ಅಲ್ಪಸಂಖ್ಯಾತರ ಓಲೈಕೆಗಾಗಿ ಕೇಂದ್ರದಿಂದ ಉರ್ದು ಮೊಬೈಲ್!
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಯುಪಿಎ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ.ಉರ್ದು ಭಾಷೆಯಲ್ಲಿ ಸಂವಹನ ನಡೆಸಬಹುದಾದ ನೋಕಿಯಾ ಡ್ಯುಯಲ್ ಸಿಮ್ ಮೊಬೈಲ್‌ನ್ನು ಬಿಡುಗಡೆ ಮಾಡಿದ್ದು.ಈ ಐಡಿಯಾ ಕೊಟ್ಟದ್ದು ನಾನೇ ಎಂದು ಸರ್ಕಾರ ಹೇಳಿದೆ.
ಈ ಫೀಚರ್ ಫೋನನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್,ಭಾರತದಲ್ಲಿ 15 ಕೋಟಿ ಉರ್ದು ಭಾಷಿಕರಿದ್ದಾರೆ,ಈ ಭಾಷಿಕರಿಗಾಗಿ ಹೊಸ ಮೊಬೈಲ್‌ನ್ನು ಅಭಿವೃದ್ಧಿ ಪಡಿಸಿ ಎಂದು ಎಂಟು ತಿಂಗಳ ಹಿಂದೆ ನೋಕಿಯಾ ಕಂಪೆನಿಗೆ ಸಲಹೆ ನೀಡಿದ್ದೆ.ಈ ಸಲಹೆಯಂತೆ ನೋಕಿಯಾ ಕಂಪೆನಿಯವರು ಉರ್ದು ಭಾಷೆಯಲ್ಲಿರುವ ಮೊಬೈಲ್‌ನ್ನು ಅಭಿವೃದ್ಧಿ ಪಡಿಸಿದೆ ಎಂದು ಹೇಳುವ ಮೂಲಕ ಸಿಬಲ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಮೊಬೈಲ್‌ನಲ್ಲಿ ದೇಶದ 10 ಪ್ರಾದೇಶಿಕ ಭಾಷೆಯಲ್ಲಿ ಯೂಸರ್ ಇಂಟರ್‌ಫೇಸ್ ನೀಡುತ್ತಿರುವ ನೋಕಿಯಾ ಕಂಪೆನಿ ಇದುವರೆಗೆ ಹಿಂದಿ, ಗುಜರಾತಿ,ಮರಾಠಿ,ಒರಿಯಾ,ಬೆಂಗಾಳಿ,ಪಂಜಾಬಿ, ತಮಿಳು,ತೆಲುಗು,ಅಸ್ಸಾಮಿ,ಕನ್ನಡ ಭಾಷೆಯಲ್ಲಿ ತನ್ನ ಸೇವೆ ನೀಡುತ್ತಿತ್ತು.ಈಗ ಉರ್ದು ಭಾಷೆಯನ್ನು ಸೇರಿಸುವ ಮೂಲಕ ದೇಶದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಅತೀ ಹೆಚ್ಚು ಸೇವೆ ನೀಡುತ್ತಿರುವ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ನೋಕಿಯಾ ಉರ್ದು ಭಾಷೆಯ ಫೋನ್/ ನೋಕಿಯಾ 114
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
1.8- ಇಂಚಿನ ಎಲ್‌ಸಿಡಿ ಸ್ಕ್ರೀನ್(128 x 160 ಪಿಕ್ಸೆಲ್)
ಸೀರಿಸ್ 40 ಓಎಸ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಜಿಪಿಆರ್‌ಎಸ್,ಇಡಿಜಿಇ
ಎಫ್‌ಎಂ ರೇಡಿಯೋ
1020 mAh ಬ್ಯಾಟರಿ
ಬೆಲೆ: 2,499
ಕಡಿಮೆ ದರದ ಅಂದಾಜು ಆರು ಸಾವಿರದೊಳಗಿನ ಸ್ಮಾರ್ಟ್‌ಫೋನ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.ಈ ಹೇಳಿಕೆ ಬೆನ್ನಲ್ಲೇ ಈ ಫೀಚರ್ ಫೋನ್ ಬಿಡುಗಡೆಯಾಗಿದೆ.
ಈ ಮಧ್ಯೆ ಮೋದಿ ಹೆಸರಲ್ಲೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ.ಸ್ಮಾರ್ಟ್ ನಮೋ ಹೆಸರಿನ ಸ್ಮಾರ್ಟ್‌ಫೋನನ್ನು ಗುಜರಾತ್‌ನಲ್ಲಿರುವ ನರೇಂದ್ರ ಮೋದಿಯ ಅಭಿಮಾನಿ ಉದ್ಯಮಿಗಳು ತಯಾರಿಸಲು ಮುಂದಾಗುತ್ತಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ರಾಜಕೀಯ ನಾಯಕರು
ನೋಕಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಅಲ್ಪಸಂಖ್ಯಾತರ ಓಲೈಕೆಗಾಗಿ ಕೆಂದ್ರದಿಂದ ಉರ್ದು ಮೊಬೈಲ್!
ನೋಕಿಯಾ 114

ಅಲ್ಪಸಂಖ್ಯಾತರ ಓಲೈಕೆಗಾಗಿ ಕೆಂದ್ರದಿಂದ ಉರ್ದು ಮೊಬೈಲ್!
ನೋಕಿಯಾ 114

ಅಲ್ಪಸಂಖ್ಯಾತರ ಓಲೈಕೆಗಾಗಿ ಕೆಂದ್ರದಿಂದ ಉರ್ದು ಮೊಬೈಲ್!
ನೋಕಿಯಾ 114

ಅಲ್ಪಸಂಖ್ಯಾತರ ಓಲೈಕೆಗಾಗಿ ಕೆಂದ್ರದಿಂದ ಉರ್ದು ಮೊಬೈಲ್!
ನೋಕಿಯಾ 114


Click it and Unblock the Notifications




