ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು

Written By:

ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನರೇಂದ್ರ ಮೋದಿ ಹೆಸರಿನಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬರಲಿರುವ ಸುದ್ದಿಯನ್ನು ನೀವು ಓದಿರಬಹುದು.ನರೇಂದ್ರ ಮೋದಿ ಅಭಿಮಾನಿಗಳು ಈಗಾಗಲೇ ಸ್ಮಾರ್ಟ್ ನಮೋ ಹೆಸರಿನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ತರಲು ಮಂದಾಗಿದ್ದಾರೆ. ಗುಜರಾತ್‌ನಲ್ಲಿರುವ ನರೇಂದ್ರ ಮೋದಿಯ ಅಭಿಮಾನಿ ಉದ್ಯಮಿಗಳು ಈ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿದ್ದು,ಈಗಾಗಲೇ ಸಂಬಂಧ ನಮೋ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಗ್ಗೆ ಅಧಿಕೃತವಾಗಿ ಮಾಹಿತಿ ಪ್ರಕಟಿಸಿದೆ.

ಹೀಗಾಗಿ ಇದ್ದಕ್ಕಿದ್ದಂತೆ ಸ್ಮಾರ್ಟ್‌ ನಮೋ ಸ್ಮಾರ್ಟ್‌‌ಫೋನ್‌ ತಯಾರಿಸಲು ಏನು ಪ್ರೇರಣೆ? ಬೆಲೆ ಎಷ್ಟು? ಯಾವಾಗ ಮಾರುಕಟ್ಟೆಗೆ ಬರಲಿದೆ ಎಂದು ನೀವು ಕೇಳಬಹುದು. ಅದಕ್ಕಾಗಿ ಗಿಝ್‌ಬಾಟ್‌ ಇಲ್ಲಿ ಕೆಲವು ಮಾಹಿತಿ ತಂದಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ :ನರೇಂದ್ರ ಮೋದಿಗೆ ಭಾರೀ ಜನಪ್ರಿಯತೆ ತಂದುಕೊಟ್ಟ ಸೋಲಾರ್‌ ಪಾರ್ಕ್‌ ಬಗ್ಗೆ ತಿಳಿದಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೀನಾ ಪ್ರೇರಣೆಯಂತೆ!

ಚೀನಾ ಪ್ರೇರಣೆಯಂತೆ!

ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು


ಚೀನಾದ ಕೆಲವೊಂದು ಎಲೆಕ್ಟ್ರಾನಿಕ್‌ ಉತ್ಪನ್ನಗಳು ವಿಶೇಷವಾಗಿ ಎಂಪಿ3 ಪ್ಲೇಯರ್‌ಗಳು,ಅಲ್ಲಿನ ರಾಜಕೀಯ ನಾಯಕರ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿವೆ. ಇದೇ ಈ ಸ್ಮಾರ್ಟ್ ನಮೋ ಫೋನ್‌ ತಯಾರಿಸಲು ಪ್ರೇರಣೆಯಾಗಿದೆ ಎಂದು ಈ ಫೋನ್‌ ನಿರ್ಮಾಣಕ್ಕೆ ಕೈ ಹಾಕಿರುವ ಮೋದಿ ಅಭಿಮಾನಿ ಉದ್ಯಮಿಗಳು ಹೇಳುತ್ತಿದ್ದಾರೆ.

ಮೊಬೈಲ್‌ ಬೆಲೆ ಎಷ್ಟು?

ಮೊಬೈಲ್‌ ಬೆಲೆ ಎಷ್ಟು?

ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು


ಮಾಹಿತಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ಗೆ 16 ಸಾವಿರ ರೂಪಾಯಿ ನಿಗದಿ ಪಡಿಸುವ ಸಾಧ್ಯತೆ ಇದೆ. ಕಂಪೆನಿ ಯಾವುದೇ ಲಾಭಕ್ಕಾಗಿ ಇದನ್ನು ನಿರ್ಮಿಸದೇ ಕೇವಲ ಉತ್ಪಾದನ ವೆಚ್ಚದಲ್ಲಿ ಈ ಸ್ಮಾರ್ಟ್‌ಫೋನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಬಡವರಿಗೆ ಅಗ್ಗದ ಫೀಚರ್‌ ಫೋನ್‌!

ಬಡವರಿಗೆ ಅಗ್ಗದ ಫೀಚರ್‌ ಫೋನ್‌!

ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು


16 ಸಾವಿರ ರೂಪಾಯಿ ಸ್ಮಾರ್ಟ್‌ಫೋನ್‌ ಬಡವರಿಗೆ ಖರೀದಿಸಲು ಕಷ್ಟವಾದಲ್ಲಿ ಒಂದು ಸಾವಿರ ರೂಪಾಯಿಯ ಫೀಚರ್‌ ಫೋನ್‌ ತಯಾರಿಸಲು ಈ ಸ್ಮಾರ್ಟ್ ನಮೋ ತಯಾರಿಸುವ ಮೊಬೈಲ್‌ ಕಂಪೆನಿ ಮುಂದಾಗಿದೆ.

ಏನೆಲ್ಲ ಇರುತ್ತೆ ಈ ಸ್ಮಾರ್ಟ್‌ಫೋನಲ್ಲಿ?

ಏನೆಲ್ಲ ಇರುತ್ತೆ ಈ ಸ್ಮಾರ್ಟ್‌ಫೋನಲ್ಲಿ?

ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು


ನರೇಂದ್ರ ಮೋದಿ ಸಾಧನೆಗಳ ಮಾಹಿತಿಯಿರುವ ವೀಡಿಯೋ ಮತ್ತು ಫೋಟೋಗಳಿರುವ ಪ್ರಿ ಲೋಡೆಡ್‌ ಅಪ್ಲಿಕೇಶನ್‌ಗಳೊಂದಿಗೆ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ.

ಮಾರುಕಟ್ಟೆಗೆ ಬಿಡುಗಡೆ ಯಾವಾಗ?

ಮಾರುಕಟ್ಟೆಗೆ ಬಿಡುಗಡೆ ಯಾವಾಗ?

ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು

ಸದ್ಯದಲ್ಲೇ ಈ ಸ್ಮಾರ್ಟ್ ಬಿಡುಗಡೆಯಾಗಲಿದೆ ಎಂದು ತಮ್ಮ ವೆಬ್‌ಸೈಟ್‌‌ನಲ್ಲಿ ಸ್ಮಾರ್ಟ್‌ ನಮೋ ತಯಾರಿಸುವ ಕಂಪೆನಿ ಹೇಳಿಕೊಂಡಿದೆ. ಈಗಾಗಲೇ ವಿವಿಧ ರೀತಿಯ ನಮೋ ಮೊಬೈಲುಗಳ ವಿನ್ಯಾಸದ ಕೆಲಸ ಆರಂಭವಾಗಿದ್ದು ಈ ತಿಂಗಳ ಅಂತ್ಯಕ್ಕೆ ಈ ಕೆಲಸ ಮುಗಿಯಲಿದೆಯಂತೆ. ನಂತರ ಈ ವಿನ್ಯಾಸಕ್ಕೆ ಮೋದಿ ಒಪ್ಪಿಗೆ ಸೂಚಿಸಿದರೆ ಈ ಸ್ಮಾರ್ಟ್‌ಫೋನ್‌ ನಿರ್ಮಾ‌ಣದ ಕೆಲಸ ಆರಂಭವಾಗಲಿದೆ. ಇದಕ್ಕಾಗಿ ಗುಜರಾತ್‌‌ನಲ್ಲಿ ಹ್ಯಾಂಡ್ ಸೆಟ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ.

ಸ್ಮಾರ್ಟ್‌ ನಮೋ

ಸ್ಮಾರ್ಟ್‌ ನಮೋ

ಮೋದಿ ಸ್ಮಾರ್ಟ್‌ಫೋನ್‌‌ ಬಗ್ಗೆ ತಿಳಿಯಬೇಕಾದ ಆರು ಅಂಶಗಳು

ವಿಶೇಷತೆಗಳು:
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
1.5 Ghz ಕ್ವಾಡ್‌ ಕೋರ್‌ ಪ್ರೊಸೆಸರ್‍
13 ಎಂಪಿ ಹಿಂದುಗಡೆ ಕ್ಯಾಮೆರಾ
1 GB RAM + 16 GB ಆಂತರಿಕ ಮಮೋರಿ
2 GB RAM + 16 GB ಆಂತರಿಕ ಮೆಮೋರಿ
2 GB RAM + 32 GB ಆಂತರಿಕ ಮೆಮೋರಿ
2 GB RAM + 64 GB ಆಂತರಿಕ ಮೆಮೋರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot