ಮೊಟೊ G6 ಸ್ಮಾರ್ಟ್‌ಫೋನ್‌ ಲಾಂಚ್ ಆದ್ರೆ ಮಾರುಕಟ್ಟೆಯಲ್ಲಿ ಹೊಸ ಅಲೆ ಗ್ಯಾರೆಂಟಿ..!

|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಲಿನೊವೊ ಒಡೆತನದ ಮೊಟೊರೊಲಾ ಸ್ಮಾರ್ಟ್ ಫೋನ್ ತನ್ನದೇ ಅಭಿಮಾನಿ ಬಳಗವೊಂದನ್ನು ಹೊಂದಿದೆ. ಸ್ಟಾಕ್ ಆಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಮೊಟೊ ಶೀಘ್ರವೇ ತನ್ನ ಮೊಟೊ G6 ಸರಣಿ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ.

ಮೊಟೊ G6 ಸ್ಮಾರ್ಟ್‌ಫೋನ್‌ ಲಾಂಚ್ ಆದ್ರೆ ಮಾರುಕಟ್ಟೆಯಲ್ಲಿ ಹೊಸ ಅಲೆ ಗ್ಯಾರೆಂಟಿ..!

ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊ G5 ಸರಣಿ ಸ್ಮಾರ್ಟ್‌ ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಇದೇ ಹಿನ್ನಲೆಯಲ್ಲಿ ಹೊಸ ವರ್ಷದ ಅಂಗವಾಗಿ ಮೊಟೊ G6 ಸರಣಿಯ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹೊಸ ಅಲೆಯನ್ನು ಸೃಷ್ಟಿಸಲಿದೆ ಎನ್ನಲಾಗಿದೆ.

ಓದಿರಿ: ಅಂಬಾನಿ ಮಾಸ್ಟರ್ ಪ್ಲಾನ್: ಸೈಲೆಂಟಾಗಿ ಜಿಯೋ ಫೋನ್ ಬಳಕೆದಾರರಿಗೆ ಕೊಟ್ಟದೇನು..?

ಮೊಟೊ G6 ಸ್ಮಾರ್ಟ್ ಫೋನ್ ಸರಣಿ:

ಮೊಟೊ G6 ಸ್ಮಾರ್ಟ್ ಫೋನ್ ಸರಣಿ:

ಮೊಟೊ G ಸರಣಿಯ ಸ್ಮಾರ್ಟ್ ಫೋನ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿ ಹಾಕಿದ್ದು, ಸದ್ಯ ಟ್ರೆಂಡ್ ನಲ್ಲಿ ಇರುವ ಎಲ್ಲಾ ವಿಶೇಷತೆಗಳು ಈ ಸ್ಮಾರ್ಟ್ ಫೋನ್‌ನಲ್ಲಿ ಕಾಣಬಹುದಾಗಿದೆ. ಒಟ್ಟು ಮೂರು ಮಾದರಿಯಲ್ಲಿ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಫೋನ್ ಪವರ್ ಫುಲ್ ಪ್ಯಾಕ್ ಆಗಿರಲಿದೆ.

ಮೊಟೊ G6 ಸ್ಮಾರ್ಟ್ ಫೋನ್:

ಮೊಟೊ G6 ಸ್ಮಾರ್ಟ್ ಫೋನ್:

ಮೊಟೊ G6 ಸ್ಮಾರ್ಟ್ ಫೋನ್ 5.7 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 18:9 ಅನುಪಾತದ ಡಿಸ್‌ಪ್ಲೇಯಾಗಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿಯೇ ನೀಡಲಾಗಿದೆ. ಈ ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 450ಯಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 3/4 GB RAM ಮತ್ತು 32/64GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, ಹಿಂಭಾಗದಲ್ಲಿ 12MP+2MP ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂಡಿದ್ದು, ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. 3000mAh ಬ್ಯಾಟರಿ ಸಹ ಇದರಲ್ಲಿದೆ.

ಮೊಟೊ G6 ಪ್ಲಸ್ ಸ್ಮಾರ್ಟ್ ಫೋನ್:

ಮೊಟೊ G6 ಪ್ಲಸ್ ಸ್ಮಾರ್ಟ್ ಫೋನ್:

ಮೊಟೊ G6 ಪ್ಲಸ್ ಸ್ಮಾರ್ಟ್ ಫೋನ್ 5.93 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 18:9 ಅನುಪಾತದ ಡಿಸ್‌ಪ್ಲೇಯಾಗಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿಯೇ ನೀಡಲಾಗಿದೆ. ಈ ಸ್ಮಾರ್ಟ್ ಫೋನ್ ಸ್ನಾಪ್ ಡ್ರಾಗನ್ 630 ಯಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 3/4/6 GB RAM ಮತ್ತು 32/64GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, ಹಿಂಭಾಗದಲ್ಲಿ 12MP+2MP ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂಡಿದ್ದು, ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. 3200mAh ಬ್ಯಾಟರಿ ಸಹ ಇದರಲ್ಲಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಮೊಟೊ G6 ಪ್ಲೇ ಸ್ಮಾರ್ಟ್ ಫೋನ್:

ಮೊಟೊ G6 ಪ್ಲೇ ಸ್ಮಾರ್ಟ್ ಫೋನ್:

ಮೊಟೊ G6 ಪ್ಲೇ ಸ್ಮಾರ್ಟ್ ಫೋನ್ 5.7 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 18:9 ಅನುಪಾತದ ಡಿಸ್‌ಪ್ಲೇಯಾಗಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದಲ್ಲಿ ನೀಡಲಾಗಿದೆ. 4000mAh ಬ್ಯಾಟರಿ ಸಹ ಇದರಲ್ಲಿದೆ.

Best Mobiles in India

English summary
Upcoming Motorola Moto G6. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X