬ್ಯಾಟರಿ ಇಳಿಮುಖವಾಗುವುದು. ನಿಮ್ಮ ಫೋನ್‌ಗೆ ನೀವೆಷ್ಟು ಚಾರ್ಜ್ ಮಾಡಿದರೂ ಫೋನ್‌ನ ಬ್ಯಾಟರಿ ಕೆಲವೇ ಗಂಟೆಗಳಲ್ಲಿ ಇಳಿಕೆಯಾಗುತ್ತದೆ. ಪ್ರತಿಯೊಂದು ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚಾರ್ಜಿಂಗ್ ಸಮಸ್ಯೆ ಹೆಚ್ಚು ಗಂಭೀರವಾದುದು. ಜೊತೆಯಾಗಿ ಚಾರ್ಜಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ ಕೆಲವೊಂದು ಮಿಥ್ಯಗಳು ಇದ್ದು ಈ ಅಂಶಗಳನ್ನು ನಾವು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿರುವೆವು.

ಓದಿರಿ: ಹುರ್ರೇ! ಟಾಪ್ ಅಪ್ಲಿಕೇಶನ್‌ಗಳಿಂದ ಉಚಿತ ರೀಚಾರ್ಜ್

ನಿಮ್ಮ ಫೋನ್‌ಗೆ ರಾತ್ರಿ ಪೂರ್ತಿ ಚಾರ್ಜ್ ಮಾಡಿ

ನಿಮ್ಮ ಫೋನ್‌ಗೆ ರಾತ್ರಿ ಪೂರ್ತಿ ಚಾರ್ಜ್ ಮಾಡಿ

ನಿಮ್ಮ ಫೋನ್ ಅನ್ನು ರಾತ್ರಿ ಪೂರ್ತಿ ಚಾರ್ಜರ್ ಸಂಪರ್ಕದಲ್ಲಿಟ್ಟರೆ ಏನೂ ಸಂಭವಿಸುವುದಿಲ್ಲ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವಾಗಿದೆ. ಅಂದರೆ ರಾತ್ರಿ ಪೂರ್ತಿ ಫೋನ್ ಯಾ ಲ್ಯಾಪ್‌ಟಾಪ್ ಅನ್ನು ಚಾರ್ಜ್‌ನಲ್ಲಿಟ್ಟುಕೊಂಡೇ ನಿಮಗೆ ಆರಾಮ ನಿದ್ದೆ ಮಾಡಬಹುದು.

ಸ್ವಲ್ಪ ಚಾರ್ಜ್ ಮಾಡಿ

ಸ್ವಲ್ಪ ಚಾರ್ಜ್ ಮಾಡಿ

ಲಿಥಿಯಮ್ ಬ್ಯಾಟರಿಗಳನ್ನು ನೀವು ಆಗಾಗ್ಗೆ ಚಾರ್ಜ್ ಮಾಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಏನೂ ಮಾರಕವಿಲ್ಲ.

ಲ್ಯಾಪ್‌ಟಾಪ್‌ ಅನ್ನು ದಿನಪೂರ್ತಿ ಪ್ಲಗಿನ್ ಮಾಡಿ

ಲ್ಯಾಪ್‌ಟಾಪ್‌ ಅನ್ನು ದಿನಪೂರ್ತಿ ಪ್ಲಗಿನ್ ಮಾಡಿ

ನಿಮ್ಮ ಲ್ಯಾಪ್‌ಟಾಪ್‌ಗೆ ದಿನಪೂರ್ತಿ ನೀವು ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಚಿಂತಿಸದಿರಿ. ಈ ನೀತಿ ನಿಮ್ಮ ಫೋನ್‌ಗಳಿಗೂ ಅನ್ವಯಿಸುತ್ತದೆ ಎಂಬುದು ನೆನಪಿರಲಿ.

