ಹುರ್ರೇ! ಟಾಪ್ ಅಪ್ಲಿಕೇಶನ್‌ಗಳಿಂದ ಉಚಿತ ರೀಚಾರ್ಜ್

By Shwetha
|

ಸ್ಮಾರ್ಟ್‌ಫೋನ್ ಇದ್ದಾಗ ಅದನ್ನು ಬಳಸಿ ನಾವು ಮಾಡುವ ಕೆಲಸಗಳು ಅಧಿಕವಾಗಿರುತ್ತವೆ. ಕರೆ ಮಾಡುವುದು, ಸಂದೇಶ ರವಾನೆ, ಅಂತರ್ಜಾಲ ಬಳಕೆ ಹೀಗೆ ನಿಮ್ಮ ಕೈಯಲ್ಲಿರುವ ಫೋನ್ ಅನ್ನು ಬಳಸುತ್ತಿರುವಾಗ ಸಮಯ ಸರಿದು ಹೋಗುವುದು ನಮಗೆ ತಿಳಿಯುವುದೇ ಇಲ್ಲ. ಆದರೆ ಫೋನ್‌ನಲ್ಲಿ ನಾವು ಬಳಸುವ ಸೇವೆಗಳು ಒಮ್ಮೊಮ್ಮೆ ಫೋನ್‌ನಲ್ಲಿರುವ ದುಡ್ಡನ್ನು ನುಂಗಿ ನೀರು ಕುಡಿದು ಬಿಡುತ್ತವೆ. ತುರ್ತಾಗಿ ಫೋನ್‌ನ ಅವಶ್ಯಕತೆ ಬಿದ್ದ ಸಂದರ್ಭದಲ್ಲಿ ಫೋನ್‌ನಲ್ಲಿ ಹಣ ಇಲ್ಲದಿರುವುದು ನಮ್ಮನ್ನು ಫಜೀತಿಗೆ ಬೀಳಿಸುವುದು ಸಹಜ.

ಓದಿರಿ: ಅರಳು ಹುರಿದಂತೆ ಇಂಗ್ಲೀಷ್ ಮಾತನಾಡಲು ಈ ಅಪ್ಲಿಕೇಶನ್ ಸಾಕು

ಆದರೆ ಇದಕ್ಕೊಂದು ಪರಿಹಾರವನ್ನು ಕಂಡುಕೊಂಡು ಇಂದಿನ ಲೇಖನದಲ್ಲಿ ನಾವು ನಿಮಗೆ ಮಾರ್ಗದರ್ಶನವನ್ನು ನೀಡುತ್ತಿದ್ದೇವೆ. ಅದುವೇ ಉಚಿತ ರೀಚಾರ್ಜ್ ಮತ್ತು ಕೂಪನ್‌ಗಳನ್ನು ಪಡೆದುಕೊಳ್ಳುವ ಸದಾವಕಾಶ. ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅದು ನಿರ್ದೇಶಿಸುವ ಕೆಲವೊಂದು ಅಂಶಗಳನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ಫೋನ್‌ನಲ್ಲಿ ಉಚಿತ ರೀಚಾರ್ಜ್ ಆಗುತ್ತದೆ.

POKKT (ಪಾಕೆಟ್ ಮನಿ ಅಪ್ಲಿಕೇಶನ್)

POKKT (ಪಾಕೆಟ್ ಮನಿ ಅಪ್ಲಿಕೇಶನ್)

ಇದರ ಯೂಸರ್ ಇಂಟರ್ಫೇಸ್ ಅನ್ನು ಬಳಸಿ ಇತರ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಂಡಲ್ಲಿ, ಇದು ನಿಮಗೆ ಉಚಿತ ರೀಚಾರ್ಜ್ ಅನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಅರ್ನ್ ಟಾಕ್‌ಟೈಮ್ ಅಪ್ಲಿಕೇಶನ್

ಅರ್ನ್ ಟಾಕ್‌ಟೈಮ್ ಅಪ್ಲಿಕೇಶನ್

ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಇಲ್ಲವೇ ಸ್ನೇಹಿತರಿಗೆ ತಿಳಿಸುವುದು ಮೊದಲಾದ ಚಟುವಿಟಕೆಗಳನ್ನು ಮಾಡುವ ಮೂಲಕ ಈ ಅಪ್ಲಿಕೇಶನ್‌ನ ಸಹಾಯ ಪಡೆದುಕೊಳ್ಳಿ.
ಡೌನ್‌ಲೋಡ್ ಇಲ್ಲಿ ಮಾಡಿ

ಅಮೂಲ್ಯಮ್

ಅಮೂಲ್ಯಮ್

ಜಾಹೀರಾತು ವೀಕ್ಷಣೆಯ ಮೂಲಕ ಉಚಿತ ರೀಚಾರ್ಜ್ ಅನ್ನು ಒದಗಿಸಿರುವ ಪ್ರಥಮ ಕಂಪೆನಿಯಾಗಿದೆ ಅಮೂಲ್ಯಮ್.
ಡೌನ್‌ಲೋಡ್ ಇಲ್ಲಿ ಮಾಡಿ

ಫ್ರಿಬಿ ಆಪ್

ಫ್ರಿಬಿ ಆಪ್

ಇದೊಂದು ಹೊಸ ಉಚಿತ ರೀಚಾರ್ಜ್ ಅಪ್ಲಿಕೇಶನ್ ಆಗಿದ್ದು ಕೊಡುಗೆಗಳನ್ನು ಪೂರ್ಣಗೊಳಿಸುವ ಮೂಲಕ ಅದರ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ಇದು ಉಚಿತ ರೀಚಾರ್ಜ್ ಅನ್ನು ಒದಗಿಸುತ್ತದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಎಮ್‌ಸೆಂಟ್

ಎಮ್‌ಸೆಂಟ್

ಉಚಿತ ರೀಚಾರ್ಜ್ ಎಂಬ ಕ್ಯಾಟಗರಿಯ ಒಳಗೆ ಹೊಸದಾಗಿ ಬಂದಿರುವ ಅಪ್ಲಿಕೇಶನ್ ಇದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಫ್ರಿ ಪೈಸಾ ಅಪ್ಲಿಕೇಶನ್

ಫ್ರಿ ಪೈಸಾ ಅಪ್ಲಿಕೇಶನ್

ನಂಬಲಾರ್ಹ ಡೆವಲಪರ್ ಮೂಲಕ ಬಂದಿರುವ ಉಚಿತ ರೀಚಾರ್ಜ್ ಅಪ್ಲಿಕೇಶನ್ ಇದಾಗಿದೆ. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುವ ಮೂಲಕ ಅಂತೆಯೇ ಕೊಡುಗೆಗಳನ್ನು ಸಂಪೂರ್ಣಗೊಳಿಸುವ ಮೂಲಕ ಇದರ ಉಚಿತ ರೀಚಾರ್ಜ್ ಸೇವೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಕ್ಯಾಶ್ ಬೋಸ್ ಆಪ್

ಕ್ಯಾಶ್ ಬೋಸ್ ಆಪ್

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಸ್ನೇಹಿತರಿಗೆ ನೀವು ಇದರ ಬಗ್ಗೆ ತಿಳಿಸಿದಾಗ ಕೂಡ ಇದು ಹೆಚ್ಚುವರಿ ರೂ 10 ಅನ್ನು ನಿಮಗೆ ನೀಡುತ್ತದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಫ್ರಿ ಪ್ಲಸ್ ಆಪ್

ಫ್ರಿ ಪ್ಲಸ್ ಆಪ್

ಉಚಿತ ರೀಚಾರ್ಜ್‌ಗಳು ಮತ್ತು ಕೊಡುಗೆ ಕಾರ್ಡ್‌ಗಳನ್ನು ಪಡೆದುಕೊಳ್ಳುವುದಕ್ಕಾಗಿ ವಿಶೇಷವಾಗಿ ಲಾಂಚ್ ಮಾಡಿರುವ ಅಪ್ಲಿಕೇಶನ್ ಆಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಲಾಡೂ

ಲಾಡೂ

ನಿಮ್ಮ ಮೊಬೈಲ್‌ನಲ್ಲಿ ಉಚಿತ ರೀಚಾರ್ಜ್ ಅನ್ನು ಪಡೆದುಕೊಳ್ಳಲು ಸಹಾಯ ಮಾಡುವ ಅಪ್ಲಿಕೇಶನ್ ಇದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಮೊಜೋ ದ ಆಪ್

ಮೊಜೋ ದ ಆಪ್

ಉಚಿತ ರೀಚಾರ್ಜ್‌ ಅಪ್ಲಿಕೇಶನ್‌ಗೆ ಇದೊಂದು ಹೊಸ ಸೇರ್ಪಡೆ ಎಂದು ಹೇಳಬಹುದು. ಎಲ್ಲಾ ಉಚಿತ ರೀಚಾರ್ಜ್ ಅಪ್ಲಿಕೇಶನ್‌ನಾದ್ಯಂತ ಇದು ಹೆಚ್ಚು ಕೊಡುಗೆಗಳನ್ನು ಒದಗಿಸುತ್ತಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

Best Mobiles in India

English summary
In this article we can see 10 Best Free Recharge apps to get free Talktime/Recharges on your Mobile. These apps are considered as trusted and providing you free recharge within its service.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X