ಡಿವೈಸ್‌ಗಳು ಬಿಸಿಯಾಗಂತೆ ನೋಡಿಕೊಳ್ಳಿ

ಡಿವೈಸ್‌ಗಳು ಬಿಸಿಯಾಗಂತೆ ನೋಡಿಕೊಳ್ಳಿ

ಇನ್ನು ನಿಮ್ಮ ಫೋನ್ ಲ್ಯಾಪ್‌ಟಾಪ್ ಇಲ್ಲವೇ ಟ್ಯಾಬ್ಲೆಟ್‌ನಲ್ಲಿ ಚಾರ್ಜಿಂಗ್ ಸಮಸ್ಯೆ ಕಂಡುಬಂದಿದೆ ಎಂದಾದಲ್ಲಿ ಅದು ಹೆಚ್ಚು ಚಾರ್ಜ್ ಮಾಡುವುದರಿಂದ ಅಲ್ಲ ಬದಲಿಗೆ ಡಿವೈಸ್ ಬಿಸಿಯಾಗುವುದರಿಂದ ಆಗಿದೆ. ನಿಮ್ಮ ಬ್ಯಾಟರಿ ತೀವ್ರ ಮಟ್ಟದಲ್ಲಿ ಬಿಸಿಯಾಗುತ್ತಿದೆ ಎಂದಾದಲ್ಲಿ ಬ್ಯಾಟರಿ ಬದಲಾಯಿಸಿ.

ಬ್ಯಾಟರಿಯನ್ನು ತಂಪಾಗಿರಿಸಿಕೊಳ್ಳಿ

ಬ್ಯಾಟರಿಯನ್ನು ತಂಪಾಗಿರಿಸಿಕೊಳ್ಳಿ

ಆದಷ್ಟು ನಿಮ್ಮ ಡಿವೈಸ್‌ಗಳನ್ನು ಶೀತಲ ಸ್ಥಳದಲ್ಲಿ ಅಂದರೆ ಹೆಚ್ಚು ಬಿಸಿ ಇಲ್ಲದ ಸ್ಥಳದಲ್ಲಿ ಇರಿಸಿ. ವೈರ್‌ಲೆಸ್ ಚಾರ್ಜಿಂಗ್ ಆದಷ್ಟು ಮಾಡದಿರಿ.

ಸ್ವಲ್ಪ ಚಾರ್ಜ್‌ ಇರಿಸಿಕೊಂಡು ಬ್ಯಾಟರಿ ಸ್ಟೋರ್ ಮಾಡಿ

ಸ್ವಲ್ಪ ಚಾರ್ಜ್‌ ಇರಿಸಿಕೊಂಡು ಬ್ಯಾಟರಿ ಸ್ಟೋರ್ ಮಾಡಿ

ನೀವು ಬ್ಯಾಟರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೀರಿ ಎಂದಾದಲ್ಲಿ, ಮೊದಲಿಗೆ ಸ್ವಲ್ಪ ಚಾರ್ಜ್ ಮಾಡಿಕೊಳ್ಳಿ.

ಆವಶ್ಯವಿದ್ದಲ್ಲಿ ಮಾತ್ರ ಬದಲಿ ಬ್ಯಾಟರಿ ವ್ಯವಸ್ಥೆ

ಆವಶ್ಯವಿದ್ದಲ್ಲಿ ಮಾತ್ರ ಬದಲಿ ಬ್ಯಾಟರಿ ವ್ಯವಸ್ಥೆ

ತೀರಾ ಆವಶ್ಯಕತೆ ಇದ್ದಾಗ ಮಾತ್ರವೇ ಬ್ಯಾಟರಿಯನ್ನು ಸ್ಥಾನಾಂತರಿಸಿ. ನಿಮ್ಮ ಡಿವೈಸ್ ವೇಗವಾಗಿ ಚಾರ್ಜ್ ಮಾಡುತ್ತಿಲ್ಲ ಎಂದಾದಲ್ಲಿ ಬದಲಿ ಬ್ಯಾಟರಿ ವ್ಯವಸ್ಥೆಯನ್ನು ಮಾಡಿಕೊಳ್ಳಿ.

ಬ್ಯಾಟರಿ ನಿಮ್ಮ ಜೀವನವನ್ನು ಆಳದಿರಲಿ

ಬ್ಯಾಟರಿ ನಿಮ್ಮ ಜೀವನವನ್ನು ಆಳದಿರಲಿ

ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಫೋನ್ ಚಾರ್ಜಿಂಗ್ ಅನ್ನೇ ನುಂಗುತ್ತಿರುತ್ತದೆ ಎಂಬುದು ನೆನಪಿರಲಿ. ಆದ್ದರಿಂದ ಆಗಾಗ್ಗೆ ಫೋನ್‌ಗೆ ಚಾರ್ಜ್ ಮಾಡುವುದೇ ಮುಖ್ಯ ಜೀವಾಳ ಎಂದು ಭಾವಿಸದಿರಿ.

Best Mobiles in India

English summary
This article tells about Unusual Tips To Keep Your Phone's Battery Healthy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+